ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ಕೋಡಿಹಳ್ಳಿ ಪಾಳ್ಯದಲ್ಲಿ ಇಂದು(ನ.17) ಟ್ರಾಕ್ಟರ್ ಹಳ್ಳಕ್ಕೆ ಉರುಳಿ ತಂದೆ ಮತ್ತು ಮಗ ಮೃತಪಟ್ಟಿದ್ದಾರೆ.
ಜಾಣಗೆರೆ ಗ್ರಾಮದ ಶಿವರಾಮಯ್ಯ(52) ಹಾಗೂ ಅವರ ಪುತ್ರ ಹರೀಶ್ (21) ಮೃತರು. ಶಿವರಾಮಯ್ಯ ಅವರು ಸಾಹಿತಿ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಜಾಣಗೆರೆ ವೆಂಕಟರಾಮಯ್ಯ ಅವರ ಸಹೋದರ.
ಟ್ರ್ಯಾಕ್ಟರ್‌ನಲ್ಲಿ ಅಡಿಕೆ ಕಾಯಿ ತುಂಬಿಕೊಂಡು ಬರುವಾಗ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕದಲ್ಲಿ ಟ್ರಂಪ್ ಆಡಳಿತ; ಜಾಗರೂಕವಾಗಿರಬೇಕಿದೆ ಭಾರತ!
