ಗದಗ | ಸಂವಿಧಾನ ಪೀಠಿಕೆ ಓದುವ ಮೂಲಕ ನವ ಜೀವನಕ್ಕೆ ಕಾಲಿಟ್ಟ ವಧು-ವರರು

Date:

Advertisements
  • ಬುದ್ಧ, ಬಸವ ಮತ್ತು ಅಂಬೇಡ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ
  • ಗದಗ ಜಿಲ್ಲೆಯ ಡೋಣಿ ಗ್ರಾಮದಲ್ಲಿ ಸಂವಿಧಾನ ಸಾಕ್ಷಿ ಮದುವೆ

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ‘ಸಂವಿಧಾನ’ ಸಾಕ್ಷಿಯಾಗಿ ಈರಣ್ಣ ಜೊತೆ ನೇತ್ರಾವತಿ ಹಾಗೂ ಮಲ್ಲಪ್ಪ ಜೊತೆ ಕವಿತಾ ನವ ಜೋಡಿಗಳು ವಿಶೇಷ ರೀತಿಯಲ್ಲಿ ವಿವಾಹವಾದರು.

ಹಣತೆ ಹಚ್ಚುವ ಮೂಲಕ ಸಂವಿಧಾನ ಸಾಕ್ಷಿ ವಿವಾಹಕ್ಕೆ ಚಾಲನೆ ನೀಡಲಾಯಿತು. ಬುದ್ಧ, ಬಸವ ಮತ್ತು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ರಾಮಚಂದ್ರ ಹಂಸನೂರು ನವ ಜೋಡಿಗಳಿಗೆ ಸಂವಿಧಾನದ ಪೀಠಿಕೆ ಬೋಧಿಸುವುದರೊಂದಿಗೆ ನವ ಜೋಡಿಗಳು ನವ ಜೀವನಕ್ಕೆ ಕಾಲಿಟ್ಟರು.

ಕಾರ್ಯಕ್ರಮದಲ್ಲಿ ಚಂದ್ರಶೇಖರ್ ರಾಮೇನಹಳ್ಳಿ ಸಂವಿಧಾನ ಪೂರ್ವ ಪೀಠಿಕೆ ಬೋಧಿಸಿ ಮಾತನಾಡಿ, “ಸಂವಿಧಾನ ಆಶಯಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಯಾವುದೇ ರೀತಿಯ ತಾರತಮ್ಯ ಮಾಡಬಾರದೆಂದು ಡಾ. ಬಿ ಆರ್ ಅಂಬೇಡ್ಕರ್ ಅಂದು ಸಂವಿಧಾನವನ್ನು ರಚನೆ ಮಾಡಿಕೊಟ್ಟಿದ್ದಾರೆ. ಸಂವಿಧಾನ ಜೀವನ ಮೌಲ್ಯವಾಗಬೇಕೆಂದು ನಮ್ಮೆಲ್ಲರ ಆಶಯ, ಅಂಬೇಡ್ಕರ್ ಅವರ ಆಶಯವು ಆಗಿತ್ತು” ಎಂದು ಹೇಳಿದರು.

Advertisements

“ನವಜೋಡಿಗಳು ಮದುವೆ ಎಂಬುದು ನಂಬಿಕೆ ಮೇಲೆ ನಿಂತಿರುವುದು. ಒಬ್ಬ ಹುಡುಗ ಒಬ್ಬ ಹುಡುಗಿ ಪರಸ್ಪರ ಒಪ್ಪಿ ಇಡೀ ಜೀವನವನ್ನು ಜೊತೆಗೆ ಕಳೆಯುವುದು” ಎಂದರು.

