ಬಹುಸಂಖ್ಯಾತ ಹಿಂದೂಗಳ ಬಗೆಗಿನ ಅಸಹಿಷ್ಣುತೆಯೇ ಪೇಜಾವರರ ‘ನಮ್ಮನ್ನು ಗೌರವಿಸದ ಸಂವಿಧಾನ’ ಹೇಳಿಕೆ !

Date:

Advertisements

ಸಂವಿಧಾನ ಜಾರಿಯಾಗುವುದಕ್ಕೂ ಮೊದಲು ಹಿಂದೂ ಧರ್ಮದ ಮೇಲೆ ಪೇಜಾವರ ಸೇರಿದಂತೆ ಉಡುಪಿ ಮಠಗಳ ದೌರ್ಜನ್ಯ ಹೇಗಿತ್ತು ಎಂಬುದನ್ನು ನೋಡಲು ಹಳೇ ಇತಿಹಾಸವನ್ನೊಮ್ಮೆ ಓದಬೇಕು.

‘ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು’ ಎಂದು ಉಡುಪಿ ಮಠದ ಪೇಜಾವರ ವಿಶ್ವಪ್ರಸನ್ನ ತೀರ್ಥರು ಆಗ್ರಹಿಸಿರುವುದು ಬಹುಸಂಖ್ಯಾತ ಹಿಂದೂಗಳ ಬಗೆಗೆ ಅವರಿಗಿರುವ ಅಸಹನೆಯನ್ನು ತೋರಿಸುತ್ತದೆ. ಇಲ್ಲಿಯವರೆಗೂ ಕೇವಲ ಮುಸ್ಲಿಮರ ಬಗೆಗೆ ಅಸಹಿಷ್ಣುತೆ ಪ್ರದರ್ಶಿಸುತ್ತಿದ್ದ ಪೇಜಾವರ ವಿಶ್ವೇಶತೀರ್ಥರು ಇದೀಗ ದಿಢೀರನೆ ಮುಸ್ಲಿಮರ ವಿಷಯವನ್ನು ಕೈಬಿಟ್ಟು ತಮ್ಮ ಸಮಾನಾಗಿ ನಿಲ್ಲುವ, ಕೂರುವ ಹಿಂದೂ ಧರ್ಮದ ಬಹುಸಂಖ್ಯಾತರ ಬಗೆಗೆ ಆಕ್ರೋಶಗೊಂಡಿದ್ದಾರೆ. ಆ ಕಾರಣಕ್ಕಾಗಿಯೇ ‘ನಮಗೆ ಗೌರವ ಕೊಡುವ ಸಂವಿಧಾನ ಬರಬೇಕು’ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ ಎಂಬುದನ್ನು ಹಿಂದುತ್ವ ಸಂಘಟನೆಗಳಲ್ಲಿರುವ ಹಿಂದುಳಿದ, ದಲಿತ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕು.

