ಲಿಂಗಾಯತ ಸನ್ಯಾಸಿಗಳ ಧರ್ಮವಲ್ಲ, ಸಾಂಸಾರಿಕ ಧರ್ಮವಾಗಿದೆ. ಹೀಗಾಗಿ ಇನ್ಮುಂದೆ ಎಲ್ಲ ಮಠಾಧೀಶರಿಗೆ ಮದುವೆ ಮಾಡಿಸಬೇಕು ಎಂದು ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.
ಬಸವಕಲ್ಯಾಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದ ‘ಲಿಂಗಾಯತ ಹೋರಾಟ:ಮುಂದೇನು?’ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ʼಚಿಂತಕರಾದ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್, ಲಿಂಗಣ್ಣ ಸತ್ಯಂಪೇಟೆ, ನಾಗಮೋಹನದಾಸ್ ಅವರು ಸಾಂಸಾರಿಕವಾಗಿ ಬಸವತತ್ವ ಪ್ರಚಾರ ಮಾಡಲಿಲ್ಲವೇ. ಇದು ಮಠಾಧೀಶರ ಧರ್ಮವಲ್ಲ, ಭಕ್ತರ ಧರ್ಮವಾಗಿದೆ. ಲಿಂಗಾಯತ ತತ್ವ ಪ್ರಸಾರದಲ್ಲಿ ಸನ್ಯಾಸಿ ಹಾಗೂ ಸಂಸಾರಿಗಳಲ್ಲಿ ಯಾರ ಕೊಡುಗೆ ಅಧಿಕವಾಗಿದೆ ಎಂಬುದು ಯೋಚಿಸಬೇಕು. ಒತ್ತಾಯ ಪೂರ್ವಕವಾಗಿ ಅಲ್ಲದೆ ಒಪ್ಪಿಗೆ ಇರುವ ಮಠಾಧೀಶರಿಗೆ ಮದುವೆ ಆಗುವುದರಲ್ಲಿ ತಪ್ಪೇನಿಲ್ಲ. ಇದು ಹಾಸ್ಯವಲ್ಲ, ಇದರಲ್ಲಿ ವೈಜ್ಞಾನಿಕ ಸತ್ಯವಿದೆ. ತಪ್ಪು ತಿಳಿವಳಿಕೆ ಅಲ್ಲದೇ ದೃಢವಾದ ನಿಲುವು ತೆಗೆದುಕೊಳ್ಳಬೇಕು’ ಎಂದರು.
ರಾಜ್ಯ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಆದರೆ, ಶಾಲಾ-ಕಾಲೇಜು ಸೇರಿದಂತೆ ಎಲ್ಲೆಡೆ ಸಾಂಸ್ಕೃತಿಕ ಬಸವಣ್ಣನವರನ್ನು ಪರಿಚಯಿಸುವ ಕೆಲಸ ಯಾರೂ ಮಾಡಲಿಲ್ಲ. ಜಾತ್ರೆ, ಸಂತೆಯಲ್ಲಿ ವಚನ ಪುಸ್ತಕಗಳು ಉಚಿತವಾಗಿ ಹಂಚುವ ಮೂಲಕ ಬಸವತತ್ವ ಪ್ರಸಾರಗೈಯುವ ಜನರಿದ್ದಾರೆ. ಆದರೆ, ಕೋಟಿ ಕೋಟಿ ಆಸ್ತಿ ಗಳಿಸಿದ ಮಠಗಳು ವಚನಗಳ ಪುಸ್ತಕ ಉಚಿತವಾಗಿ ಕೊಡಲು ಯಾಕೆ ಸಿದ್ಧರಿಲ್ಲ’ ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಚುನಾವಣಾ ಫಲಿತಾಂಶ | ಹುಸಿ ಸಮಾಧಾನಗಳು ಮರೆಸಬಾರದ ಕೆಲವು ಗಂಭೀರ ಪ್ರಶ್ನೆಗಳು
ವಚನ ಓದುವುದರಿಂದ ಬದಲಾವಣೆ ಆಗುತ್ತೇವೆ, ಹೊರತು ಮಠಾಧೀಶರ ಆಶೀರ್ವಾದದಿಂದ ಬದಲಾವಣೆ ಆಗಲು ಸಾಧ್ಯವಿಲ್ಲ. ಬಹುತೇಕ ಮಠಾಧೀಶರಿಗೆ ವಚನಗಳೇ ಗೊತ್ತಿಲ್ಲ. ಆದ್ದರಿಂದ ಮಠಾಧೀಶರಿಗೆ ವಚನ ಕಮ್ಮಟ ನಡೆಸಬೇಕು. ಬಸವತತ್ವ ನಿಜ ಜೀವನದಲ್ಲಿ ಆಚರಿಸದವರ ಮನೆಗೆ ಬರುವುದಿಲ್ಲ ಎಂದು ಮಠಾಧೀಶರು ಖಂಡತುಂಡವಾಗಿ ದಿಕ್ಕರಿಸುವ ರೂಢಿ ಹಾಕಿಕೊಳ್ಳಬೇಕು. ಎಂದರು.
