ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಬಗರ್ ಹುಕುಂ ಭೂಮಿ ಮಂಜೂರಾತಿ ಸಮಿತಿಗೆ ತೀರ್ಥಳ್ಳಿಯ ಹಿರಿಯ ಕಾಂಗ್ರೆಸ್ಸಿಗರು ತಾಲೂಕಿನಲ್ಲಿ ಮನೆ ಮಾತಾಗಿರುವ ಬಿ.ಕೆ .ವಾದಿರಾಜ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಇವರೊಂದಿಗೆ ತೀರ್ಥಹಳ್ಳಿಯ ನವೀನ್ ಕುಮಾರ್ ಮತ್ತು ಮೀನಾಕ್ಷಿ ರಾಮಪ್ಪ ರವರನ್ನು ಸಹ ನಾಮಕರಣ ಮಾಡಿದೆ. ಸಮಿತಿಯ ಅಧ್ಯಕ್ಷರಾಗಿ ಶಾಸಕ, ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಇರಲಿದ್ದಾರೆ.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಅಪ್ರಾಪ್ತ ಬಾಲಕಿಯನ್ನು ಚುಡಾಯಿಸಿದ್ದ ಐವರು ಆರೋಪಿಗಳ ಬಂಧನ
ತಾಲೂಕು ತಹಸೀಲ್ದಾರ್ ಅವರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ. ತೀರ್ಥಹಳ್ಳಿಯಲ್ಲಿ ಅನೇಕ ವರ್ಷಗಳಿಂದ ನೂರಾರು ಬಗರ್ ಹುಕುಂ ಅರ್ಜಿಗಳು ಮಂಜುರಾತಿಗೆ ಬಾಕಿಯಿದ್ದು, ಮುಂದಿನ ದಿನಗಳಲ್ಲಿ ಮಂಜೂರಾತಿ ಸಿಗಬಹುದೆಂಬ ರೈತರು ನಿರೀಕ್ಷೆಯಲ್ಲಿದ್ದಾರೆ.
ವರದಿ: ಲಿಯೋ ಅರೋಜ