ಇಂದು ಅಂದರೆ, ನವೆಂಬರ್ 26 ಸಂವಿಧಾನ ಅಂಗೀಕಾರ ದಿನ. ನವೆಂಬರ್ 24 ರಂದೇ ಪೇಜಾವರ ಶ್ರೀಗಳು ಸಂವಿಧಾನ ಬದಲಿಸುವ ಬಗ್ಗೆ ಮಾತನಾಡಿದ್ದಾರೆ. ಯಾಕೆಂದರೆ, ನಮ್ಮ ರಾಷ್ಟ್ರದಲ್ಲಿ ಸಂವಿಧಾನ ಜಾರಿಯಾದ ಬಳಿಕ ಉಡುಪಿ ಶ್ರೀಕೃಷ್ಣ ಮಠದ ಹಲವು ಸಂಪ್ರದಾಯಗಳನ್ನು ಬದಲಿಸಲಾಗಿದೆ. ಅಸ್ಪೃಶ್ಯತೆ ಆಚರಣೆ, ಜೀತ ಪದ್ಧತಿ, ಮಠದ ಗೇಣಿ ಪದ್ಧತಿಗಳನ್ನು ಸಂಪೂರ್ಣ ತೊಡೆದು ಹಾಕಲಾಗಿದೆ. ಈ ಹಿಂದೆ ರಾಜರುಗಳು ಊರಿಗೂರನ್ನೇ ಮಠದ ಸ್ವಾಮೀಜಿಗಳಿಗೆ ಇನಾಮಾಗಿ ಕೊಡುತ್ತಿದ್ದರು. ರೈತರು ದುಡಿದು ಪುಕ್ಕಟೆಯಾಗಿ ಉಡುಪಿ ಮಠದ ಖಜಾನೆ ತುಂಬಿಸಬೇಕಿತ್ತು. ದಲಿತ, ಕೆಳವರ್ಗಗಳು ಮಠದಲ್ಲಿ ‘ಧಾರ್ಮಿಕ ಜೀತ’ ಮಾಡಬೇಕಿತ್ತು. ಈಗ ಪುಕ್ಕಟೆ ಕೆಲಸಗಾರರ ಸೌಲಭ್ಯ ನಿಂತು ಬಿಟ್ಟಿದೆ. ‘ಜಾತಿಗಳ ಬಹಿಷ್ಕಾರ’ದ ಆದೇಶ ನೀಡುತ್ತಿದ್ದ ಸ್ವಾಮೀಜಿಗೆ ಸಂವಿಧಾನ ಜಾರಿಯಾದ ಬಳಿಕ ಪೂಜೆ, ಕಾಣಿಕೆ ಸಂಗ್ರಹ, ಆಶೀರ್ವಚನ ಹೊರತಾದ ಅಧಿಕಾರಗಳಿಲ್ಲ.

ಸಂವಿಧಾನ ಜಾರಿಯಾಗುವುದಕ್ಕೂ ಮೊದಲು ಹಿಂದೂ ಧರ್ಮದ ಮೇಲೆ ಪೇಜಾವರ ಸೇರಿದಂತೆ ಉಡುಪಿ ಮಠಗಳ ದೌರ್ಜನ್ಯ ಹೇಗಿತ್ತು ಎಂಬುದನ್ನು ನೋಡಲು ಹಳೇ ಇತಿಹಾಸವನ್ನೊಮ್ಮೆ ಓದಬೇಕು.

