ಬೆಳಗಾವಿ | ಸರ್ಕಾರಿ ಶಾಲಾ ಮಕ್ಕಳಿಂದಲೇ ಅರ್ಥಪೂರ್ಣ ಮಕ್ಕಳ ದಿನಾಚರಣೆ

Date:

Advertisements

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ಸಾಲಾಪೂರ ಗ್ರಾಮದ ವಿದ್ಯಾರ್ಥಿಗಳು ಅರ್ಥಪೂರ್ಣವಾಗಿ ಮಕ್ಕಳ ದಿನಾಚರಣೆ ಆಚರಿಸಿದರು.

ಮಕ್ಕಳ ದಿನಾಚರಣೆಯಲ್ಲಿ ಶಾಲೆಯ ಪ್ರಧಾನ ಮಂತ್ರಿಗಳು ಉಪ ಪ್ರಧಾನ ಮಂತ್ರಿಗಳು ಮತ್ತು ಶಾಲಾ ಸಂಸತ್ತಿನ ಮಂತ್ರಿಗಳು ವೇದಿಕೆಯ ಎಲ್ಲ ಕಾರ್ಯಕ್ರಮಗಳನ್ನು ನಡೆಸಿಕೊಟ್ಟದ್ದು ವಿಶೇಷವಾಗಿತ್ತು ಹಾಗೂ ರಾಜ್ಯದ ಬೇರೆ ಬೇರೆ ಭಾಗದ ಕೃಷಿ ಜೀವನ ಶೈಲಿ ಬಿಂಬಿಸುವ ನೃತ್ಯಗಳನ್ನು ಮಾಡಿ ರಾಜ್ಯದ ಪ್ರಾದೇಶಿಕ ವೈವಿಧ್ಯತೆಯ ಪರಿಚಯ ಮಾಡಿಕೊಟ್ಟರು.

ಮಕ್ಕಳ ದಿನಾಚಾರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ವಿಧ್ಯಾರ್ಥಿನಿ ಮಹಾನಂದಾ ಜೋಗೆಲ್ಲಪ್ಪನ್ನವರ ಮಾತನಾಡಿ, ನೆಹರು ಅವರು ಮಕ್ಕಳ ಜೀವನದಲ್ಲಿ ಶಿಕ್ಷಣದ ಮಹತ್ವ ಪರಿಚಯಿಸಿದ ಶ್ರೇಷ್ಠ ಪ್ರಧಾನಿ ಎಂದು ತಿಳಿಸಿದರು.

Advertisements

ವಿದ್ಯಾರ್ಥಿನಿ ನತಾಷಾ ನದಾಫ ಮಾತನಾಡಿ, ಉತ್ತಮ ನಾಯಕರಾಗಿದ್ದವರು ಚಾಚಾ ಜವಾಹರಲಾಲ್ ನೆಹರು. ಮಕ್ಕಳ ಮೇಲೆ ಬಹಳ ಪ್ರೀತಿ ಹೊಂದಿದ್ದರು. ಅವರ ಜನ್ಮದಿನವನ್ನು ಮಕ್ಕಳ ದಿನಚಾರಣೆಯನ್ನಾಗಿ ಆಚರಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ವಿದ್ಯಾರ್ಥಿನಿ ರೂಪಾ ಬಂಡಿವಡ್ಡರ ಮಾತನಾಡಿ, ನೆಹರು ಅವರು ನಮ್ಮ ದೇಶದ ಪ್ರಧಾನಿಗಳು. ಅವರ ಜನ್ಮದಿನ ಆಚರಿಸುತ್ತಿರುವುದು ಸಂತೋಷವಾಗಿದೆ. ನೆಹರು ಅವರು ದೇಶಕ್ಕಾಗಿ ಅಪಾರ ಕೂಡುಗೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.

WhatsApp Image 2024 11 23 at 6.17.38 PM

ಶಾಲಾ ಸಂಸತ್ತಿನ ಉಪ ಪ್ರಧಾನಿ ಶ್ರೇಯಾ ರಾಜನಾಳ ಮಾತನಾಡಿ, ಮಹಾನ್ ಚೇತನ ಜವಾಹರಲಾಲ್ ನೆಹರು ಶ್ರೀಮಂತರಾಗಿದ್ದರು ಸಹ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. 1930ರಲ್ಲಿ ಪೂರ್ಣ ಸ್ವರಾಜ್ಯ ಹಾಗೂ ರಾವಿ ನದಿಯ ದಂಡೆಯ ಮೇಲೆ ರಾಷ್ಟ್ರ ದ್ವಜವನ್ನು ಹಾರಿಸಿ ಸ್ವಾತಂತ್ರ್ಯದ ದಿಕ್ಕನ್ನು ಬದಲಾಯಿಸಿದರು ಎಂದು ವಿವರಿಸಿದರು.

ವಿದ್ಯಾರ್ಥಿನಿ ಪ್ರಿಯಾ ಪೂಜೇರ ಮಾತನಾಡಿ, ಜವಾಹಾರಲಾಲ್ ನೆಹರು ಅವರು ಜೈಲುವಾಸ ಅನುಭವಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ನಂತರ ಪ್ರಧಾನಿಗಳಾಗಿ ಭಾರತ ಭವಿಷ್ಯದ ದೃಷ್ಠಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಪಂಚವಾರ್ಷಿಕ ಯೋಜನೆ,ಅಲಿಪ್ತ ನೀತಿ ಹಾಗೂ ವಿದೇಶಾಂಗ ನೀತಿಗಳನ್ನು ಜಾರಿಗೊಳಿಸಿದರು. ಮಕ್ಕಳಿಗಾಗಿ ಶೌರ್ಯ ಪ್ರಶಸ್ತಿ ಆರಂಭಿಸಿದ ಶ್ರೇಯಸ್ಸು ಜವಾಹರಲಾಲ್ ನೆಹರು ಅವರಿಗೆ ಸಲ್ಲುತ್ತದೆ‌ ಎಂದು ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.

ಶಾಲೆಯ ಪ್ರಧಾನ ಗುರುಗಳಾದ ಎ.ಎಸ್ ಗಾಣಗಿ ಶಿಕ್ಷಕರು ಶಾಲೆಯ ವಾರ್ಷಿಕ ವರದಿಯನ್ನು ಓದಿದರು. ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೇ ಆಚರಿಸಿದ ಮಕ್ಕಳ ದಿನಾಚರಣೆ ಪೋಷಕರು ಮತ್ತು ಗ್ರಾಮಸ್ಥರ ಮೆಚ್ಚುಗೆಗೆ ಕಾರಣವಾಗಿದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X