ಜಗತ್ತಿನ ಎಲ್ಲ ಇತಿಹಾಸವನ್ನು ಅರಿತುಕೊಳ್ಳುವ ಜೊತೆಗೆ ಇತಿಹಾಸವನ್ನು ಅರಿಯಲಾರದವರು ಇತಿಹಾಸ ರಚಿಸಲಾರರು ಎಂಬ ಮಾತನು ಮರೆಯಬಾರದು ಮತ್ತು ಸಂವಿಧಾನವು ನಮ್ಮ ರಕ್ಷಾ ಕವಚವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪರುಶುರಾಮ ದೊಡಮನಿ ಹೇಳಿದರು.
ನಗರದ ಅಂಜುಮನ್ ಕಾಲೇಜಿನಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ರಾಜ್ಯಶಾಸ್ತ್ರ ವಿಭಾಗ ಮತ್ತು ಎನ್ಎಸ್ಎಸ್ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿವಿಧ ಭಾಷೆ, ಧರ್ಮ ಮತ್ತು ಆಚರಣೆಗಳಿರುವ ನಮ್ಮ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಗೆ ಉತ್ತಮ ಆಯ್ಕೆಯಾಗಿದ್ದು, ಮನೆಯಿಂದ ಹೊರ ಬಂದ ಮೇಲೆ ನಾವುಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕು.
ಸಂವಿಧಾನವು ಸಂಪ್ರದಾಯ ಮತ್ತು ಧಾರ್ಮಿಕತೆಯ ಗ್ರಂಥವಲ್ಲ. ನಾವೆಲ್ಲರೂ ಭಾರತೀಯರು ವಿವಿಧತೆಯಲ್ಲಿ ಏಕತೆಯನ್ನು ಕಾಣುವ ನಮ್ಮ ದೇಶದಲ್ಲಿ ಸಹಬಾಳ್ವೆಯಿಂದ ಬಾಳುವುದನ್ನು ಕಲೆಯಬೇಕು. ಪ್ರೀತಿಯಿಂದ ಇದ್ದರೆ ಎಲ್ಲವನ್ನೂ ಗೆಲ್ಲಲು ಸಾಧ್ಯವಿದೆ. ಸಂವಿಧಾನವನ್ನು ಎಲ್ಲರೂ ಗೌರವ ಮತ್ತು ಪ್ರೀತಿಯಿಂದ ಕಾಣಬೇಕು ಎಂದರು.
ಈ ವರದಿ ಓದಿದ್ದೀರಾ? ಧಾರವಾಡ | ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸಂಯುಕ್ತ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ
ಇಂದು ನಾವೆಲ್ಲರೂ ಹೆಮ್ಮೆ ಪಡುವ ದಿನ. ನಮ್ಮ ಸಂವಿಧಾನ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಒತ್ತಿ ಹೇಳುತ್ತದೆ. ನಾವು ಮೊದಲು ಮಾನವರಾಗಬೇಕು ಮತ್ತು ಎಲ್ಲರನ್ನು ಪ್ರೀತಿಸಬೇಕು. ಭಾರತೀಯರಾದ ನಾವು ಸಂವಿಧಾನ ಚೌಕಟ್ಟಿನಲ್ಲಿ ಬದುಕಬೇಕು. ಕಾನೂನು ವ್ಯಾಪ್ತಿಯಲ್ಲಿ ಎಲ್ಲರೂ ಸಮಾನರು ಎಂದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.