ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಗುರುಗುಂಟ ವ್ಯಾಪ್ತಿಯ ಗೋಲಪಲ್ಲಿ ಬಳಿ ನ.18 ರಂದು ಮಧ್ಯರಾತ್ರಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಲ್ಲು ತೂರಾಟದಿಂದ ಸಾರಿಗೆ ಸಂಸ್ಧೆಯ 3 ಬಸ್‌ಗಳ ಗಾಜು ಒಡೆದು ಹೋಗಿದ್ದವು. ಈ ಕುರಿತು ಚಿತ್ತಾಪೂರ ಘಟಕದ ಬಸ್ ಚಾಲಕ ಭದ್ರಪ್ಪ ಎಂಬುವರು ಸಾರಿಗೆ ಸಂಸ್ಥೆಯ ಮೂರು ಬಸ್‌ಗಳ 79 ಸಾವಿರ ಮೌಲ್ಯದ ಕಿಟಕಿ, ಬಸ್ಸಿನ ಮುಂಭಾಗದ ಗಾಜು ಒಡೆದು ಹಾನಿಯಾಗಿದೆ ಕುರಿತು ಹಟ್ಟಿ ಠಾಣೆಯಲ್ಲಿ ದೂರು ನೀಡಿದ್ದರು.ದೂರಿನ ಅನ್ವಯ ಪೊಲೀಸರು ದಮತೋರು ದೊಡ್ಡಿಯ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆತನನ್ನು ಪೊಲೀಸರು ತನಿಖೆ ಮಾಡಿದಾಗ, ʼಅಕ್ಕ ಮಾವನನ್ನು ತಮ್ಮ ಸಂಬಂಧಿಕರೊಂದಿಗೆ ಬೆಂಗಳೂರಿಗೆ ಕಳುಹಿಸಲು ಗುರುಗುಂಟ ಗ್ರಾಮಕ್ಕೆ ಬಂದಿದ್ದೆ, ಬಸ್ಸುಗಳು ನಿಲ್ಲಿಸದೆ ಇರುವುದಕ್ಕೆ ಹಾಗೂ ಕೂರಲು ಆಸನ ಸಿಗದೇ ಇರುವುದಕ್ಕೆ ಅಸಮಧಾನಗೊಂಡು ವಾಪಸ್ ಮನೆಗೆ ಕರೆದುಕೊಂಡು ಹೋಗಬೇಕಾಯಿತು. ನಂತರ 4 ಜನ ಸ್ನೇಹಿತರು ಗೋಲಪಲ್ಲಿ ಗುಡ್ಡದಲ್ಲಿ ರಾತ್ರಿ ಪಾರ್ಟಿ ಮಾಡಿ ಕುಡಿದ ಅಮಲಿನಲ್ಲಿ ಮಂಗಳವಾರ ರಾತ್ರಿ 1.30 ಗಂಟೆ ಸುಮಾರಿಗೆ ಬಸ್ ಹಾಗೂ ಖಾಸಗಿ ವಾಹನಗಳ ಮೇಲೆ ಕಲ್ಲು ನಡೆಸಿ ಪರಾರಿಯಾಗಿದ್ದೇವೆʼ ಎಂದು ಆರೋಪಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ನಬಾರ್ಡ್ ಸಾಲ ಖೋತಾ ಮಾಡಿದ ಮೋದಿ ಸರ್ಕಾರ ರೈತಪರವೇ?
ಇನ್ನುಳಿದ 4 ಜನ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
