ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾದ ಆರು ತಿಂಗಳಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತದ ಭಾಗವಾಗುವುದು ಎಂದು ಹೇಳಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದೀಗ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹಾಗೆಯೇ ನೆಟ್ಟಿಗರ ಅಪಹಾಸ್ಯಕ್ಕೂ ಯೋಗಿ ವಸ್ತು ವಿಷಯವಾಗಿದ್ದಾರೆ.
ಇದೇ ವರ್ಷದ ಮೇ 18ರಂದು ಮಹಾರಾಷ್ಟ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಲೋಕಸಭೆ ಚುನಾವಣೆ ಪ್ರಚಾರವನ್ನು ನಡೆಸಿದ್ದ ಯೋಗಿ ಆದಿತ್ಯನಾಥ್, “ಮೋದಿ ಪ್ರಧಾನಿಯಾದ ಆರು ತಿಂಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಲಿದೆ” ಎಂದು ಹೇಳಿದ್ದರು.
ಯೋಗಿ ಈ ಭಾಷಣ ಮಾಡಿ ಇಂದಿಗೆ ಆರು ತಿಂಗಳುಗಳಿದ್ದು, ನೆಟ್ಟಿಗರು “ಪಿಒಕೆ ಭಾರತದ ಭಾಗವಾಗುವುದು ಯಾವಾಗ” ಎಂದು ಆದಿತ್ಯನಾಥ್ ಅವರನ್ನು ಪ್ರಶ್ನಿಸಿ, ಅವರ ಕಾಲೆಳೆದಿದ್ದಾರೆ.
ಇದನ್ನು ಓದಿದ್ದೀರಾ? ಬಾಬಾ ಸಿದ್ದೀಕಿಯಂತೆ ಕೊಲ್ಲುತ್ತೇವೆ; ಯುಪಿ ಸಿಎಂ ಯೋಗಿ ಆದಿತ್ಯನಾಥ್‌ಗೆ ಜೀವ ಬೆದರಿಕೆ!
ಟ್ರೋಲಿಗರು, ನೆಟ್ಟಿಗರ ಗೇಲಿ
ಈಗಾಗಲೇ ಹಲವು ಬಾರಿ ಸುಳ್ಳು ಭರವಸೆಗಳ ಮೂಲಕ ಟ್ರೋಲ್‌ಗೆ ಗುರಿಯಾಗಿರುವ ಹಿರಿಯ ಬಿಜೆಪಿ ನಾಯಕ ಆದಿತ್ಯನಾಥ್ ಸದ್ಯ ಪಾಕ್ ಆಕ್ರಮಿತ ಕಾಶ್ಮೀರ ವಿಚಾರದಲ್ಲಿ ನೆಟ್ಟಿಗರಿಗೆ ಆಹಾರವಾಗಿದ್ದಾರೆ.
“ಇಂದು ಸಂಜೆಯೊಳಗೆ ಭಾರತದ ಹೊಸ ನಕ್ಷೆ ತಯಾರಾಗಲಿದೆ. ಆ ನಕ್ಷೆಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ಭಾರತದ ಭಾಗವಾಗಲಿದೆ. ರೈಲ್ವೆ ಸಚಿವರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ರೈಲು ಕೂಡಾ ಆರಂಭಿಸಲಿದ್ದಾರೆ” ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ. ಇನ್ನೋರ್ವ ನೆಟ್ಟಿಗರು “ಯೋಗಿ ಗಡುವು ಈಗಾಗಲೇ ಮುಕ್ತಾಯವಾಗಿದೆ. ತನ್ನ ಈ ಸುಳ್ಳು ಹೇಳಿಕೆಗೆ ರಾಜೀನಾಮೆ ನೀಡಲಿ” ಎಂದು ಆಗ್ರಹಿಸಿದ್ದಾರೆ.
“ಯೋಗಿ ಆದಿತ್ಯನಾಥ್ ಅವರಿಗೆ ಇನ್ನು ಒಂಬತ್ತು ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಆದರೆ ಅವರು ಚುನಾವಣಾ ಪ್ರಚಾರದಲ್ಲಿಯೇ ಬ್ಯುಜಿಯಾಗಿದ್ದಾರೆ” ಎಂದು ನೆಟ್ಟಿಗರೊಬ್ಬರು ಪೋಸ್ಟ್ ಒಂದಕ್ಕೆ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವು ನೆಟ್ಟಿಗಳು “ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಪಾಲಾಗುವುದು ಯಾವಾಗ ಎಂದು ಯೋಗಿ ಅವರನ್ನೇ ಕೇಳುವ” ಎಂದು ಯೋಗಿ ಅಧಿಕೃತ ಎಕ್ಸ್ ಖಾತೆಗೆ ಟ್ಯಾಗ್ ಮಾಡಿದ್ದಾರೆ.
18 May : POK will be part of India, if u elect a PM who has COURAGE!
— Veena Jain (@DrJain21) November 18, 2024
18 Nov : 6 Months over, POK is still occupied by Pakistan
Hence proved,
– Modi is a Fattu
– Modi is Number 1 Feku
– Yogi is Number 2 Feku 🤡 pic.twitter.com/fzLU5OKWHp
“ಜನರು ಇದೇ ಮೊದಲ ಬಾರಿಗೆ ಮೋಸ ಹೋಗುತ್ತಿರುವುದಾ? ಈ ಹಿಂದೆ ಮೋದಿ ಪ್ರಧಾನಿಯಾದರೆ ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಜಮೆ ಮಾಡಲಾಗುವುದು ಎಂದು ಹೇಳಿದ್ದರು. ಈಗ ಪಿಒಕೆ ಭಾರತದ ಭಾಗವಾಗಲಿದೆ ಎಂದು ಹೇಳಿಕೊಂಡಿದ್ದಾರೆ. ಮೋಸಕ್ಕೆ ಒಳಗಾಗುತ್ತಿರುವುದು ಜನರ ತಪ್ಪು” ಎಂದು ಜಿಮ್ಮಿ ಎಂಬ ನೆಟ್ಟಿಗರೊಬ್ಬರು ಅಭಿಪ್ರಾಯಿಸಿದ್ದಾರೆ.

ಈ ನಡುವೆ ಕೆಲವು ಬಿಜೆಪಿ, ಯೋಗಿ ಬೆಂಬಲಿಗರು “ಯೋಗಿ ಹೇಳಿರುವುದು ಮೋದಿ ಪ್ರಧಾನಿಯಾದ ಆರು ತಿಂಗಳಲ್ಲಿ ಪಾಕ್ ಭಾರತದ ಭಾಗವಾಗಲಿದೆ ಎಂದು. ಹಾಗಾಗಿ ನೀವು ಮೇ 18ರ ಬದಲಾಗಿ ಜೂನ್ 4 ಅನ್ನು ಗಡುವಿನ ಆರಂಭದ ದಿನಾಂಕವಾಗಿ ಪರಿಗಣಿಸಿ. ಇನ್ನೂ ಕೂಡಾ 20ಕ್ಕೂ ಅಧಿಕ ದಿನಗಳಿವೆ. ಕಾದು ನೋಡಿ” ಎಂದು ಹೇಳಿಕೊಂಡಿದ್ದಾರೆ.
