ಬಿ.ಎಂ.ಹೊರಕೇರಿ ಅವರ ಅವಧಿಯಲ್ಲಿ ಅನೇಕ ಹೊಸ ವಿಚಾರ, ಮಹಾತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಿ ಯಶಸ್ವಿಯಾದರು. ಕಿರುಯೋಜನೆ, ಮಹಾದಾಯಿ ಯೋಜನೆಯ ಬಗ್ಗೆ ಮೊದಲ ಬಾರಿಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಿದ ಕೀರ್ತಿ ಹೊರಕೇರಿಯವರಿಗೆ ಸಲ್ಲುತ್ತದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರು ಗ್ರಾಮದ ಅನ್ನದಾನೇಶ್ವರ ಪ್ರೌಢಶಾಲೆಯ ಆವರಣದಲ್ಲಿ ದಿ.ಬಿ.ಎಂ.ಹೊರಕೇರಿ ಅಭಿಮಾನಿ ಬಳಗದ ವತಿಯಿಂದ ಭಾನುವಾರ ಆಯೋಜಿಸಿದ್ದ ದಿ.ಬಿ.ಎಂ.ಹೊರಕೇರಿ ಅವರ ಪುತ್ಥಳಿ ಅನಾವರಣ ಮತ್ತು “ಹೊನ್ನಬಿತ್ತ್ಯಾರ ಹೊರಕೇರಿ” ಸಂಸ್ಮರಣ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.
ಎಪಿಎಂಸಿ ಸುಧಾರಣೆ, ನೇಕಾರ ಕಲ್ಯಾಣ, ರಸ್ತೆ ಬಗ್ಗೆ ಚಿಂತನೆ ಮಾಡಿದರು. ಢಾಣಕಶಿರೂರ ಗ್ರಾಮದಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿ ಸಾರ್ವಜನಿಕ ಬದುಕಿಗೆ ಪಾದಾರ್ಪಣೆ ಮಾಡಿದರು. ಧೀಮಂತ ನಾಯಕ ಶಾಸಕರಾಗಿ ಅನೇಕ ಜನಪರ ಯೋಜನೆಗಳನ್ನು ಜನರ ಮನಸ್ಸಿನಲ್ಲಿ ಬಿತ್ತಿದರು ಎಂದು ಬಣ್ಣಿಸಿದರು.
ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಹೊರಕೇರಿಯವರ ನಿಸ್ವಾರ್ಥ ಸೇವೆ ನಮಗೆಲ್ಲರಿಗೂ ಆದರ್ಶವಾಗಲಿ ಎಂದರು.
ಸಂಸದ ಪಿ.ಸಿ.ಗದ್ದಿಗೌಡರ ಹೊರಕೇರಿಯವರ ಜೀವನ, ನಡೆದುಬಂದ ದಾರಿ ಆದರ್ಶಗಳ ಕುರಿತು ಮಾತನಾಡಿದರು. ಮಾಜಿ ಸಚಿವ ಎಸ್.ಆರ್.ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿದರು. ಹಾಲಕೆರೆ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಮಹಾ ಸ್ವಾಮಿಗಳು ಮತ್ತು ಶಿವಯೋಗ ಮಂದಿರ ಸಂಸ್ಥೆಯ ಉಪಾಧ್ಯಕ್ಷ ಸದಾಶಿವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿದ್ದರು.
ಇದೇ ವೇಳೆ ಡಾ.ವಿ.ಬಿ.ಸಣ್ಣಸಕ್ಕರಗೌಡರ, ಪ್ರೊ.ರಮೇಶ ಮುರಂಕರ, ಡಾ.ಸಣ್ಣವೀರಣ್ಣ ದೊಡಮನಿ ಮತ್ತು ಆರ್.ವಿ.ಗೌಡಪ್ಪಗೌಡರ ಮುಂತಾದವರಿಗೆ ದಿ.ಬಿ.ಎಂ.ಹೊರಕೇರಿ ಪ್ರತಿಷ್ಠಾನದಿಂದ ರಾಜ್ಯಮಟ್ಟದ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಅಮೆರಿಕ ಲಂಚ-ವಂಚನೆ ಪ್ರಕರಣದಲ್ಲಿ ‘ಮೋದಾನಿ’ ಆರೋಪಿಯಲ್ಲವೇ?
ಕಾರ್ಯಕ್ರಮದಲ್ಲಿ ಶಾಸಕರಾದ ಜೆ.ಟಿ.ಪಾಟೀಲ, ಭೀಮಸೇನ ಚಿಮ್ಮನ ಕಟ್ಟಿ, ಎನ್.ಎಚ್.ಕೋನರಡ್ಡಿ, ವಿಪ ಸದಸ್ಯ ಪಿ.ಎಚ್, ಪೂಜಾರ, ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ, ಮಾಜಿ ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ, ಮಲ್ಲಿಕಾ ರ್ಜುನ ಬನ್ನಿ, ಬಿ.ಆರ್. ಯಾವಗಲ್, ಮಹಾದೇವಪ್ಪ ಯಾದವಾಡ, ಮುಖಂಡರಾದ ಮಹಾಂತೇಶ ಮಮದಾಪೂರ, ವಿರೇಶ ಸೊಬರದಮಠ, ಸಿದ್ದನಗೌಡ ಪಾಟೀಲ, ಅಶೋಕ ನವಲಗುಂದ, ಈರಣ್ಣ ಕರಿಗೌಡರ, ಮುಖಂಡರಾದ ಶಾಂತಗೌಡ ಪಾಟೀಲ, ಹೊಳಬಸು ಶೆಟ್ಟರ, ಹನಮಂತ ಮಾವಿನಮರದ, ಎಂ.ಬಿ.ಹಂಗರಗಿ, ಎಫ್.ಆರ್.ಪಾಟೀಲ (ಖ್ಯಾಡ), ಡಾ.ಎಂ.ಎಚ್.ಚಲವಾದಿ, ಶೇಖರಗೌಡ ಪಾಟೀಲ, ಶಿವಪ್ಪ ಹೊರಕೇರಿ, ಅಭಿಮಾನಿ ಬಳಗದ ಅಧ್ಯಕ್ಷ ಪಿ.ಆರ್.ಗೌಡರ, ಬಸಮ್ಮಾ ನರಸಾಪೂರ, ಶೀಲಾ ಗೌಡರ ಸೇರಿದಂತೆ ಇತರೆ ಗಣ್ಯರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.