ದಿನಾಂಕ 21.08.1930 ರಲ್ಲಿ ನಡೆದ ಘಟನೆ. ದಾವಣಗೆರೆಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ನಾರ್ಣಪ್ಪ ಎಂಬ ಸ್ಮಾರ್ತ ಬ್ರಾಹ್ಮಣರಿದ್ದರು. ಸ್ಮಾರ್ತ ಬ್ರಾಹ್ಮಣರಾಗಿದ್ದ ಅವರು ಶಂಕರಾಚಾರ್ಯರ ಮತಕ್ಕೆ ಧಾರಳವಾಗಿ ಸಹಾಯ ಮಾಡುತ್ತಿದ್ದರಿಂದ ಆಗಿನ ಪುತ್ತಿಗೆ ಮಠದ ಸ್ವಾಮೀಜಿಗಳು ‘ನಾರ್ಣಪ್ಪನವರ ಮತದವರು ಬ್ರಾಹ್ಮಣರಲ್ಲವೆಂದು, ಅವರ ಮತಸ್ಥರಿಂದ ನೀರು ಸಹ ಕುಡಿಯಬಾರದು. ಊರಿನ ಜನರು ಅವರಿಗೆ ಯಾವುದೇ ಸಹಕಾರ ನೀಡಬಾರದು’ ಎಂದು ಆದೇಶ ಹೊರಡಿಸಿದರು. ಆಗ ಮಧ್ಯಪ್ರವೇಶ ಮಾಡಿದ ಆಗಿನ ಪೇಜಾವರ ಮಠದ ವಿಶ್ವಮಾನ್ಯ ತೀರ್ಥ ಸ್ವಾಮಿಗಳು “ಕನ್ನಡ ಜಿಲ್ಲೆಯ ಕಲ್ಲಮಣ್ಣೂರು ಗ್ರಾಮದಲ್ಲಿ ವಾಸ ಮಾಡುವ ಮಂಜುನಾಥಯ್ಯನ ಮಕ್ಕಳು ಅನಂತಪ್ಪ ಮತ್ತು ಸುಬ್ಬಣ್ಣ ಎಂಬವರೂ, ಮಿಜಾರು ಗ್ರಾಮದ ನಾರಾಯಣ, ಮಹದೇವ, ವೆಂಕಣ್ಣ, ಶ್ರೀನಿವಾಸ, ಜನಾರ್ದನ ಮೊದಲಾದವರು ತೋಟಿಗರೆಂದೂ, ಅವರಿಗೆ ಗುರುಗಳಿಲ್ಲವೆಂದು ಅವರು ಬ್ರಾಹ್ಮಣರ ಪಂಕ್ತಿಯಲ್ಲಿ ಕುಳಿತು ಭೋಜನ ಮಾಡಲು ಅರ್ಹರಲ್ಲ’ ಎಂದು ದಿನಾಂಕ 21.08.1930ರಲ್ಲಿ ತನ್ನ ರಾಯಸವನ್ನು ಕೊಟ್ಟು ಕಳುಹಿಸಿದರು. (ಆಧಾರ : ಚಿತ್ತಲ್ ದುರ್ಗ ಸ್ಪೆಷಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಕೋರ್ಟ್ ಕ್ರಿಮಿನಲ್ ಕೇಸ್ 143 /1930-31 ಮತ್ತು ಶಿವಮೊಗ್ಗ ಜಿಲ್ಲಾ ಸೆಷನ್ ಕೋರ್ಟ್ CA, No. 03/ 1934-35 ಮತ್ತು CA. No. 04/ 1934-35).

ಈ ರೀತಿ ಹಿಂದೂ ಸಮಾಜದ ಯಾರನ್ನು ಬೇಕಿದ್ದರೂ ಪೇಜಾವರ ಮಠಾಧೀಶರು ಬಹಿಷ್ಕರಿಸಬಹುದಿತ್ತು. ತನ್ನ ಪಂಥವಲ್ಲದ ಬ್ರಾಹ್ಮಣರನ್ನೂ ಬಹಿಷ್ಕರಿಸುತ್ತಿದ್ದರು, ದೌರ್ಜನ್ಯ ನಡೆಸುತ್ತಿದ್ದರು. ಇಂತಹ ನೂರಾರು ಕೇಸುಗಳು ಉಡುಪಿ ಮಠದಲ್ಲಿದೆ.

