ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಮತ್ತೆ ಹೆಚ್ಚಾಗಿದ್ದು, ನಿರಂತರ ಸಾವು ನೋವುಗಳು ಸಂಭವಿಸುತ್ತಿದೆ. ಶನಿವಾರ ಸಿಎಂ ಬಿರೇನ್ ಸಿಂಗ್ ನಿವಾಸಕ್ಕೆ ಪ್ರತಿಭಟನಕಾರರು ದಾಳಿ ನಡೆಸಲು ಯತ್ನಿಸಿದ್ದಾರೆ. ಬಳಿಕ ಮಣಿಪುರದಲ್ಲಿ ಬಂಡುಕೋರರ ವಿರುದ್ದ ಕ್ರಮಕೈಗೊಳ್ಳಲು ಮುಖ್ಯಮಂತ್ರಿ ಬಿರೇನ್ ಸಿಂಗ್ ಸರ್ಕಾರಕ್ಕೆ 24 ಗಂಟೆಗಳ ಅಂತಿಮ ಗಡುವು ನೀಡಿದ್ದಾರೆ.
ಇತ್ತೀಚೆಗೆ ಬಂಡುಕೋರರು ಸಿಆರ್‌ಪಿಎಫ್ ಶಿಬಿರ ಮತ್ತು ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದ್ದರು. ಇದಾದ ಬಳಿಕ ಸಿಆರ್‌ಪಿಎಫ್ ಮತ್ತು ಮಣಿಪುರ ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿ ನಡೆದಿತ್ತು. 10 ಕುಕಿ ಬಂಡುಕೋರರ ಹತ್ಯೆಯಾಗಿತ್ತು. ಈ ವೇಳೆ ನಿರಾಶ್ರಿತರ ಕೇಂದ್ರದಿಂದ ಆರು ಮಂದಿ ನಾಪತ್ತೆಯಾಗಿದ್ದರು.
ಜಿರಿಬಾಮ್ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಆರು ಜನರ ಮೃತದೇಹಗಳು ಜೀರಿ ನದಿಯಲ್ಲಿ ಪತ್ತೆಯಾಗಿದೆ. ಇದಾದ ಬಳಿಕ ಮಣಿಪುರದಲ್ಲಿ ಹಿಂಸಾಚಾರ, ಪ್ರತಿಭಟನೆಗಳು ಮತ್ತಷ್ಟು ಹೆಚ್ಚಾಗಿದೆ. ಪ್ರತಿಭಟನಾಕಾರರು ಸಿಎಂ ಸಿವಾಸ ಸೇರಿದಂತೆ ಹಲವು ಸಚಿವರುಗಳು, ಶಾಸಕರಗಳ ನಿವಾಸಕ್ಕೆ ದಾಳಿ ಯತ್ನ ಮಾಡಿದ್ದಾರೆ. ಇದಾದ ಬಳಿಕ ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿದೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ | ಸಚಿವರು, ಶಾಸಕರ ನಿವಾಸಕ್ಕೆ ದಾಳಿ; ಕರ್ಫ್ಯೂ ಜಾರಿ, ಇಂಟರ್‌ನೆಟ್ ಸ್ಥಗಿತ
ಶನಿವಾರ ಮೂವರು ರಾಜ್ಯ ಸಚಿವರು ಮತ್ತು ಆರು ಶಾಸಕರ ನಿವಾಸಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಸಿಂಗ್ ಅವರ ಅಳಿಯ, ಬಿಜೆಪಿ ಶಾಸಕ ಆರ್‌ಕೆ ಇಮೋ ಸಿಂಗ್ ಮನೆಗೂ ದಾಳಿ ನಡೆದಿದೆ. ಪ್ರತಿಭಟನಾಕಾರರು ಶಾಸಕರ ಮನೆಯನ್ನು ಧ್ವಂಸಗೊಳಿಸಿದ್ದು, ಬೆಂಕಿ ಹಚ್ಚಿದ್ದಾರೆ.
ಪೌರಾಡಳಿತ ಸಚಿವ ವೈ ಖೇಮಚಂದ್ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಎಲ್ ಸುಸಿಂದ್ರೋ ಸಿಂಗ್ ಅವರ ಮನೆಗಳ ಮೇಲೆ ಇದೇ ರೀತಿಯ ದಾಳಿಗಳು ನಡೆದಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸಪಂ ರಂಜನ್ ಅವರ ನಿವಾಸಕ್ಕೂ ಮುತ್ತಿಗೆ ಹಾಕಲಾಗಿದೆ. ರಾಜ್ಯ ಸರ್ಕಾರ ಬೇಡಿಕೆ ಪೂರೈಸದಿದ್ದರೆ ರಾಜೀನಾಮೆ ನೀಡುವುದಾಗಿ ರಂಜನ್ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಈಗಾಗಲೇ ಮಣಿಪುರದ ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಹಾಗೆಯೇ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ.
