ಬೀದರ್‌ | ಬಸವಣ್ಣನಿಗೆ ಇದ್ದಷ್ಟು ರಾಷ್ಟ್ರಭಕ್ತಿ ಯಾವ ಮತೀಯವಾದಿ ಸ್ವಾಮೀಜಿಗಳಿಗಿಲ್ಲ: ನಿಜಗುಣಾನಂದ ಸ್ವಾಮೀಜಿ

Date:

Advertisements

ಬಸವಣ್ಣನವರ ಧರ್ಮ ನಿಲ್ಲುವುದು ತತ್ವದ ಮೇಲೆ, ಬಸವಧರ್ಮ ಗರ್ಭಗುಡಿ ಸಂಸ್ಕೃತಿ ಅಲ್ಲ, ಗರ್ಭಗುಡಿ ಸಂಸ್ಕೃತಿ ಮೀರಿ ಮಾನವ ಸಂಸ್ಕೃತಿ ಕಡೆಗೆ ಬಂದಿರುವುದು ಬಸವ ಧರ್ಮ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ಬಸವಕಲ್ಯಾಣದಲ್ಲಿ ಎರಡನೇ ದಿನ ಭಾನುವಾರ ನಡೆದ 45ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದ ʼಬಸವಕಲ್ಯಾಣ ವಿಕಾಸ : ಅಂದು-ಇಂದು-ಮುಂದು‘ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ʼಗರ್ಭಗುಡಿ ಸಂಸ್ಕೃತಿ ಮನುಷ್ಯರಿಗೆ ಯಾವುದೇ ಉತ್ತರ ನೀಡುವುದಿಲ್ಲ. ಆದರೆ, ಬಸವ ಸಂಸ್ಕೃತಿ ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ ಉತ್ತರ ನೀಡುವಂತಹ ಏಕಮಯ ಧರ್ಮವಾಗಿದೆ. ಎಲ್ಲಾ ಮಹಾತ್ಮರು ದೇವರು, ಧರ್ಮ, ಪುಣ್ಯ, ಪಾಪ, ಸ್ವರ್ಗ, ನರಕ, ಪುನರ್ಜನ್ಮ ಇಂತಹ ವಿಚಾರಗಳ ಬಗ್ಗೆ ಮಾತನಾಡಿದರೆ, ಬಸವಣ್ಣನವರು ಮನುಷ್ಯ ಕುಲದ ಕುರಿತು ಮಾತನಾಡಿದ್ದರುʼ ಎಂದು ನುಡಿದರು.

Advertisements

ʼ12ನೇ ಶತಮಾನದಲ್ಲಿ ಬಸವ ಸಂಸ್ಕೃತಿ ಉಳಿಸಿದಕ್ಕಿಂತಲೂ ಇಂದು ಬಸವ ಧರ್ಮ ಉಳಿಸುವುದು ಬಹಳ ಜರೂರಾಗಿದೆ. ಅಂದು ಶರಣಧರ್ಮ ವರ್ಗ ಮತ್ತು ವೈದಿಕ ವರ್ಗ ಎಂಬ ಎರಡು ವರ್ಗ ಮಾತ್ರ ಇದ್ದವು.ಆದರೆ, ಇಂದು ಬಸವಣ್ಣನವರ ತತ್ವಕ್ಕೆ ಬಸವ ಅನುಯಾಯಿಗಳಿಂದ, ಮತೀಯವಾದಿ ಲಿಂಗಾಯತ ಮಠಾಧೀಶರಿಂದ ಹಾನಿಯಿದೆ. ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಈ ಧರ್ಮವನ್ನು ಬಳಸಿಕೊಂಡು ಯಾವ ರೀತಿ ನಾಶ ಮಾಡಬೇಕೆಂಬ ಸಂಚಿನಲ್ಲಿದ್ದಾರೆ. ಇಂದು ಬಸವತತ್ವದ ಮೇಲೆ ಹೇಳಲಾರದಷ್ಟು ದಾಳಿಗೆ ಒಳಗಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ʼಇತ್ತೀಚೆಗೆ ರಾಷ್ಟ್ರ ರಕ್ಷಣೆಯ ಹೆಸರಿನಲ್ಲಿ ಬೇರೆ ಧರ್ಮದ ಗೂಬೆ ತೋರಿಸಿ ಲಿಂಗಾಯತ ಧರ್ಮವನ್ನು ಗೊತ್ತಿಲ್ಲದಂತೆ ಮತೀಯವಾದಿಗಳು ಬಸವಧರ್ಮ ಹಾಳು ಮಾಡುವ ತಂತ್ರಗಾರಿಕೆಯಲ್ಲಿದ್ದಾರೆ. ಇದರಿಂದ ಲಿಂಗಾಯತರು ಎಚ್ಚರಗೊಳ್ಳಬೇಕು. ದೇಶದ ನಾನಾ ರಾಜ್ಯಗಳಲ್ಲಿ ಗುಡಿ, ಗುಂಡಾರ, ಕುಂಭಮೇಳ ಪರಂಪರೆ ಮುಂದುವರೆಸಿದರೆ, ಕರ್ನಾಟಕದ ಹಲವು ಲಿಂಗಾಯತ ಮಠಗಳು ಗುಡಿ, ಗುಂಡಾರ ಕಟ್ಟುವ ಬದಲಿಗೆ ಮಕ್ಕಳಿಗಾಗಿ ಶಿಕ್ಷಣ ಸಂಸ್ಥೆಗಳು ನಿರ್ಮಿಸಿದ್ದರು. ಅಷ್ಟೇ ಅಲ್ಲದೇ ನಾಡಿನ ಹಲವೆಡೆ ಉಚಿತ ಪ್ರಸಾದ ನಿಲಯ ತೆರೆದು ಕಾಯಕ, ದಾಸೋಹದ ತಳಹದಿ ಮೇಲೆ ಸೇವೆಗೈದಿರುವುದು ಎಂದಿಗೂ ಮರೆಯಬಾರದುʼ ಎಂದರು.