ಈ ಕೇಸುಗಳು ಏನನ್ನು ಸೂಚಿಸುತ್ತದೆ ಎಂದರೆ, ಸಂವಿಧಾನ ಜಾರಿಯಲ್ಲಿ ಇಲ್ಲದ ದಿನಗಳಲ್ಲಿ ಪೇಜಾವರ ಮಠದವರು ಮುಸ್ಲಿಮರ ವಿರುದ್ದವೋ, ಕ್ರಿಶ್ಚಿಯನ್ನರ ವಿರುದ್ದವೋ ಅಥವಾ ಮುಸ್ಲಿಂ ರಾಜರ ವಿರುದ್ದವೋ, ಕ್ರಿಶ್ಚಿಯನ್ ಧರ್ಮದ ಬ್ರಿಟಿಷರ ವಿರುದ್ಧವೋ ಹೋರಾಟ ನಡೆಸಿಲ್ಲ. ಉಡುಪಿ ಮಠದ ಹೋರಾಟಗಳೆಲ್ಲವೂ ಇದ್ದಿದ್ದು ಹಿಂದೂ ಧರ್ಮದ ಬಂಟರು, ಬಿಲ್ಲವರು, ಮೂಲ್ಯರು, ದಲಿತರ ವಿರುದ್ಧವೇ ಆಗಿತ್ತು. ಅದರಲ್ಲೂ ಕೂಡಾ ಸ್ಮಾರ್ತ/ಸ್ಥಾನಿಕ ಬ್ರಾಹ್ಮಣರ ವಿರುದ್ಧ ಇದೇ ಉಡುಪಿ ಮಠದ ಮಾಧ್ವ ಸ್ವಾಮೀಜಿಗಳು ಹೈದರ್, ಟಿಪ್ಪು, ಬ್ರಿಟಿಷ್‌ ಅಧಿಕಾರಿಗಳನ್ನು ದಾರಿ ತಪ್ಪಿಸಿ ದೌರ್ಜನ್ಯ ನಡೆಸಿದರು.

ಸಂವಿಧಾನ ಪ್ರಸ್ತಾವನೆ

ಈಗಲೂ “ಸಂವಿಧಾನ ಬದಲಾಗಬೇಕು ಮತ್ತು ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕು” ಎಂದರೆ ಅದು ಮಾಧ್ವ ಬ್ರಾಹ್ಮಣರನ್ನು ಗೌರವಿಸುವ ಸಂವಿಧಾನ ಬೇಕು ಎಂದರ್ಥ. ನಮ್ಮನ್ನು ಗೌರವಿಸುವ ಸಂವಿಧಾನ ಬೇಕು ಎನ್ನುವ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳ ಹೇಳಿಕೆಗೆ ವಿಶಾಲ ಅರ್ಥ ಇದೆ. ಮೀಸಲಾತಿಗಳನ್ನು ರದ್ದು ಮಾಡಬೇಕು ಎನ್ನುವುದು ಇದರ ಮೊದಲ ಉದ್ದೇಶ. ಬ್ರಾಹ್ಮಣರನ್ನು ಹೊರತುಪಡಿಸಿದ ವ್ಯಕ್ತಿಗಳು ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗದಲ್ಲಿ ಇರುವುದು ಬ್ರಾಹ್ಮಣರ ಗೌರವಕ್ಕೆ ಚ್ಯುತಿ ಬಂದಂತೆ ಎಂಬುದು ಪೇಜಾವರರ ಸ್ಪಷ್ಟ ಆಲೋಚನೆಯಾಗಿದೆ. ವೇದ ಪಾರಂಗತ ಬ್ರಾಹ್ಮಣ ಮಠಾಧೀಶನೊಬ್ಬ ದಲಿತ, ಹಿಂದುಳಿದ ವರ್ಗದ ನ್ಯಾಯಾಧೀಶನಿಂದ ನ್ಯಾಯ ಹೇಳಿಸಿಕೊಳ್ಳುವುದನ್ನು ಅವರಿಗಿನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆ ಕಾರಣಕ್ಕಾಗಿಯೇ ಪೇಜಾವರರು ‘ನಮ್ಮನ್ನು ಗೌರವಿಸುವ ಸಂವಿಧಾನ ಬೇಕು’ ಎಂದು ಹೇಳಿ ಸುಮ್ಮನಾಗುವುದಿಲ್ಲ. ‘ಹಿಂದೂ ಧರ್ಮವನ್ನು ಗೌರವಿಸುವ ಪಕ್ಷ ಅಧಿಕಾರಕ್ಕೆ ಬರಬೇಕು. ಸನಾತನ ಮಂಡಳಿಯನ್ನು ಸ್ಥಾಪಿಸಬೇಕು. ಮಠ, ದೇಗುಲಗಳ ಆಸ್ತಿ, ವ್ಯವಹಾರದ ಸಂಪೂರ್ಣ ಜವಾಬ್ದಾರಿಯನ್ನು ಸಾಧು ಸಂತರಿಗೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ. ಮಠದ ಆಸ್ತಿ ವಿವಾದಗಳನ್ನು ಬಗೆಹರಿಸಿಕೊಳ್ಳಲು ಸಂವಿಧಾನ ಬದ್ಧ ನ್ಯಾಯಾಂಗ ವ್ಯವಸ್ಥೆಯನ್ನು ಬಳಸಿಕೊಳ್ಳಲು ಪೇಜಾವರರು ಸಿದ್ದರಿಲ್ಲ ಎಂದರ್ಥ.