ನಿಜ ಈಗಿನ ಕೆಲವು ಲಿಂಗಾಯತ ಸ್ವಾಮಿಗಳು ದಲಿತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿ ಜೈಲ್ ಸೇರಿದ್ದನ್ನು ನೋಡಿದರೆ ಇವರ ಸಲಹೆ ಸರಿ ಇದೆ ಎನ್ನಿಸುತ್ತಿದೆ. ಸ್ವಾಮಿಗಳು ಹೀಗೆ ಮದುವೆ ಆಗದೆ ಮುಚ್ಚು ಮರೆಯಲ್ಲಿ ,ಪ್ರಾಕೃತಿಕ ವಾಂಚೆಯನ್ನು ತಡೆ ಗಟ್ಟಲಾರದೆ ಹೀಗೆ ಕಚ್ಚೆ ಹರುಕ ರಾಗಿರುವ ಬದಲು ಸಾರ್ವಜನಿಕವಾಗಿ ಮದುವೆಯಾಗಿ ಮಕ್ಕಳು ಮಾಡಿಕೊಂಡು ಮಠದ ಆಸ್ತಿಯನ್ನು ತಮ್ಮ ತಮ್ಮ ಮಕ್ಕಳು ಮರಿ ಮಕ್ಕಳಿಗೆ ಹಸ್ತಾಂತರಿಸಿ ಅಧಿಕಾರ ನಡೆಸಿ ವಚನ ಪಾಠ ಮಾಡಿಕೊಂಡು ಇದ್ದರೆ ಯಾವುದೇ ತೊಂದರೆ ಇರೋದಿಲ್ಲ.ಪಾಪದ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಇರುತ್ತಾರೆ. ಆದರೆ ಮದುವೆ ಆದಾಕ್ಷಣ ಅವರು ಸಭ್ಯರಾಗಿ ಇರುತ್ತಾರೆ ಎನ್ನೋದು ಗ್ಯಾರಂಟಿ ಇಲ್ಲ.ಕಾರಣ ,ಕೋಟ್ಯಂತರ ರೂ ಮಠ ದ ಆಸ್ತಿ ಕೊಪ್ಪರಿಗೆ ಹಣ ಜನ ಬೆಂಬಲ ಇರೋವಾಗ ಇವರು ಒಂದೇ ಮದುವೆ ಇಂದ ತೃಪ್ತಿ ಹೊಂದುತ್ತಾರೆ ಎಂಬ ಖಾತರಿ ಇಲ್ಲ. ಅವರಿಗೆ ಮದುವೆ ವಿಚಾರದಲ್ಲಿ ರಿಯಾಯ್ತಿ ತೋರಿ ಒಂದು ರೀತಿ ಗೂಳಿ ಬಿಟ್ಟಂತೆ ಸುಮ್ಮನೆ ಬಿಟ್ಟು ಬಿಡು ವುದು ಲೇಸು.😂😀🤣😅