ಎಸ್.ಕೆ.ಎಂ ಕರೆಯ ಮೇರೆಗೆ ದೇಶಾದ್ಯಂತ ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಕಾರ್ಮಿಕಾ ವಿರೋಧಿ ನೀತಿಗಳ ವಿರುದ್ದ ಎಚ್ಚರಿಕೆ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಹೆಚ್.ಆರ್ ಬಸವರಾಜಪ್ಪ ಮಾತನಾಡಿ, ದೇಶಾದ್ಯಂತ 500ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ, ಕಾರ್ಮಿಕ, ದಲಿತ, ದುಡಿಯುವ ವರ್ಗದ ಜನರ ವಿರೋಧಿ ಕಾನೂನುಗಳನ್ನು ಸಂಪೂರ್ಣ ರದ್ದು ಮಾಡಬೇಕು. ಕೇಂದ್ರ ಸರ್ಕಾರ ಎಮ್.ಎಸ್.ಪಿ’ಯನ್ನು ಕಾನೂನು ಬದ್ದ ಮಾಡಬೇಕು. ರಾಜ್ಯ ಸರ್ಕಾರ ಮಲೆನಾಡಿನಲ್ಲಿ ರಾಜ್ಯಕ್ಕೆ ಬೆಳಕು ಕೊಟ್ಟಂತ ಶರಾವತಿ ಮುಳುಗಡೆ ಸಂತ್ರಸ್ಥರನ್ನು ಹಾಗೂ ಬಗರ್ ಹುಕ್ಕುಂ ಸಾಗುವಾಳಿದಾರರನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದನ್ನ ನಿಲ್ಲಿಸಬೇಕು. ಕೃಷಿ ಕಾಯ್ದೆಗಳನ್ನು ವಾಪಾಸ್ಸು ಪಡೆದು ಮುಖ್ಯಮಂತ್ರಿಗಳು 3 ದಿನಗಳ ಜನತಾ ಅಧಿವೇಶನವನ್ನು ರೈತ, ಕಾರ್ಮಿಕ, ದಲಿತ ಮುಖಂಡರನ್ನು ಒಳಗೊಂಡಂತೆ ಕರೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವರದಿ ಓದಿದ್ದೀರಾ? ರಾಯಚೂರು | ಭಾರಿ ಬೆಲೆ ಬಾಳುವ 10.200 ಕೆಜಿ ಗಾಂಜಾ ಜಪ್ತಿ
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಟಿ.ಎಂ ಚಂದ್ರಪ್ಪ, ಗೌರವಾಧ್ಯಕ್ಷ ಈಶಣ್ಣ, ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ, ಜಿಲ್ಲಾ ಉಪಾಧ್ಯಕ್ಷರಾದ ಪಿ.ಶೇಖರಪ್ಪ, ಎಂ.ಮಹದೇವಪ್ಪ, ಎಂ.ಮಹೇಶ್ವರಪ್ಪ, ಜಿಲ್ಲಾ ಕಾರ್ಯದರ್ಶಿ ಗುರುಶಾಂತ, ಹಸಿರುಸೇನೆ ಸಂಚಾಲಕ ಎಂ.ಡಿ ನಾಗರಾಜ್, ಶಿವಮೊಗ್ಗ ತಾಲೂಕಾಧ್ಯಕ್ಷ ಸಿ.ಚಂದ್ರಪ್ಪ, ಭದ್ರಾವತಿ ತಾಲೂಕಾಧ್ಯಕ್ಷ ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಶಿಕಾರಿಪುರ ತಾಲೂಕಾಧ್ಯಕ್ಷ ಪ್ರಮೋದ್, ಹೊಸನಗರ ತಾಲೂಕು ಕಾರ್ಯದರ್ಶಿ ಸುಂಗಂಧರಾಜು ಹಾಗೂ ಪದಾಧಿಕಾರಿಗಳು ಹಾಜರಿದ್ದರು.