ಮೈಸೂರು | ದೇವನೂರ ಬಗ್ಗೆ ದ್ವೇಷ ಭಾಷಣ; ಹೆಚ್ ಗೋವಿಂದಯ್ಯ ವಿರುದ್ಧ ದಸಂಸ ಕಿಡಿ

Date:

Advertisements

ಒಳಮೀಸಲಾತಿ ವಿಚಾರದ ಕಾರ್ಯಕ್ರಮವೊಂದರಲ್ಲಿ ಹೆಚ್ ಗೋವಿಂದಯ್ಯ ಅನಗತ್ಯವಾಗಿ ದಲಿತ ಚಳವಳಿ ಬಗ್ಗೆ ಪ್ರಸ್ತಾಪಿಸಿ, ದೇವನೂರ ಬಗ್ಗೆ ದ್ವೇಷ ಭಾಷಣ ಮಾಡಿದ್ದು, ʼದಲಿತ ಸಂಘರ್ಷ ಸಮಿತಿ ಒಡಕಿನ ಪಿತಾಮಹ ದೇವನೂರ ಮಹಾದೇವʼ ಎಂಬ ದ್ವೇಷಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ದಸಂಸ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರು ನಗರದಲ್ಲಿ ಕಳೆದ ದಿನ ದಸಂಸ ಮುಖಂಡರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಗುರುಪ್ರಸಾದ್ ಕೆರಗೋಡು ಮಾತನಾಡಿ, “ಹೆಚ್ ಗೋವಿಂದಯ್ಯ ತನ್ನ ರಾಜಕೀಯ ಸ್ವಾರ್ಥಕ್ಕಾಗಿ ದಲಿತ ಸಂಘರ್ಷ ಸಮಿತಿಯನ್ನು ದುರುಪಯೋಗ ಮಾಡಿಕೊಂಡು ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಗಿಟ್ಟಿಸಿಕೊಂಡು ಸ್ಪರ್ಧೆ ಮಾಡಿದ್ದರು. ಅಲ್ಲದೆ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ವ್ಯಕ್ತಿ. ತದನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಸಿದ್ದರಾಮಯ್ಯನವರ ವಿಶ್ವಾಸ ಗಿಟ್ಟಿಸಿ ಕೆಪಿಎಸ್‌ಸಿ ಸದಸ್ಯರಾಗಿ ಅಧಿಕಾರ ಅನುಭವಿಸಿದವರು” ಎಂದರು.

“ಗೋವಿಂದಯ್ಯ ದಲಿತರ ಪರ ಕೆಲಸ ಮಾಡದೆ ಭ್ರಷ್ಟಾಚಾರ ಆರೋಪ ಹೊತ್ತಿರುವುದು ಸುಳ್ಳಲ್ಲ. ದಸಂಸದೊಳಗೆ ಉಪಜಾತಿ ಹೆಸರಿನಲ್ಲಿ ಒಡಕಿಗೆ ಅಡಿಗಲ್ಲು ಹಾಕಿದ್ದೇ ಗೋವಿಂದಯ್ಯ” ಎಂದು ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಹರಿಹಾಯ್ದರು.

Advertisements

“ಕೆಪಿಎಸ್‌ಸಿ ಸದಸ್ಯತ್ವ ಮುಗಿದ ಮೇಲೆ ಟಿ ನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಲು ಕಾಂಗ್ರೆಸ್ ಪಕ್ಷದ ನಾಯಕರ ಮನೆಬಾಗಿಲು ಕಾದು ಕಾದು ಸಾಕಾಗಿ ಟಿಕೆಟ್ ಸಿಗಲ್ಲವೆನ್ನುವುದನ್ನು ಮನಗಂಡು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಜೆಡಿಎಸ್ ಕೂಡ ಟಿ ನರಸೀಪುರ ಕ್ಷೇತ್ರದಲ್ಲಿ ಟಿಕೆಟ್ ನೀಡದೆ ಮೂಲೆಗುಂಪು ಮಾಡಿದಾಗ ಇದೇ ಗೋವಿಂದಯ್ಯ ಎಲ್ಲರಿಂದ ತಿರಸ್ಕೃತರಾಗಿ ಮನೆ ಸೇರಿದ್ದು, ಇವರು ತಮ್ಮ ಸ್ವಾರ್ಥಕ್ಕಾಗಿ ಇಡೀ ದಸಂಸ ಹೋರಾಟವನ್ನು ದುರುಪಯೋಗ ಮಾಡಿಕೊಂಡ ವ್ಯಕ್ತಿ” ಎಂದು ಲೇವಡಿ ಮಾಡಿದರು.

ದಸಂಸ ಹಿರಿಯ ಮುಖಂಡ ವೆಂಕಟೇಶ್ ಮಾತನಾಡಿ, “ದಲಿತ ಚಳವಳಿ ಹಾಗೂ ರಾಜಕಾರಣ ಎರಡರಲ್ಲೂ ನೆಲೆಕಾಣದೆ ಎಡಬಿಡಂಗಿಯಾದ ಗೋವಿಂದಯ್ಯ ಮಾನಸಿಕ ಅಸ್ವಸ್ಥನಂತಾಗಿ ದಸಂಸ ಹಾಗೂ ದೇವನೂರ ಮಹಾದೇವ ಅವರ ವಿರುದ್ಧ ಸುಳ್ಳು ಆರೋಪ ಮಾಡಿಕೊಂಡು ತಿರುಗುತ್ತಿದ್ದಾರೆ” ಎಂದು ಕಿಡಿಕಾರಿದರು.

