ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್ ನಂ. 29ಕ್ಕೆ ನಡೆದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಗಿರೀಶ ಬಿರಾದಾರ 2754 ಮತಗಳನ್ನು ಪಡೆಯುವ ಮೂಲಕ ಗೆಲುವು ತಮ್ಮಗಾಸಿಕೊಂಡಿದ್ದಾರೆ.
ವಾರ್ಡ್ ನಂ.29ರ ಸದಸ್ಯರಾಗಿದ್ದ ವಿಜಯಕುಮಾರ ಬಿರಾದಾರ ಅಕಾಲಿಕ ನಿಧನದಿಂದ ತೆರವಾಗಿದ್ದ ಕಾರಣಕ್ಕೆ ಉಪಚುನಾವಣೆ ನಡೆಸಲಾಗಿದೆ. ಕಳೆದ ಶನಿವಾರ ನಡೆದ ಉಪ ಚುನಾವಣೆಯಲ್ಲಿ ಶೇ 46.18 ರಷ್ಟು ಮತದಾನವಾಗಿದ್ದು, ಒಟ್ಟು 9,861 ಮತದಾರರ ಪೈಕಿ ಶೇ.46.18ರಷ್ಟು ಮಾತ್ರ ಮತದಾನವಾಗಿದೆ ಮತ್ತು ಮತ ಎಣಿಕೆ ನಡೆದು ಫಲಿತಾಂಶ ಹೊರ ಬಂದಿದ್ದು, ವಿಜಯಕುಮಾರ ಅವರ ಪುತ್ರ ಗಿರೀಶ ಬಿರಾದಾರ ಗೆಲುವು ದಕ್ಕಿಸಿಕೊಂಡಿದ್ದಾರೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಮಹಾನಗರ ಪಾಲಿಕೆಯು 35 ಸ್ಥಾನಗಳನ್ನು ಹೊಂದಿದೆ. ಸದ್ಯ ಬಿಜೆಪಿ 16, ಕಾಂಗ್ರೆಸ್ 10, ಜೆಡಿಎಸ್ 1, ಎಐಎಂಐಎಂ 2 ಹಾಗೂ ಪಕ್ಷೇತರ 5 ಸದಸ್ಯರಿದ್ದಾರೆ. ಜೆಡಿಎಸ್, ಎಐಎಂಐಎಂ ಹಾಗೂ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರದ ಗದ್ದುಗೆಯಲ್ಲಿ ಇದೆ.
ಇದನ್ನು ಓದಿದ್ದೀರಾ? ಬೀದರ್ | ಮಠಾಧೀಶರಿಗೆ ಮದುವೆ ಮಾಡಿಸಬೇಕು : ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ
ಬಿಜೆಪಿ ಅಭ್ಯರ್ಥಿ ಗಿರೀಶ 2,754 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಭಾಗಪ್ಪ ಏಳಗಂಟಿ 1,762 ಮತಗಳನ್ನು ಪಡೆದಿದ್ದಾರೆ. 38 ನೋಟಾ ಮತಗಳು ಚಲಾವಣೆಯಾಗಿವೆ ಎಂದು ಉಪ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.