ಇದನ್ನೂ ಓದಿ ಮುಸ್ಲಿಮರಿಗೆ ಮತದಾನದ ಹಕ್ಕಿಲ್ಲದಂತೆ ಮಾಡಬೇಕು: ಚಂದ್ರಶೇಖರ ಸ್ವಾಮೀಜಿ ದ್ವೇಷ ಭಾಷಣ

‘ನಮ್ಮನ್ನು ಗೌರವಿಸುವ ಸಂವಿಧಾನ ಬೇಕು’ ಎಂದರೆ ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಅಸ್ಪೃಶ್ಯತೆ, ದೌರ್ಜನ್ಯ, ಲಿಂಗ ತಾರತಮ್ಯ, ಪಂಕ್ತಿ ಬೇಧಗಳು, ಮಡೆಸ್ನಾನಗಳು, ದಲಿತ ಹಿಂದುಳಿದ ವರ್ಗಗಳಿಗೆ ದೇವಸ್ಥಾನ ಪ್ರವೇಶ ನಿರಾಕರಣೆಗಳು ಜಾರಿಯಲ್ಲಿಡಬೇಕು ಎಂದರ್ಥ. ಈಗ ಜಾರಿಯಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ ಸಂವಿಧಾನ ಎಲ್ಲರಿಗೂ ಘನತೆಯ ಬದುಕು ನೀಡಿದೆ. ಎಲ್ಲರಿಗೂ ಘನತೆಯ ಬದುಕು ಎಂದರೇ ಯಾರ ಮೇಲೂ ಅಲ್ಲ, ಯಾರೂ ಕೀಳೂ ಅಲ್ಲ ಎಂದರ್ಥ. ಇದನ್ನು ಹಲವು ದಶಕಗಳಿಂದ ಅನಿವಾರ್ಯವಾಗಿ ಸಹಿಸಿಕೊಂಡಿರುವ ಪೇಜಾವರರಂತಹ ಕರ್ಮಠರು ಈಗೀಗ ಬಹಿರಂಗವಾಗಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಹಾಗಾಗಿ ಇದು ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿಗಳಲ್ಲಿ ಇರುವ ಬಹುಸಂಖ್ಯಾತ ಹಿಂದೂಗಳ ಬಗೆಗಿನ ಅಸಹಿಷ್ಣುತೆಯೇ ಹೊರತು ಇನ್ನೇನೂ ಅಲ್ಲ!

ಸೂರಿಂಜೆ 1
ನವೀನ್‌ ಸೂರಿಂಜೆ
+ posts

ಪತ್ರಕರ್ತ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ನವೀನ್‌ ಸೂರಿಂಜೆ
ನವೀನ್‌ ಸೂರಿಂಜೆ
ಪತ್ರಕರ್ತ, ಲೇಖಕ

8 COMMENTS

    • ಈ ಅಂಬೇಡ್ಕರ್ ಸಂವಿಧಾನ ಬ್ರಾಹ್ಮಣರನ್ನು ಅಸ್ಪೃಶ್ಯರಂತೆ ಕಾಣುತ್ತಿದೆ. ಬೇಕಾದರೆ ಬ್ರಾಹ್ಮಣರ ಮನೆ ಮನೆಗೆ ಭೇಟಿ ನೀಡಿ ಅವರ ಸ್ಥಿತಿಗತಿಗಳನ್ನು ಗಮನಿಸು. ಆವಾಗ ನಿಜವಾಗಿ ಅಂಬೇಡ್ಕರ್ ಸಂವಿಧಾನದಿಂದ ಆದ ಅನ್ಯಾಯಗಳು ಗೊತ್ತಾಗುತ್ತೆ.

