ಬೆಳಗಾವಿ ಜಿಲ್ಲೆಯ ವಡ್ಡರವಾಡಿಯಲ್ಲಿ ಅರಬೆತ್ತಲೆಗೊಳಿಸಿ ಮಹಿಳೆಗೆ ಹಲ್ಲೆಮಾಡಿದ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ತ್ರಸ್ತ ಮಹಿಳೆಯ ಮನೆಗೆ ಶಾಸಕ ರಾಜು ಶೇಠ್ ಮತ್ತು ಪೋಲಿಸ್ ಆಯುಕ್ತ ಯಡಾಮಾರ್ಟಿನ್ ಮಾರ್ಬನ್ಯಾಂಗ್ ಭೇಟಿ ನೀಡಿ ಮಹಿಳೆಗೆ ಸಾಂತ್ವನ ಹೇಳಿದ್ದಾರೆ.
ಶಾಸಕ ರಾಜು ಸೇಠ್ ಸಂತ್ರಸ್ತ ಮಹಿಳೆಯ ಮನೆಗೆ ಭೇಟಿ ನೀಡಿದಾಗ ಸಂತ್ರಸ್ತ ಮಹಿಳೆಯರು ಕಣ್ಣೀರು ಹಾಕಿದ್ದು, “ಕೆಲವು ಜನರು ಸೇರಿಕೊಂಡು ಇಲ್ಲಸಲ್ಲದ ಆರೋಪ ಮಾಡುತ್ತಾರೆ ನಮ್ಮಗೆ ರಕ್ಷಣೆ ನೀಡಿ” ಎಂದು ತನ್ನ ಮಕ್ಕಳ ಜತೆಗೆ ಕಣ್ಣೀರು ಹಾಕಿದ್ದಾರೆ.
ಶಾಸಕ ರಾಜು ಶೇಠ್ ಸಾಂತ್ವನ ಹೇಳಿದ್ದು, “ಘಟನೆ ಕುರಿತು ಮಾಹಿತಿ ಪಡೆದಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ಸಂತ್ರಸ್ತ ಕುಟುಂಬಕ್ಕೆ ಪೊಲೀಸ್ ರಕ್ಷಣೆ ನೀಡಲು ಸೂಚಿಸಿದ್ದೇನೆ” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು l ಡಾ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ತುಪ್ಪುರು ಗ್ರಾಮಸ್ಥರ ಧರಣಿ ಸತ್ಯಾಗ್ರಹ
ಸಂತ್ರಸ್ತ ಮಹಿಳೆಯ ಮನೆಗೆ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಭೇಟಿ ನೀಡಿ ಸಾಂತ್ವನ ಹೇಳಿದ್ದು, “ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದ ವರದಿ ನೀಡುವಂತೆ ಡಿಸಿಪಿಗೆ ಮಾಹಿತಿ ನೀಡಿದ್ದೆನೆ. ದೂರು ತೆಗೆದುಕೊಳ್ಳಲು ವಿಳಂಬ ಮಾಡಿರುವ ಮತ್ತು ದೂರು ವಾಪಸ್ ಪಡೆಯಲು ಒತ್ತಡ ಹಾಕಿರುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ” ಎಂದು ತಿಳಿಸಿದ್ದಾರೆ.