“ದೇವಸ್ಥಾನಗಳಿಗೆ ಹೋಗ್ತಿರಿ ಏನಾದ್ರು ಕೊಟ್ಟಿದೆಯಾ, ಅದೇ ಸಂವಿಧಾನದ ಮೂಲಕ ನೀವು ಏನು ಕೇಳಿದರೂ ಅದು ನಿಮ್ಮ ಹಕ್ಕು ಎಂದು ಕೊಡುತ್ತದೆ. ಅದನ್ನು ಮಾಡಿದವರು ಅಂಬೇಡ್ಕರ್. ಪ್ರತಿಯೊಬ್ಬರು ಶಿಕ್ಷಣ ಪಡೆಯುವ ಹಕ್ಕನ್ನು ಕಲ್ಪಿಸಿದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡದೆ ಇರುವುದಾಗಲಿ, ಅವಕಾಶ ಕೊಡದೇ ಇರುವುದಾಗಲಿ ಯಾವುದನ್ನು ಮಾಡದೇ ತಂದೆ ತಾಯಿಗಳು ತಾರತಮ್ಯ ಮಾಡದೇ ತಮ್ಮ ಮಗಳಿಗೆ ಉತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಹೆಣ್ಣು ಮಗಳನ್ನು ಗೌರವಯುತವಾಗಿ, ಧೈರ್ಯವಾಗಿ ಬದುಕಲು ಕಲಿಸಬೇಕು” ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ದಲಿತ ಮುಖಂಡ ಶರೀಫ ಬಿಳಿಯಲಿ ಪ್ರಾಸ್ತಾವಿಕವಾಗಿ ಮಾತನಾಡಿ, “ಅಂಬೇಡ್ಕರ್ ಅವರ ಬಗ್ಗೆ ಸಾಕಷ್ಟು ಮಾತನಾಡಬಹುದು, ಅಂಬೇಡ್ಕರ್ ಯೋಜನೆಗಳನ್ನ ಪಡೆಯಬಹುದು, ಆದರೆ, ಅಂಬೇಡ್ಕರ್ ಬದುಕಿದ ರೀತಿಯಲ್ಲಿ, ಅವರು ಕಟ್ಟಿಕೊಟ್ಟಿರುವ ಆಶಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿಲ್ಲ. ಕಾರಣ ನಮ್ಮೊಳಗೆ ಇರುವ ಆಚರಣೆ, ಇಂತಹ ಸಮಯಕ್ಕೆ ತಾಳಿ ಕಟ್ಟಬೇಕು ಎಂಬ ಆಚರಣೆಗಳನ್ನು ನಾವು ಬಿಟ್ಟಿಲ್ಲ. ನಾಲ್ಕು ಮಂದಿ ಹಿರಿಯರು, ನಾಲ್ಕು ಮಂದಿ ಸ್ನೇಹಿತರು, ನಾಲ್ಕು ಜನ ತಾಯಂದಿರು ಸೇರಿದ್ರು, ನಾವು ಎಷ್ಟೇ ಜನರಿದ್ರು ಶುಭ ಲಗ್ನ ಎನ್ನಿರಯ್ಯ” ಎಂದು ಬಸವಣ್ಣನವರ ಮಾತನ್ನು ನೆನಪಿಸಿದರು.

ಈ ಸುದ್ದಿ ಓದಿದ್ದೀರಾ? ಮುರುಘಾ ಮಠಕ್ಕೆ ಸರ್ಕಾರದ ಆಡಳಿತಾಧಿಕಾರಿ ನೇಮಕ ರದ್ದು; ಹೈಕೋರ್ಟ್ ಆದೇಶ

“ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲ ಹಕ್ಕುಗಳನ್ನು ಕೊಟ್ಟಿದ್ದಾರೆ. ಆ ಹಕ್ಕುಗಳನ್ನು ಮರೆತು ನಾವು ಇಂದು ಗೊಡ್ಡು ಸಂಪ್ರದಾಯಗಳ ವೈದಿಕ ಆಚರಣೆಗೆ ಬಲಿಯಾಗುತ್ತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

ಭಾವ ಸಂಗಮ ವಿವಾಹ ವೇದಿಕೆ ಗದಗ, ಲಡಾಯಿ ಪ್ರಕಾಶನ ಗದಗ, ದಲಿತ ಕಲಾ ಮಂಡಳಿ ಡಾ. ಬಿ ಆರ್ ಅಂಬೇಡ್ಕರ್ ನಗರ ಡೋಣಿ ಯುವಕರ ಸಹಯೋಗದಲ್ಲಿ ಜರುಗಿದ ವಿವಾಹದಲ್ಲಿ ಮುಖಂಡರಾದ ಆನಂದ ಸಿಂಗಾಡಿ, ರಮೇಶ ಬಾಳಮ್ಮನವರ, ಮಲ್ಲೇಶ ಹೊಸಮನಿ, ಮುತ್ತು‌ಬಿಳಿಯಲಿ, ಶಿವಾನಂದ ಬಿಳಿಯಲಿ, ವಿಜಯ ಜಲವಾದಿ, ಮಲ್ಲೇಶ ಹೊಸಮನಿ ಹಾಗೂ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X