  1. ದೇಶದಲ್ಲಿನ ಐಕ್ಯತೆಗೆ ಒಡಕು ತರಲೆಂದು ಬರೆದಂತಹ ಲೇಖನ ಎಂಬುದು ನಿಚ್ಚಳವಾಗಿದೆ. ನಮ್ಮನ್ನು ಗೌರವಿಸುವ ಎಂದರೆ ಅತಿಯಾದ ಓಲೈಕೆಯ ಅಲ್ಪಸಂಖ್ಯಾತರೊಂದಿಗೆ “ಎಲ್ಲ ಹಿಂದುಗಳನ್ನೂ ಸೇರಿ” ಎಂಬ ಭಾವನೆಯೊಂದಿಗೆ ನೀಡಿದ ಉದಾರವಾದ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಿದಂತೆ ಬರೆದಿದ್ದೀರಿ. ಯಾರೋ ಕೊಡುವ ಕಿಲುಬು ಕಾಸಿಗೆ ಸಮಾಜ ದ್ರೋಹ ಚಿಂತನೆ ಮತ್ತು ಆತ್ಮ ಸಾಕ್ಷಿ ಸತ್ತಂತಹ ನಿಮ್ಮ ಮನಸ್ಥಿತಿಗೆ ಧಿಕ್ಕಾರ.

    • ವಾಹ್.. ಎಂತಹ ಉದಾರ ಹೇಳಿಕೆ. ಇನ್ನೂ ಉದಾರವಲ್ಲದ ಹೇಳಿಕೆಯನ್ನು ಕಲ್ಪಿಸಲು ಅಸಾಧ್ಯ.
      ಒಡಕು ತರಲೆಂದೇ ಹೇಳಿಕೆ ಕೊಡುವುದನ್ನು ನಿಲ್ಲಿಸಿ, ನಾವೆಲ್ಲಾ ಸಂವಿಧಾನದ ಆಶಯದಂತೆ ಸಹೋದರರಾಗಿ ಕೂಡಿಬಾಳುವ ಎನ್ನುವ ಬರಹ ನಿಮಗೆ ಒಡಕು ತರಲೆಂದು ಬರೆದ ಲೇಖನದಂತೆ ಕಾಣುತ್ತದೆ ಮತ್ತು ವಿಭಾಜಕ ಮನಸ್ಥಿತಿಯ ಹೇಳಿಕೆಗಳು ನಿಮಗೆ ಉದಾರ ಹೇಳಿಕೆಗಳಾಗಿ ಕಾಣುತ್ತದೆ. ಮನುಷ್ಯರನ್ನು ಮನುಷ್ಯರಾಗಿಯೇ ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳಿ. ಇದು ನಿಮಗೂ ಸಮಾಜಕ್ಕೂ ಒಳ್ಳೆಯದು.

