ಹಳ್ಳಿ ಹಳ್ಳಿಗಳಲ್ಲಿ ದಲಿತ ಸಂಘರ್ಷ ಸಮಿತಿ ಸಂಘಟನೆ ಕಟ್ಟಿ ಸಂವಿಧಾನದತ್ತವಾಗಿ ನಮಗೆ ದಕ್ಕಬೇಕಾಗಿರುವ ಸವಲತ್ತುಗಳನ್ನು ಪಡೆದುಕೊಳ್ಳೋಣ. ಸಂಘಟನೆಯನ್ನು ಕಟ್ಟುವ ಮೂಲಕ ಸಂವಿಧಾನದ ಆಶಯ ಈಡೇರಿಸಿ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ ಮಾಸ್ತರ್ ಹೇಳಿದರು.
ಅವರು ಬ್ರಹ್ಮಾವರ ತಾಲೂಕಿನ ಆರೂರಿನಲ್ಲಿ ನಡೆದ ದಲಿತ ಸಂಘರ್ಷ ಸಮಿತಿ ಆರೂರು ಗ್ರಾಮ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರೂರು ಗ್ರಾಮ ಶಾಖೆ ಉದ್ಘಾಟಿಸಿ ಮಾತನಾಡಿದ ದ.ಸಂ.ಸ.ಜಿಲ್ಲಾ ಪ್ರಧಾನ ಸಂಚಾಲಕರಾದ ಮಂಜುನಾಥ ಗಿಳಿಯಾರು, ಪ್ರೊ ಕೃಷ್ಣಪ್ಪ ಆವರು ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿಯನ್ನು ಜಿಲ್ಲೆಯ ಮೂಲೆಮೂಲೆಗೂ ವಿಸ್ತರಿಸುವ ಕೆಲಸ ನಾವು ಮಾಡಬೇಕು. ಈ ಸಂಘಟನೆಯ ಮೂಲಕ ಜನರ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನದ ಪ್ರಯೋಜನ ತಲುಪುವಂತೆ ಮಾಡುವುದೇ ನಮ್ಮ ಉದ್ದೇಶ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮತ್ತು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಇರುವ ಏಕೈಕ ಸಂಘಟನೆ ಅಂಬೇಡ್ಕರ್ ವಾದ. ನಾವೆಲ್ಲರೂ ಇಲ್ಲಿ ಅಂಬೇಡ್ಕರ್ ಋಣವನ್ನು ತೀರಿಸಲು ಬಂದಿದ್ದೇವೆ. ಹೊಟ್ಟೆ ಪಾಡಿಗೆ ನಮಗೆ ಒಳ್ಳೆಯ ಉದ್ಯೋಗ ಇದೆ, ಆದರೆ ಧ್ವನಿ ಇಲ್ಲದ ನಮ್ಮ ಶೋಷಿತ ಸಮುದಾಯದವರಿಗೆ ಧ್ವನಿಯಾಗಲು ಹಳ್ಳಿ ಹಳ್ಳಿಗಳಲ್ಲೂ ದ.ಸಂ.ಸ.ಶಾಖೆಗಳನ್ನು ತೆರೆಯುತ್ತಿದ್ದೇವೆ ಎಂದರು.
ಬ್ರಹ್ಮಾವರ ಪೋಲೀಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಶಾಂತರಾಜ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಆರೂರು ಬಬ್ಬುಸ್ವಾಮಿ ದೇವಸ್ಥಾನದ ಮೋಕ್ತೇಸರರಾದ ಅರುಣ್ ಕುಮಾರ್ ಶೆಟ್ಟಿ, ಆರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುರುರಾಜ್ ರಾವ್, ಗ್ರಾಮ ಪಂಚಾಯತ್ ಸಧಸ್ಯರಾದ ಪಾರ್ವತಿ, ಮಾಜಿ ಪಂಚಾಯತ್ ಅಧ್ಯಕ್ಷರಾದ ರಾಜೀವ್ ಕುಲಾಲ್, ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ಯಾಮಸುಂದರ ತೆಕ್ಕಟ್ಟೆ, ಸುರೇಶ ಹಕ್ಲಾಡಿ, ಅಣ್ಣಪ್ಪ ನಕ್ರೆ, ರಾಜೇಂದ್ರ ನಾಥ್, ಮಂಜುನಾಥ ಹಳಗೇರಿ, ಭಾಸ್ಕರ ಮಾಸ್ಟರ್, ಕುಮಾರ್ ಕೋಟ, ಶ್ರೀಧರ್ ಕುಂಜಿಬೆಟ್ಟು, ತಾಲೂಕು ಪದಾಧಿಕಾರಿಗಳಾದ ಶಂಕರ್ ದಾಸ್ ಚೆಂಡ್ಕಳ, ವಡ್ಡರ್ಸೆ ಶ್ರೀನಿವಾಸ, ವಿಠಲ ಉಚ್ಚಿಲಾ, ಪ್ರಶಾಂತ ಬಿರ್ತಿ, ವಿಜಯ ಗಿಳಿಯಾರು, ಶಿವಾನಂದ ಬಿರ್ತಿ, ಸುಧಾಕರ ಮಾಸ್ಟರ್ ಗುಜ್ಜರ್ ಬೆಟ್ಟು, ಹರೀಶ್ಚಂದ್ರ ಬಿರ್ತಿ ಆಗಮಿಸಿದ್ದರು.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು l ಡಿ.14ರಂದು ಲೋಕ ಅದಾಲತ್: ಸಿವಿಲ್ ನ್ಯಾಯಾಧೀಶ ವೀರಭದ್ರಯ್ಯ
ಕಾರ್ಯಕ್ರಮದಲ್ಲಿ ಹೊಸದಾಗಿ ಆಯ್ಕೆ ಆದ ಆರೂರು ಗ್ರಾಮ ಶಾಖೆಯ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ಆರೂರು ಶಾಖೆಯ ಪ್ರಧಾನ ಸಂಚಾಲಕರಾಗಿ ನರಸಿಂಹ ಅವರನ್ನು ಆಯ್ಕೆ ಮಾಡಲಾಯಿತು. ನರಸಿಂಹ ಸ್ವಾಗತಿಸಿ, ಬಾಸ್ಕರ ವಂದಿಸಿದರು ಶರತ್ ಆರೂರು ಕಾರ್ಯಕ್ರಮ ನಿರೂಪಿಸಿದರು.
