ಭವಿಷ್ಯವನ್ನು ಉಜ್ವಲವಾಗಿಸಬೇಕೆಂದರೆ ಮಾದಕ ವ್ಯಸನದಿಂದ ದೂರವಿರಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕ ವಿಕ್ರಮ್ ಅಮಟೆ ತಿಳಿಸಿದರು.
ಚಿಕ್ಕಮಗಳೂರು ನಗರದಲ್ಲಿ ಮಾದಕ ವ್ಯಸನದ ವಿರುದ್ಧ ನಡೆದ ಜಾಗೃತಿ ಜಾಥಾ ನಡೆಸಲಾಯಿತು. ಬಳಿಕ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
“ಮಾದಕ ವಸ್ತುಗಳ ಸೇವನೆಯಿಂದ ಅನಾರೋಗ್ಯ ಹೆಚ್ಚಾಗುತ್ತಿದೆ ಹಾಗೂ ಪರಿಸರ ನಾಶವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಹೆಚ್ಚಿನದಾಗಿ ಮಾದಕ ವ್ಯಾಸನಗಳಿಗೆ ತುತ್ತಾಗುತ್ತಿದ್ದಾರೆ. ಅವರ ಮುಂದಿನ ಭವಿಷ್ಯವನ್ನ ಉಜ್ವಲವಾಗಿಸಬೇಕೆಂದರೆ ಈ ಹವ್ಯಾಸಗಳನ್ನೆಲ್ಲ ಬಿಡಬೇಕು. ಆದಷ್ಟು ಇದರಿಂದ ದೂರವಿರಿ ಎಂದು ತಿಳಿಸಿದರು.

ಮಾದಕ ವಸ್ತುಗಳ ವಿರುದ್ಧ ಕರ್ನಾಟಕ ಅಭಿಯಾನದ ಅಂಗವಾಗಿ ಚಿಕ್ಕಮಗಳೂರು ಜಿಲ್ಲಾಡಳಿತ, ಪೊಲೀಸ್, ಅಬಕಾರಿ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ರೆಸಾರ್ಟ್ ಮಾಲೀಕರ ಸಂಘ, ಸೆಂಟ್ ಮೇರಿಸ್ ಶಿಕ್ಷಣ ಸಂಸ್ಥೆ ಮತ್ತು ವಿಜಯ ಕರ್ನಾಟಕ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಸಲಾಯಿತು.
ಜಾಗೃತಿ ಜಾಥಾವನ್ನು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉದ್ಘಾಟಿಸಿದ ಬಳಿಕ ನಗರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ದಲಿತರ ಗುಡಿಸಲನ್ನು ನೆಲಸಮ ಮಾಡಿದ ತಾಲೂಕು ಅಧಿಕಾರಿಗಳು
ಜಾಥಾದಲ್ಲಿ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳು, NCORD ಸಮಿತಿ ಸದಸ್ಯರು, ಪತ್ರಿಕಾ ಮಾಧ್ಯಮದವರು ಮತ್ತು ಸುಮಾರು ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸೈಂಟ್ ಮೇರಿಸ್ ಶಿಕ್ಷಣ ಸಂಸ್ಥೆಯ ಪಿ.ಯು.ಸಿ. ವಿದ್ಯಾರ್ಥಿಗಳು ‘ವ್ಯಸನ ಮುಕ್ತ ಭಾರತ’ ಎಂಬ ನಾಟಕವನ್ನು ಪ್ರದರ್ಶಿಸಿದರು. ಮೂಲಕ ‘ವ್ಯಸನ ಮುಕ್ತ ಕರ್ನಾಟಕದಲ್ಲಿ ಯುವಕರ ಪಾತ್ರ’ ಎಂಬ ಪ್ರಬಂಧ ಸ್ಪರ್ಧೆಯನ್ನು ನಡೆಸಲಾಗಿತ್ತು. ಈ ವೇಳೆ ಜಿಲ್ಲಾಧಿಕಾರಿ ಮೀನ ನಾಗರಾಜು,ಡಾ. ವಿನಯ್, ಮನೋವೈದ್ಯರು ಹಾಗೂ ಮಾದಕ ವಸ್ತುಗಳ ಕಾನೂನು ಬಗ್ಗೆ ಶ್ರೀ. ಗುರುದತ್ ಕಾಮತ್, ಸಿಪಿಐ ಇನ್ನಿತರರು ಉಪಸ್ಥಿತರಿದ್ದರು.
