ಬೀದರ್‌ | ವಚನಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ : ಡಾ. ಗಂಗಾಬಿಕಾ ಪಾಟೀಲ್

Date:

Advertisements

ಮಕ್ಕಳ ಮನಸ್ಸು ಹಸಿಗೋಡೆಯಂತೆ ಅವರಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಸಂಸ್ಕಾರ ಬಿತ್ತಿದರೆ ಸಮಾಜದ ಶ್ರೇಷ್ಠ ವ್ಯಕ್ತಿಗಳಾಗಿ ರೂಪಗೊಳ್ಳಲು ಸಾಧ್ಯ ಎಂದು ಬಸವ ಸೇವಾ ಪ್ರತಿಷ್ಠಾನ ಬಸವಗಿರಿಯ ಅಧ್ಯಕ್ಷರಾದ ಡಾ.ಗಂಗಾಂಬಿಕಾ ಪಾಟೀಲ್ ನುಡಿದರು.

‌ಬೀದರ್ ನಗರದ ಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನ ವತಿಯಿಂದ ನಡೆದ ಶರಣ ಸಂಗಮ ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರ ಜಯಂತ್ಯುತ್ಸವ, ಮಕ್ಕಳ ಸಮಾವೇಶ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡು ಮಾತನಾಡಿದರು. ‌

ʼಮಕ್ಕಳಲ್ಲಿ ಬಸವಾದಿ ಶರಣರ ವಚನಗಳ ಮೌಲ್ಯಗಳನ್ನು ಮಕ್ಕಳ ಬಿತ್ತಿ ಅವರ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ ನೀಡಬೇಕು. ಮಕ್ಕಳಲ್ಲಿ ಅದ್ಬುತವಾದ ಶಕ್ತಿಯಿರುತ್ತದೆ. ಅವರನ್ನು ಕಡೆಗಣಿಸದೆ ಅವರಿಗೆ ಉತ್ತಮ ಸಂಸ್ಕಾರ ನೀಡಬೇಕು. ಇಂದಿನ ಮಕ್ಕಳೇ ನಾಳಿನ ಶರಣರಾಗುತ್ತಾರೆ. ನಮ್ಮನ್ನು ನೋಡಿ ಮಕ್ಕಳು ಅನುಕರಿಸುವುದರಿಂದ ನಮ್ಮ ನಡೆ-ನುಡಿ ಒಂದಾಗಿರಬೇಕುʼ ಎಂದರು.

Advertisements

ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಮಕ್ಕಳ ಪರಿಷತ್ತು ಅಧ್ಯಕ್ಷೆ ಪಾರ್ವತಿ ಸೋನಾರೆ ಮಾತನಾಡಿ, ʼಮಕ್ಕಳಲ್ಲಿ ಅದ್ಭುತವಾದ ಪ್ರತಿಭೆ ಮತ್ತು ಶಕ್ತಿಯಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯಬೇಕು. ಎಳೆಯ ಮಕ್ಕಳಿಗೆ ವಚನಗಳನ್ನು ಮುಟ್ಟಿಸುವಂತಹ ಇಂತಹ ಕಾರ್ಯಗಳು ಶ್ಲಾಘನೀಯʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೀದರ ಸರಕಾರಿ ಬಾಲಕರ ಬಾಲಮಂದಿರದ ಅಧಿಕ್ಷಕರಾದ ರೂಪಾ ಕೋಟೆಗೌಡರ್ ಉದ್ಘಾಟಿಸಿ ಮಾತನಾಡಿ, ʼಸಂಸ್ಕಾರಯುತ ಮಕ್ಕಳೇ ದೇಶದ ನಿಜವಾದ ಆಸ್ತಿ, ಜೀವನ ಸಾರ್ಥಕವಾಗಲು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ವಚನಗಳು ಮಾನವೀಯ ಮೌಲ್ಯಗಳ ಆಗರವಾಗಿವೆʼ ಎಂದರು.

ಪಾಪನಾಶ ದೇವಸ್ಥಾನ ಮಂದಿರದ ಅಧ್ಯಕ್ಷ ಚಂದ್ರಕಾಂತ ಶೆಟಕಾರ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ಬಸವಣಪ್ಪಾ ನೇಳಗೆ, ಅಶೋಕ ಮಾನಕಾರಿ ಉಪಸ್ಥಿತರಿದ್ದರು.

ಮಕ್ಕಳಾದ ಪ್ರಿಶಾ ಕ್ಯಾಸ, ದಕ್ಷೇಶ ಸಾವಲೆ ಧ್ವಜಾರೋಹಣಗೈದರು. ಬಸವಕಿರಣ, ಅರುಣ ಗುರುಪೂಜೆ ನಡೆಸಿಕೊಟ್ಟರು,
ಜಗದೇವಿ ಸಂಜುಕುಮಾರ ಚಾಂಬಳೆ ಭಕ್ತಿ ದಾಸೋಹಗೈದರು. ನೇಹಾ ವೀರಶೆಟ್ಟಿ ನಿರೂಪಿಸಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬಾಲಕಿ ಮೇಲೆ ಅತ್ಯಾಚಾರ; ವೃದ್ಧನ ಬಂಧನ

ಗಮನ ಸೆಳೆದ ಮಕ್ಕಳ ಮಾತು: ಮಕ್ಕಳು ಅಷ್ಠಾವರಣ, ಪಂಚಾಚಾರ, ಷಟಸ್ಥಲ, ಶರಣ ಚರಿತ್ರೆ ಹಾಗೂ ಅನುಭವ ಮಂಟಪ ಕುರಿತು ಮಾತನಾಡಿ ಸಭಿಕರ ಗಮನ ಸೆಳೆದರು. ಮಕ್ಕಳಿಂದಲೇ ವಚನ ಪಠಣ, ವಚನ ನೃತ್ಯಗಳು ಜರುಗಿದವು. ಪ್ರೊ. ಸಂಗ್ರಾಮ ಎಂಗಳೆ ಅವರ ನಿರ್ದೇಶನದಲ್ಲಿ ಮಕ್ಕಳಿಂದ ಮೂಡಿ ಬಂದ ʼಭೂಮಿತಾಯಿʼ ನಾಟಕ ಗಮನ ಸೆಳೆಯಿತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

Download Eedina App Android / iOS

X