ದೆಹಲಿ ಸಾರಿಗೆ, ಪರಿಸರ ಸಚಿವ ಮತ್ತು ಎಎಪಿ ನಾಯಕ ಕೈಲಾಶ್ ಗಹ್ಲೋಟ್ ಆಮ್ ಆದ್ಮಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಸಚಿವ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಇದಾದ ಬೆನ್ನಲ್ಲೇ ಬಿಜೆಪಿ ಮಾಜಿ ಶಾಸಕ ಅನಿಲ್ ಝಾ ಎಎಪಿ ಸೇರ್ಪಡೆಗೊಂಡಿದ್ದಾರೆ.
ದೆಹಲಿ ಮಾಜಿ ಮುಖ್ಯಮಂತ್ರಿ, ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಅನಿಲ್ ಝಾ ಅಧಿಕೃತವಾಗಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರಿದ್ದಾರೆ.
ಇದನ್ನು ಓದಿದ್ದೀರಾ? ಬ್ರೇಕಿಂಗ್ ನ್ಯೂಸ್ | ಎಎಪಿಗೆ, ದೆಹಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೈಲಾಶ್ ಗಹ್ಲೋಟ್
ಅನಿಲ್ ಝಾ ವಾಯುವ್ಯ ದೆಹಲಿಯ ಕಿರಾರಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಬಿಜೆಪಿಯ ಟಿಕೆಟ್ ಪಡೆದು ಶಾಸಕರಾಗಿದ್ದರು. ಎಎಪಿಗೆ ಸೇರಿದ ಅನಿಲ್ ಬಿಜೆಪಿಯೊಂದಿಗಿನ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಬಿಜೆಪಿಯ ನಾಯಕತ್ವ ಮತ್ತು ನೀತಿಗಳ ಬಗ್ಗೆ ಅಸಮಾಧಾನವು ನನ್ನ ಈ ಬದಲಾವಣೆ ಕಾರಣ ಎಂದು ಎಎಪಿ ಸೇರಿದ ಬಳಿಕ ಅನಿಲ್ ಝಾ ಹೇಳಿಕೊಂಡಿದ್ದಾರೆ.
श्री अनिल झा जी का आम आदमी पार्टी परिवार में स्वागत है। AAP National Convenor @ArvindKejriwal LIVE https://t.co/plQ8klkO2M
— AAP (@AamAadmiParty) November 17, 2024
ದೆಹಲಿಯಲ್ಲಿ ಮುಂದಿನ ವರ್ಷವೇ ಚುನಾವಣೆ ನಡೆಯಲಿದೆ. ಆದ್ದರಿಂದ ಈ ರಾಜಕೀಯ ಬೆಳವಣಿಗೆಗಳು ಮತ್ತಷ್ಟು ಮಹತ್ವವನ್ನು ಪಡೆದಿದೆ. ಅನಿಲ್ ಝಾ ಎಎಪಿ ಸೇರಿರುವುದರಿಂದ ಬಿಜೆಪಿಯ ಸಾಂಪ್ರದಾಯಿಕ ಭದ್ರಕೋಟೆಯಾಗಿರುವ ಕಿರಾರಿಯಲ್ಲಿ ಬಲವನ್ನು ಹೆಚ್ಚಿಸಲಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅರವಿಂದ್ ಕೇಜ್ರಿವಾಲ್, “ನಾನು ಅನಿಲ್ ಝಾ ಅವರನ್ನು ಎಎಪಿಗೆ ಸ್ವಾಗತಿಸುತ್ತೇನೆ. ಅವರು ಪೂರ್ವಾಂಚಲ್ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ವರ್ಷಗಳ ಕಾಲ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಈ ಸಮುದಾಯದ ಅಗತ್ಯಗಳನ್ನು ಕಡೆಗಣಿಸಿವೆ. ನಾನು ಮುಖ್ಯಮಂತ್ರಿಯಾದಾಗ ಈ ಕಾಲೋನಿಗಳ ಜನರ ಪರಿಸ್ಥಿತಿ ಸುಧಾರಿಸಲು ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸಿದ್ದೇವೆ” ಎಂದು ಹೇಳಿದರು.
