ಗ್ರಾಮ ಆಡಳಿತ ಅಧಿಕಾರಿ -2024 ವಿಒಎ ನೇಮಕಾತಿ ಪರೀಕ್ಷೆಯ ಜಿಲ್ಲಾವಾರು ತಾತ್ಕಾಲಿಕ ಸ್ಕೋರ್ ಲಿಸ್ಟ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇಂದು ಪ್ರಕಟಿಸಿದೆ. ಅಭ್ಯರ್ಥಿಗಳು https://cetonline.karnataka.gov.in/kea/vacrec24 ಪರಿಶೀಲಿಸಿಕೊಳ್ಳಬಹುದು.
ಪೇಪರ್ 1 ಮತ್ತು ಪೇಪರ್ 2ರ ಅಂಕಗಳ ಲಿಸ್ಟ್ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ನೋಡಬಹುದು. ಅಕ್ಟೋಬರ್ 27ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು. ಪೇಪರ್ -1 100 ಅಂಕಗಳಿಗೆ ನೆಗಟಿವ್ ಅಂಕಗಳಿದ್ದವು. ಪೇಪರ್ -2 100 ಅಂಕಗಳಿಗೂ ನೆಗಟಿವ್ ಅಂಕಗಳಿದ್ದವು. ಪಿಯುಸಿ ಅಂಕಗಳನ್ನು ಆಯ್ಕೆಗೆ ಪರಿಗಣಿಸುವುದಿಲ್ಲ.
ಮೆರಿಟ್ ಆಧಾರದ ಮೇಲೆ ಈ ನೇಮಕಾತಿ ನಡೆಯಲಿದೆ. ಈ ಪಟ್ಟಿಯ ಅನುಸಾರ ಕೆಇಎ ಶೀಘ್ರದಲ್ಲೇ ಜಿಲ್ಲಾವಾರು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಿದೆ.