ಕನ್ನಡ ಭಾಷೆ, ಅತ್ಯಂತ ಪ್ರಾಚೀನವಾಗಿರುವ ಭಾಷೆಯಾಗಿದೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಕನ್ನಡ ಭಾಷೆಗೆ ದೇವಭಾಷೆಯ ಪ್ರಾಶಸ್ತೆಯನ್ನು ನೀಡಿದರು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಭಾಲ್ಕಿ ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ, 842ನೆಯ ಶಿವಾನುಭವ ಗೋಷ್ಠಿ ಮತ್ತು ಶರಣೆ ನೀಲಾಂಬಿಕಾ ಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ʼಕನ್ನಡಗಳಲ್ಲಿಯೇ ವಚನಗಳು ಬರೆಯುವ ಮೂಲಕ ಕನ್ನಡ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸಿದ್ದರು. ಇಂದು ನಾವು ಕನ್ನಡ ಭಾಷೆ ಉಳಿಸಿ ಬೆಳೆಸಬೇಕಾಗಿದೆ. ಕನ್ನಡ ನಮ್ಮ ಮಾತೃಭಾಷೆಯಾಗಿದೆ. ಮಾತೃಭಾಷೆಯಲ್ಲಿಯೇ ನಮಗೆ ಕನಸುಗಳನ್ನು ಬೀಳುತ್ತವೆ. ಅದನ್ನು
ನೆನೆಪು ಮಾಡಲು ಮಾತೃ ಭಾಷೆಯ ಶಿಕ್ಷಣ ಅವಶ್ಯಕವಾದದ್ದು. ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆದು ರಾಜ್ಯ ರಾಷ್ಟ್ರಮಟ್ಟದ ಸಾಧನೆ ಮಾಡಬಹುದು ಎಂಬುದಕ್ಕೆ ಅನೇಕ ಉದಾಹರಣೆಗಳು ಇವೆʼ ಎಂದು ನುಡಿದರು.
ʼಡಾ.ಬಸವಲಿಂಗ ಪಟ್ಟದ್ದೇವರು ಸ್ಥಾಪಿಸಿದ ಚನ್ನಬಸವೇಶ್ವರ ಗುರುಕುಲದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಆ ದಿಸೆಯಲ್ಲಿ ನಾವು ಮನೆಯಲ್ಲಿ ಮನಸ್ಸಿನಲ್ಲಿ ಕನ್ನಡದ ಪ್ರೀತಿ ಬೆಳೆಸಬೇಕು. ಅಂದರೆ ನಮ್ಮ ಸಾಹಿತ್ಯ ಸಂಸ್ಕೃತಿ ಪರಂಪರೆ ಉಳಿದು ಬೆಳೆಯುತ್ತದೆʼ ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೀರಾಚಂದ್ ವಾಘಮಾರೆ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ವೇಳೆ ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೀರಾಚಂದ ವಾಘಮಾರೆ, ನರಸಿಂಹಲು, ಶ್ರೀಕಾಂತ ಬಿರಾದಾರ್ ಅವರನ್ನು ಶ್ರೀಮಠದ ವತಿಯಿಂದ ಸತ್ಕರಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ ಅಧ್ಯಕ್ಷತೆ ವಹಿಸಿದ್ದರು. ಮಲ್ಲಮ್ಮ ಆರ್.ಪಾಟೀಲ್ ಅನುಭಾವ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಚನಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪ್ರೇರಣೆ : ಡಾ. ಗಂಗಾಬಿಕಾ ಪಾಟೀಲ್
ಕನ್ನಡಪರ ಸಂಘಟನೆಗಳ ಮುಖಂಡರಾದ ಜೈರಾಜ ಕೊಳ್ಳಾ, ಸಂತೋಷ ಬಿ.ಜಿ.ಪಾಟೀಲ, ಸಂಗಮೇಶ ಗುಮ್ಮೆ, ಸಂಜುಕುಮಾರ ನಾವದಗಿ, ಸಂತೋಷ ನಾಟೇಕರ್, ರಾಜಕುಮಾರ ಡಾವರಗಾಂವೆ, ಬಸವರಾಜ ಸಂಪಂಗೆ, ಅನೀಲ ಹಾಲಪುರ್ಗೆ, ಮಾಳಸ್ಕಾಂತ ವಾಘೆ, ಅಕ್ಷಯ ಸೋಮನಾಥ ಮುದ್ದಾ, ಚಂದ್ರಕಲಾ ಪ್ರಭು ಡಿಗ್ಗೆ, ಕೈಲಾಸ ಪಾಟೀಲ್ ಉಪಸ್ಥಿತರಿದ್ದರು. ಗುರುಪ್ರಸಾದ ಶಾಲೆಯ ಮಕ್ಕಳು ನಾಡಗೀತೆ ಹಾಡಿದರು. ದೀಪಕ ಠಮಕೆ ನಿರೂಪಿಸಿದರು.