ದಲಿತರ ಕುಂದು ಕೊರತೆಗಳನ್ನು ಆಲಿಸಲು ಜಿಲ್ಲಾ ಮಟ್ಟದ ಸಭೆಯನ್ನು ಇದೇ ತಿಂಗಳ 28 ರಂದು ಜಿಲ್ಲಾಡಳಿತ ಆಯೋಜಿಸಿದೆ. ಈ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಕುಂದು ಕೊರತೆಗಳ ಅರ್ಜಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಲಿಖಿತ ರೂಪದಲ್ಲಿ ಇದೇ ತಿಂಗಳ 26 ರೊಳಗೆ ಸಲ್ಲಿಸಿ ಸ್ವೀಕೃತಿ ಪಡೆಯಲು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ತಿಳಿಸಿದ್ದಾರೆ.
ತುಮಕೂರು ನಗರದ ಬಾಲಭವನದಲ್ಲಿ ನವಂಬರ್ 28 ರ ಬೆಳಿಗ್ಗೆ 10.30 ಕ್ಕೆ ನಡೆಸಲು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಆಯಾ ತಾಲ್ಲೂಕಿನಲ್ಲಿ ಅರ್ಜಿ ಪಡೆಯಲಾಗುತ್ತಿದೆ. ಗುಬ್ಬಿ ತಾಲ್ಲೂಕಿನ ಎಸ್ಸಿ ಎಸ್ಟಿ ಸಮುದಾಯದವರು ತಮ್ಮ ಕುಂದು ಕೊರತೆಗಳ ಅರ್ಜಿಯನ್ನು ನೀಡಿ ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಲು ಅವಕಾಶ ಕಲ್ಪಿಸಲಾಗುತ್ತದೆ. ತಮ್ಮ ಅರ್ಜಿಯ ಸ್ವೀಕೃತಿ ಕಡ್ಡಾಯ ಸಭೆಗೆ ತಂದಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.