ʼಇದು ಬಹಳ ಸಂಕ್ರಮಣದ ಕಾಲ. ಬಸವಣ್ಣನವರು ಹಲವಾರು ಸಮುದಾಯದ ಶರಣರನ್ನು ಸೇರಿಸಿ ಲಿಂಗಾಯತ ಧರ್ಮ ಕಟ್ಟಿದರು. ಈಗ ಆಯಾ ಸಮುದಾಯದ ಜನ ಅವರವರ ಶರಣರನ್ನು ಕೊಂಡೊಯ್ದು ಬಸವಣ್ಣನವರನ್ನೇ ಕೈಬಿಟ್ಟು ಹೋಗಿದ್ದಾರೆ. ಬಾಯಲ್ಲಿ ಬಸಪ್ಪ ಒಳಗಡೆ ನಾಗಪ್ಪ ಎಂಬಂತೆ ಇರುವ ಮತೀಯವಾದಿ ಮಠಾಧೀಶರಿಂದ ಲಿಂಗಾಯತ ಧರ್ಮಕೆ ಭಾರಿ ಹಿನ್ನಡೆಯಾಗಿದೆ. ಬಸವಪರ ಚಿಂತನೆ ಬಿತ್ತುವವರನ್ನು ಸಭೆಗಳಿಗೆ ಕರೆಸುವದಕ್ಕೂ ಇಂತಹ ಮತೀಯವಾದಿ ಮಠಾಧೀಶರು ಹಿಂದೇಟು ಹಾಕುತ್ತಿದ್ದಾರೆʼ ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಮಠಾಧೀಶರಿಗೆ ಮದುವೆ ಮಾಡಿಸಬೇಕು : ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ

ಮತೀಯವಾದಿಗಳು ರಾಷ್ಟ್ರ ಪ್ರಜ್ಞೆಯ ತಳಹದಿ ಮೇಲೆ ಗೊತ್ತಿಲ್ಲದಂತೆ ಲಿಂಗಾಯತ ಧರ್ಮ ಕರಗಿಸಲು ಹೊರಟಿದ್ದಾರೆ. ಆದರೆ, ಜಗತ್ತಿನಲ್ಲಿ ಬಸವಣ್ಣನವರಿಗೆ ಇದ್ದಷ್ಟು ರಾಷ್ಟ್ರಭಕ್ತಿ ಯಾವ ಮತೀಯವಾದಿ, ವೈದಿಕ ಸ್ವಾಮೀಜಿಗಳಿಗಿಲ್ಲ. ದೇಶದಲ್ಲಿ ಬಸವಣ್ಣನವರ ವಿಚಾರಧಾರೆಯ ಪ್ರಜಾಪ್ರಭುತ್ವ ಧರ್ಮದ ಪಕ್ಷ ಸ್ಥಾಪನೆಯಾದರೆ ಮಾತ್ರ ಈ ದೇಶಕ್ಕೆ ಭವಿಷ್ಯವಿದೆ. ಕಾಯಕ, ರಾಷ್ಟ್ರ, ದಾಸೋಹ, ಆರ್ಥಿಕ ಪ್ರೇಮಿಗಳು ಲಿಂಗಾಯತರಾಗಿದ್ದಾರೆ. ಮಾನವ ಹಕ್ಕುಗಳ ಪ್ರತಿಪಾದಕರು ಲಿಂಗಾಯತರೇ ಆಗಿದ್ದಾರೆ ಎಂಬುದು ಅರ್ಥೈಸಿಕೊಳ್ಳಬೇಕುʼ ಎಂದು ತಿಳಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X