ಬಣಗಳನ್ನು ಒಗ್ಗೂಡಿಸಿ ರೈತ ಸಂಘವನ್ನು ಬಲವರ್ಧನೆಗೊಳಿಸಿ. ತಾತ್ವಿಕ ಭಿನ್ನಾಭಿಪ್ರಾಯದ ಕಾರಣದಿಂದ ಹಲವು ಬಣಗಳಾಗಿ ಹಂಚಿ ಹೋಗಿರುವ ರೈತ ಸಂಘಟನೆಯನ್ನು ಏಕೀಕರಣಗೊಳಿಸಿ, ಒಗ್ಗೂಡಿಸಿ ಒಂದೇ ಬ್ಯಾನರ್‌ನಡಿ ರೈತಪರ ಹೋರಾಟಗಳನ್ನು ಮಾಡಿ ರೈತರ ಹಿತ ಕಾಯೋಣ ಎಂದು ಪಚ್ಚೆ ನಂಜುಂಡಸ್ವಾಮಿ ಹೇಳಿದರು.
ಮಂಡ್ಯ ಜಿಲ್ಲೆಯ ಮದ್ದೂರಿನ ಭಾರತಿನಗರದಲ್ಲಿ ನಡೆದ ಕರ್ನಾಟಕ ರಾಜ್ಯ ರೈತಸಂಘದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

“ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ರಾಜ್ಯ ಮಟ್ಟದ ಏಕೀಕೃತ ಕರ್ನಾಟಕ ರಾಜ್ಯ ರೈತ ಸಂಘದ ಸಭೆಗೆ ಆಗಮಿಸಿ ತಮ್ಮ ಬೆಂಬಲ ವ್ಯಕ್ತಪಡಿಸಿದ್ದು, ಡಿಸೆಂಬರ್ 23ರ ರೈತ ದಿನಾಚರಣೆ ಹಾಗೂ ಪುಟ್ಟಣ್ಣಯ್ಯ ಹುಟ್ಟು ಹಬ್ಬದ ದಿನ ರಾಜ್ಯದ ಎಲ್ಲ ರೈತ ಸಂಘಟನೆಗಳ ಗುಂಪುಗಳನ್ನು ಒಗ್ಗೂಡಿಸಿ ಸಭೆ ನಡೆಸುವುದಾಗಿ ಹೇಳಿದ್ದಾರೆ” ಎಂದರು.
ಇದಕ್ಕೆ ಭಾರತಿನಗರ ವೃತ್ತ ರೈತಸಂಘ ಕೂಡ ಏಕೀಕೃತ ರೈತ ಸಂಘದ ಭಾಗವಾಗುವ ಕುರಿತು ಸಭೆ ನಿರ್ಣಯ ಕೈಗೊಂಡಿತು.
ಇದನ್ನು ಓದಿದ್ದೀರಾ? ಮಂಡ್ಯ | ದಕ್ಷಿಣ ಭಾರತಕ್ಕೆ ಸುಪ್ರೀಂ ಕೋರ್ಟ್ ಬೆಂಚ್ ಬೇಕು: ಅಭಿಗೌಡ
ಸಭೆಯಲ್ಲಿ ಹಿರಿಯ ರೈತ ಮುಖಂಡರಾದ ಯರಗನಹಳ್ಳಿ ರಾಮಕೃಷ್ಣ, ರಾಂಪುರ ಸೀತಾರಾಮು, ಮಂಡ್ಯದ ಮರಿಚನ್ನೇಗೌಡ, ಮೈಸೂರು ಜಿಲ್ಲಾ ರೈತ ಸಂಘದ ವಿದ್ಯಾ ಸಾಗರ್, ಕುರಿಕೆಂಪನದೊಡ್ಡಿ ರಾಮಲಿಂಗು, ಕ್ಯಾತಘಟ್ಟ ಬಿಳಿಗೌಡ, ಪಣ್ಣೆದೊಡ್ಡಿ ವೆಂಕಟೇಶ್, ಸೊಳ್ಳೆಪುರ ಸೊ ಶಿ ಪ್ರಕಾಶ್, ಪ್ರಭುಲಿಂಗು, ನ ಲಿ ಕೃಷ್ಣ ಸೇರಿ ಒಮ್ಮತದಿಂದ ಬೆಂಬಲ ವ್ಯಕ್ತಪಡಿಸಿದರು.