ಬೀದರ್‌ | ಬೌದ್ದರ ಧಾರ್ಮಿಕ ಹಕ್ಕಿಗಾಗಿ ಬೃಹತ್ ಪ್ರತಿಭಟನೆ

Date:

Advertisements

ಬೌದ್ದರ ಹಕ್ಕಿಗಾಗಿ ಹಾಗೂ ಬಿ.ಟಿ ಕಾಯ್ದೆ-1949 ಅನ್ನು ರದ್ದುಗೊಳಿಸಿ ಬುದ್ದಗಯಾದ ಮಹಾಬೋಧಿ ಮಹಾವಿಹಾರದ ಆಡಳಿತ ಸಂಪೂರ್ಣವಾಗಿ ಬೌದ್ದರಿಗೆ ನೀಡಲು ದೇಶಾದ್ಯಂತ ಆಲ್ ಇಂಡಿಯಾ ಬುದ್ದಿಷ್ಟ್ ಫೋರಮ್ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಬೆಂಬಲಿಸಿ ಬೀದರ್‌ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಬೀದರ್ ಬುದ್ದಿಷ್ಟ ವಿಹಾರದ ಸಂಸ್ಥಾಪಕರಾದ ಭಂತೆ ಧಮ್ಮಾನಂದ ಮಹಾಥೆರೊ, ಅಧ್ಯಕ್ಷರಾದ ಭಂತೆ ಜ್ಞಾನ ಸಾಗರ, ಕಾರ್ಯದರ್ಶಿ ಭಂತೆ ಸಂಘರಖ್ಖೀತ, ರೇಕುಳಗಿ ಮೌಂಟ್‌ನ ಭಂತೆ ಧರ್ಮಪಾಲ, ಭಾಲ್ಕಿಯ ಭಂತೆ ನೌಪಾಲ ಹಾಗೂ ಭಿಕ್ಕು ಸಂಘ ಹಾಗೂ ವಿವಿಧ ಬೌದ್ಧ ಸಂಘಟನೆಗಳು, ದಲಿತ ಸಂಘಟನೆಗಳ ಮತ್ತು ಸಂವಿಧಾನ ಸಂರಕ್ಷಣಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ಜರುಗಿತು.

ನಗರದ ಜನವಾಡ ರಸ್ತೆಯಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಭವನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಭಗತಸಿಂಗ್ ವೃತ್ತ, ತಹಸೀಲ್ ಕಚೇರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ತಲುಪಿತು. ರಾಜ್ಯದ ಮುಖ್ಯಮಂತ್ರಿ, ಪ್ರಧಾನ ಮಂತ್ರಿ, ರಾಷ್ಟ್ರಪತಿ ಹಾಗೂ ಬುದ್ದಗಯಾ ಬಿಹಾರದಲ್ಲಿರುವ ಕಾರಣ ಬಿಹಾರದ ರಾಜ್ಯಪಾಲ, ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ್‌ ಶೀಲವಂತ ಅವರಿಗೆ ಸಲ್ಲಿಸಿದರು.

Advertisements

ಈ ಸುದ್ದಿ ಓದಿದ್ದೀರಾ? ಮುಸ್ಲಿಮರಿಗೆ ಮತದಾನದ ಹಕ್ಕಿಲ್ಲದಂತೆ ಮಾಡಬೇಕು: ಚಂದ್ರಶೇಖರ ಸ್ವಾಮೀಜಿ

ಪ್ರತಿಭಟನೆಯಲ್ಲಿ ಬೌದ್ಧ ಆಚಾರ್ಯ ಮಿಲಿಂದ ಗೂರುಜಿ, ಮುಖಂಡರಾದ ಧರ್ಮರಾಯ ಘಾಂಗ್ರೆ, ರಮೇಶ ಡಾಕುಳಗಿ, ಅನೀಲಕುಮಾರ ಬೆಲ್ದಾರ್, ಬಾಬು ಪಾಸ್ವಾನ್, ರಾಜಕುಮಾರ ಮೂಲಭಾರತಿ,‌ ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ಮಹೇಶ ಗೋರನಾಳಕರ್, ಸುರೇಶ ಜೋಜನಾಕರ್, ಅಂಬಾದಾಸ ಚಕ್ರವರ್ತಿ, ಕಾಶಿನಾಥ ಚೆಲ್ವಾ, ರಾಜಪ್ಪಾ ಗೂನಳ್ಳಿಕರ್, ಬಾಬುರಾವ ಮಿಠಾರೆ, ಚಂದ್ರಕಾಂತ ನಿರಾಟೆ, ಅರುಣ ಪಟೇಲ್, ಅವಿನಾಶ ದಿನೆ, ಭರತ ಕಾಂಬಳೆ, ರಾಜಕುಮಾರ ವಾಘಮಾರೆ, ಸಂದೀಪ ಕಾಂಟೆ, ಪ್ರಕಾಶ ರಾವಣ, ವಿನೋದಕುಮಾರ ಶಾಕ್ಯಪಾಲ್, ಪ್ರದೀಪ ನಾಟೆಕರ್, ಚಂದ್ರಕಲಾ ಬಡಿಗೇರ, ಮಂಜುಳಾ ಭಾವಿದೊಡ್ಡಿ ಪುನಿತಾ ಗಾಯಕವಾಡ, ಗಂಗಮ್ಮ ಫುಲೆ, ಲಕ್ಷ್ಮಿ ಹೊಸಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X