ಕೋಲಾರ ತಾಲೂಕಿನ ಮದನಹಳ್ಳಿ ಗ್ರಾಮ ಪಂಚಾಯಿತಿಯ ಮುಳ್ಳಹಳ್ಳಿ ಗ್ರಾಮದಲ್ಲಿ ನವೆಂಬರ್ 25ರಂದು ಸೋಮವಾರ ರಾತ್ರಿ 7 ಗಂಟೆಗೆ ಗ್ರಾಮ ದೇವತೆ ಪಟಾಲಮ್ಮ ದೇವಿ ದೇವಾಲಯದ ಆವರಣದಲ್ಲಿ ಕಾರ್ತಿಕ ಮಾಸದ ಅಂಗವಾಗಿ 10ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸೋಮವಾರ ಬೆಳಗ್ಗೆ 10 ಗಂಟೆಗೆ ಅಭಿಷೇಕ ಮತ್ತು ಪೂಜಾ ಕೈಂಕರ್ಯಗಳು ನೆರವೇರಲಿದ್ದು, ರಾತ್ರಿ 7-00 ಗಟೆಗೆ ಲಕ್ಷ ದೀಪೋತ್ಸವ ನಡೆಯಲಿದೆ. ರಾತ್ರಿ 8 ಗಂಟೆಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಮತ್ತು ಗ್ರಾಮಸ್ಥರಿಂದ ಅನ್ನ ಸಂತರ್ಪಣೆ ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಇದನ್ನೂ ಓದಿ : ಕೋಲಾರ | ಸರ್ಕಾರಿ ನೌಕರರ ಭವನ, ಗುರುಭವನ ನಿರ್ಮಾಣಕ್ಕೆ ಬದ್ಧ : ಕೊತ್ತೂರು ಮಂಜುನಾಥ್ ಆಶ್ವಾಸನೆ

ರಾತ್ರಿ 9 ಗಂಟೆಗೆ ಶ್ರೀ ಪಟಾಲಮ್ಮದೇವಿ ಕಲಾ ಸಂಘ (ರಿ.), ಶ್ರೀ ಶ್ರೀ ಲಕ್ಷ್ಮೀವೆಂಕಟೇಶ್ವರಸ್ವಾಮಿ ಸಾಂಸ್ಕೃತಿಕ ಭಜನಾ ಕಲಾ ಸಂಘ(ರಿ), ವೇಣುಗೋಪಾಲಸ್ವಾಮಿ ಭಜನಾ ತಂಡ ಸೇರಿದಂತೆ ವಿವಿಧ ಕಲಾ ತಂಡಗಳಿಂದ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದೇ ವೇಳೆ ಹಾರ್ಮೋನಿಯಂ, ತಬಲ, ತಮಟೆ ವಾದ್ಯಗೋಷ್ಠಿಗಳು ನಡೆಯಲಿವೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಅಮೆರಿಕ ಲಂಚ-ವಂಚನೆ ಪ್ರಕರಣದಲ್ಲಿ ‘ಮೋದಾನಿ’ ಆರೋಪಿಯಲ್ಲವೇ?
ಆದ್ದರಿಂದ ಮುಳ್ಳಹಳ್ಳಿ ಸುತ್ತಮುತ್ತಲಿನ ಭಕ್ತಾಧಿಗಳು ಸರಿಯಾದ ಸಮಯಕ್ಕೆ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಪಟಾಲಮ್ಮ ದೇವಸ್ಥಾನ ಮಂಡಳಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಮಾಧ್ಯಮ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
(ವರದಿ : ಸುನಿಲ್ ಕುಮಾರ್ ಮುಳ್ಳಹಳ್ಳಿ)