“ಗೋವಿಂದಯ್ಯ ಪಟಾಲಂಗಳ ಜೊತೆ ಸೇರಿಕೊಂಡು ದಲಿತ ಚಳವಳಿ ನವ ನಿರ್ಮಾಣ ವೇದಿಕೆ ಹೆಸರಿನಲ್ಲಿ,
ಕಾರ್ಯಕ್ರಮಗಳಿಗೆ ಹೋದಕಡೆಯೆಲ್ಲ ದೇವನೂರ ಮಹಾದೇವ ಅವರ ಮೇಲೆ ಇಲ್ಲಸಲ್ಲದ ದ್ವೇಷದ ಮಾತುಗಳನ್ನಾಡುತಿದ್ದು, ದಲಿತ ಸಮುದಾಯದ ಏಕತೆಗೆ ಭಂಗ ತರುವ ಹಲವಾರು ಹೀನ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ” ಎಂದರು.

“ದೇವನೂರ ಮಹಾದೇವ ಅವರಿಗೆ ಎರಡು ಬಾರಿ ಎಂಎಲ್‌ಸಿಯಾಗುವ ಅವಕಾಶ ಬಂದರೂ ಕೂಡಾ ತಿರಸ್ಕಾರ ಮಾಡಿ ರಾಜಕೀಯದಿಂದ ದೂರ ಉಳಿದವರು ಅವರು. ಅಲ್ಲದೆ ತಮಗೆ ಒಲಿದು ಬಂದ ರಾಜ್ಯೋತ್ಸವ ಪ್ರಶಸ್ತಿ, ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸೇರಿದಂತೆ ಹಲವು ಪ್ರಶಸ್ತಿ, ಸನ್ಮಾನಗಳನ್ನು ತೊರೆದ ನಿಸ್ವಾರ್ಥಿ. ಸರಳ ಸಜ್ಜನಿಕೆಯಿಂದ ಮೌಲ್ಯಯುತ ಜೀವನ ನಡೆಸುತ್ತ, ಸಮಾಜಕ್ಕೆ ದಾರಿದೀಪವಾಗಿದ್ದಾರೆ” ಎಂದರು.

ದಸಂಸ ಮುಖಂಡ ಮುನಿಸ್ವಾಮಿ ಮಾತನಾಡಿ, “ದೇವನೂರ ಮಹಾದೇವ ಅವರ ಸಾಹಿತ್ಯ, ಸಾಂಸ್ಕೃತಿಕ,
ವೈಚಾರಿಕ, ಪ್ರಗತಿಪರ ಚಳವಳಿ ಕ್ಷೇತ್ರ ಹಾಗೂ ಸಾರ್ವಜನಿಕ ಪ್ರೀತಿ, ವಿಶ್ವಾಸ, ಗೌರವದ ಬಗ್ಗೆ ಸದಾಭಿಪ್ರಾಯಗಳಿವೆ. ಆದರೆ ಗೋವಿಂದಯ್ಯನಂತಹ ಕೀಳು ಮನಸ್ಸಿನ ವ್ಯಕ್ತಿ ಜಿಜ್ಞಾಸೆಯಿಂದ ವಿಕೃತ ಚಿಂತನೆ ರೂಢಿಸಿಕೊಂಡು, ಇಲ್ಲಸಲ್ಲದ ಮಾತುಗಳಲ್ಲಿ ನಿರತನಾಗಿರುವುದು ಶೋಭೆಯಲ್ಲ” ಎಂದರು.

“ಗೋವಿಂದಯ್ಯ ಮೈಸೂರು ವಿವಿಯ ಬಾಬು ಜಗಜೀವನ್ ರಾಂ ಅಧ್ಯಯನ ಮತ್ತು ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ ತಿಮ್ಮರಾಯಪ್ಪ ಸಮ್ಮುಖದಲ್ಲಿ, ʼವಿಶ್ವ ವಿದ್ಯಾಲಯಗಳ ಅಂಬೇಡ್ಕರ್ ಅಧ್ಯಯನ ಕೇಂದ್ರಗಳು ದಲಿತ ಜಾತಿವಾದಿ ಕೇಂದ್ರಗಳಾಗಿವೆಯೆಂದು ಹೇಳಿರುವುದು ಖಂಡನೀಯ” ಎಂದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ನ.26ರಂದು ರೈತ ಸಂಘದಿಂದ ಸರ್ಕಾರಕ್ಕೆ ಎಚ್ಚರಿಕೆ ಜಾಥಾ

“ಆರ್‌ಎಸ್‌ಎಸ್‌ ವಾದಿರಾಜ್‌ನ ಶಿಷ್ಯತ್ವ ಸ್ವೀಕರಿಸಿರುವ ಗುಲಾಮಿತನದ, ಬದ್ಧತೆಯಿರದ ವ್ಯಕ್ತಿ ಹೀಗೆ ಮಾತಾಡುತಿದ್ದು,
ಇಂಥವರಿಂದ ಮತ್ತಿನ್ನೇನನ್ನೂ ನಿರೀಕ್ಷಿಸಲು ಸಾಧ್ಯ?” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಶಂಭುಲಿಂಗ ಸ್ವಾಮಿ, ಬಿ ಡಿ ಶಿವಬುದ್ಧಿ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X