ರಾಜ್ಯಮಟ್ಟದಲ್ಲಿ ನಡೆದ ಪೊಲೀಸ್ ಕ್ರೀಡಾ ಕೂಟದಲ್ಲಿ ಭಾಗವಹಿಸಿ ರಾಯಚೂರು ಜಿಲ್ಲೆಯ ಮಸ್ಕಿ ಪೊಲೀಸ್ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಅವರನ್ನು ಎಸ್‌ಪಿ ಪುಟ್ಟ ಮಾದಯ್ಯ ಮತ್ತು ಫಜಿಯುದ್ದೀನ್ ಅಭಿನಂದಿಸಿದ್ದಾರೆ.
ಮಸ್ಕಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್‌ಗಳಾದ ಜಗನ್ನಾಥ(ಸಿಪಿಸಿ439) ಮತ್ತು ಡಿಆರ್ ವಿಭಾಗದ ಅಮರೇಶ(ಎಪಿಸಿ-210) ಎಂಬುವವರು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಬೌದ್ದರ ಧಾರ್ಮಿಕ ಹಕ್ಕಿಗಾಗಿ ಬೃಹತ್ ಪ್ರತಿಭಟನೆ
ಹೆಡ್ ಕಾನ್‌ಸ್ಟೆಬಲ್ ಜಗನ್ನಾಥ ಅವರು ಏಡ್ಸ್ ವೈಜ್ಞಾನಿಕ ತನಿಖೆ ವಿಷಯದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಿದ್ದಾರೆ. ಡಿಆರ್ ವಿಭಾಗದ ಅಮರೇಶ ಅವರು ಉತ್ತಮ ಮಾತುಗಾರಿಕೆ ವಿಷಯದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಪಡೆದಿದ್ದಾರೆ.