  2. ಎಲ್ರೂ ಅವರವರ ಮೂಗಿನ ನೇರಕ್ಕೆ ಯೋಚಿಸಿ ಸತ್ಯಕ್ಕೆ ಅಪಚಾರ ಎಸಗುವುದು ಈ ದಿನಗಳಲ್ಲಿ ಸರ್ವೇ ಸಾಮಾನ್ಯ. ಪೇಜಾವರ ಶ್ರೀ ಮಾತಿನ ಮರ್ಮ ಬಿಚ್ಚಿ ಟ್ಟಿರುವ ಲೇಖನಿ ಸರಿಯಾಗಿ ಅರ್ಥ ಮಾಡಿಸಿದೆ. ಎಲ್ಲಾ ಭಾರತೀಯರಿಗೂ ಸಮಾನ ಅಧಿಕಾರ ಕಲ್ಪಿಸಿರುವ ಈಗಿರುವ ಸಂವಿಧಾನ ಯಾರಿಗೂ ಅನ್ಯಾಯ ಮಾಡಿಲ್ಲ.
    ದಬ್ಬಾಳಿಕೆಯ ರುಚಿ ಕಂಡವರು ಬೋನಿನಲ್ಲಿ ಇಟ್ಟ ಹುಲಿ ಗಳ ಹಾಗೆ ಚಡಪಡಿಸುತ್ತಾ ಇದ್ದಾರೆ ಅಷ್ಟೇ.

  3. This is a very irresponsible report. People come to the 21st century mind set. This is purely creating enmity among the hunan beings. Pls understand you r a reporter & should think for the progress of the country not to disturb the internal peace & integrity of the country. Already we r suffering a lot from the internal fights.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಹಲ್ಗಾಮ್ ದಾಳಿ, ಯುದ್ಧ ಮತ್ತು ಕ್ರಿಕೆಟ್- ಮೋದಿ ಅಸಹ್ಯ ರಾಜಕಾರಣಕ್ಕೆ ಎಲ್ಲವೂ ಬಲಿ

ಮೋದಿ ಅವರು ಏಷ್ಯಾ ಕಪ್ ಫೈನಲ್ ಗೆಲುವನ್ನು 'ಆಪರೇಷನ್ ಸಿಂಧೂರ್'ಗೆ ಹೋಲಿಸಿದ್ದಾರೆ....

ಲಡಾಖ್ ಗ್ರೌಂಡ್ ರಿಪೋರ್ಟ್ ಸರಣಿ-5 | ತೆರೆಮರೆಯ ನಾಯಕ ಸಜ್ಜಾದ್ ಕಾರ್ಗಿಲಿ: ಸಂದರ್ಶನ

ಲಡಾಖ್‌ಗೆ ರಾಜ್ಯವೊಂದರ ಸ್ಥಾನಮಾನ ಆಗ್ರಹದ ಆಂದೋಲನವನ್ನು ತೆರೆಮರೆಯಲ್ಲಿ ಅದೆಷ್ಟೋ ನಾಯಕರು ನಿರಂತರವಾಗಿ...

ಸಿದ್ದರಾಮಯ್ಯ ಗ್ಯಾರಂಟಿ ಕಾಪಿ: ಬಿಹಾರದ ಮಹಿಳೆಯರ ಮೂಗಿಗೆ ತುಪ್ಪ ಸವರಿದ ಮೋದಿ!

ಬಿಹಾರದ ರಾಜಕೀಯ ಚದುರಂಗದಾಟದಲ್ಲಿ, ಈ ಬಾರಿಯ ಚುನಾವಣೆಯಲ್ಲಿ ಗ್ಯಾರಂಟಿ ತಂತ್ರಗಾರಿಕೆ ಚುನಾವಣೆಯನ್ನು...

ಲಡಾಖ್‌ ಗ್ರೌಂಡ್ ರಿಪೋರ್ಟ್ ಸರಣಿ-4 | ಲಡಾಖಿನ ವಿದ್ಯಾರ್ಥಿಗಳ ಅಳಲು ಕೇಳುವವರಾರು?

ಹಲವು ವರ್ಷಗಳ ಅಸಮಾಧಾನ, ವೈರುಧ್ಯವನ್ನು ಬದಿಗೊತ್ತಿ ಲೇಹ್, ಕಾರ್ಗಿಲ್ ಜನರು ಒಂದಾಗಿದ್ದಾರೆ....

Download Eedina App Android / iOS

X