ರಾಯಚೂರು ನಗರಸಭೆಯ 31ರಲ್ಲಿ ವಾರ್ಡ್ ಉಪಚುನಾವಣೆ ನಡೆದಿದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಅಂಜನಮ್ಮ ಶ್ಯಾಮ್ ಸುಂದರ್ ಅವರು ಗೆಲುವು ಸಾಧಿಸಿದ್ದಾರೆ.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಮತ ಎಣಿಕೆ ಮುಕ್ತಾಯದ ನಂತರ ಚುನಾವಣಾಧಿಕಾರಿಗಳಾದ ಬಿ.ವೈ.ವಾಲ್ಮೀಕಿಯವರು ಹಾಗೂ ರಾಯಚೂರು ತಹಶೀಲ್ದಾರ್ ಸುರೇಶ ವರ್ಮ ಅವರ ಸಮ್ಮುಖದಲ್ಲಿ ರಾಯಚೂರು ನಗರಸಭೆಯ ವಾರ್ಡ್ ನಂಬರ್ 31ರ ಫಲಿತಾಂಶ ಪ್ರಕಟಿಸಿದರು.
ಇವಿಎಂ ಮತಗಳ ಮತಪತ್ರ ಎಣಿಕೆ ಕಾರ್ಯ ಮುಕ್ತಾಯದ ನಂತರ ಅಭ್ಯರ್ಥಿ ಅಂಜನಮ್ಮ ಶ್ಯಾಮ್ ಸುಂದರ್ ಅವರು 1,268 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿಯ 986 ಮತಗಳನ್ನು ದಾಖಲಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಹಾಸ್ಟೆಲ್ ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯ
“ಒಟ್ಟು 2,274 ಮತಗಳ ಪೈಕಿ ಕಾಂಗ್ರೆಸ್ 1,268 ಮತಗಳನ್ನು ಪಡೆದಿದ್ದು, ಬಿಜೆಪಿಗೆ 986 ಹಾಗೂ ಇತರೆ ಪಕ್ಷಕ್ಕೆ 20 ಮತಗಳು ಹಂಚಿಕೆಯಾಗಿವೆ” ಎಂದರು.
ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಂಜನಮ್ಮ ಶ್ಯಾಮ್ ಸುಂದರ್ ಅವರಿಗೆ ಇದೇ ವೇಳೆ ಪ್ರಮಾಣ ಪತ್ರ ನೀಡಿದರು.
