ಸರ್ಕಾರಿ ಗೋಮಾಳ ಜಾಗದಲ್ಲಿ ನಿರ್ಮಿಸಿದ್ದ ಗುಡಿಸಲುಗಳನ್ನು ನೆಲಸಮ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮೇಲನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೇಲನಹಳ್ಳಿ ಗ್ರಾಮದ ಸರ್ವೇ ನಂಬರ್ 22ರಲ್ಲಿ ನಿವೇಶನ ಇಲ್ಲದ ದಲಿತ ಸಮುದಾಯದವರು ಗುಡಿಸಲುಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಗುಡಿಸಲಿನಲ್ಲಿದ್ದವರು ಕೆಲಸಕ್ಕೆ ತೆರಳಿದ್ದ, ವೇಳೆ ಏಕಾಏಕಿ ತಾಲೂಕು ಆಡಳಿತದ ಅಧಿಕಾರಿಗಳು ತೆರವು ಕಾರ್ಯ ನಡೆಸಿದ್ದಾರೆ.

ಅಧಿಕಾರಿಗಳ ನಡೆಸಿರುವ ತೆರವಿನ ಕೆಲಸಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಪ್ರಭಾವಿಗಳು ಸಾವಿರಾರು ಎಕರೆ ಭೂಮಿ ಒತ್ತುವರಿ ಮಾಡಿದ್ದು ಅದನ್ನು ತೆರವುಗೊಳಿಸದೆ ಬಡವರ ಗುಡಿಸಲುಗಳನ್ನು ತೆರವು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಗಾಂಜಾ ಮಾರಾಟ; ಇಬ್ಬರ ಬಂಧನ
ಗುಡಿಸಲಿನಲ್ಲಿದ್ದ ಪಾತ್ರೆ, ಆಹಾರ ಸಾಮಗ್ರಿಗಳೆಲ್ಲವೂ ಹಾನಿಯಾಗಿದೆ. ಏಕಾಏಕಿ ತೆರವು ಕಾರ್ಯಾಚರಣೆ ನಡೆಸಿರುವುದರಿಂದ ಗುಡಿಸಲನ್ನು ನೆಲಸಮ ಮಾಡಿದ್ದರಿಂದ ಗುಡಿಸಲು ನಿರ್ಮಿಸಿಕೊಂಡಿದ್ದ ದಲಿತ ಕುಟುಂಬದವರಿಗೆ ದಿಕ್ಕೇ ತೋಚದಂತಾಗಿದೆ.
