ಕನ್ನಡ ಹೋರಾಟಗಾರ ಇಲಿಯಾಜ್ ಅವರಿಗೆ ಬೆಂಗಳೂರಿನ ಸುವರ್ಣ ಕರ್ನಾಟಕ ಕಾರ್ಮಿಕರ ಸಂಘಟನೆಯಿಂದ “ನಮ್ಮ ಹೆಮ್ಮೆಯ ಕರ್ನಾಟಕ ರತ್ನ” ಪ್ರಶಸ್ತಿ ನೀಡಿ ಗೌರವಿಸಿದೆ.
ದಾವಣಗೆರೆ ಜಿಲ್ಲೆಯ ಹರಿಹರ ನಗರದ ಕನ್ನಡಪರ ಹೋರಾಟಗಾರ, ಕನ್ನಡದ ಕೆಲಸ ಕಾರ್ಯಗಳಲ್ಲಿ ಸದಾ ಮುಂದಿರುವ ಹೆಮ್ಮೆಯ ಹೋರಾಟಗಾರ ಇಲಿಯಾಸ್ ಅವರು ಸುದೀರ್ಘ ವರ್ಷಗಳ ಕನ್ನಡ ನಾಡು ನುಡಿಗಾಗಿ ಮಾಡಿದ ಕನ್ನಡ ಸೇವೆ ಮತ್ತು ಕನ್ನಡದ ಕೈಂಕರ್ಯವನ್ನು ಗುರುತಿಸಿ “ನಮ್ಮ ಹೆಮ್ಮೆಯ ಕರ್ನಾಟಕ ರತ್ನ” ಪ್ರಶಸ್ತಿ ನೀಡಿ ಗೌರವಿಸಿದೆ.
ಹರಿಹರದ ಕನ್ನಡ ಹೋರಾಟಗಾರರೊಬ್ಬರಿಗೆ ಈ ಪ್ರಶಸ್ತಿ ಸಂದಿದ್ದು, ಜಿಲ್ಲೆಯ ಹೋರಾಟಗಾರರಲ್ಲಿ ಹೆಮ್ಮೆ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಹರಿಹರದಲ್ಲಿಯೂ ಕೂಡ ಹಲವು ಸಂಘಟನೆಗಳು, ಹಲವು ವೇದಿಕೆಗಳ ಮುಖಂಡರು ಇಲಿಯಾಸ್ ಅವರಿಗೆ ಸನ್ಮಾನ ಮಾಡಿ ಗೌರವಿಸಿದರು. ಪ್ರವಾಸಿ ಮಂದಿರದಲ್ಲಿ ಪತ್ರಕರ್ತರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ವಿಶ್ವ ಕರ್ನಾಟಕ ವೇದಿಕೆ ಕಾರ್ಯಕರ್ತರು “ನಮ್ಮ ಹೆಮ್ಮೆಯ ಕರ್ನಾಟಕ ರತ್ನ” ಪ್ರಶಸ್ತಿ ಪಡೆದ ಇಲಿಯಾಜ್ ಅವರಿಗೆ ಗೌರವಿಸಿ ಅಭಿನಂದನೆ ಸಲ್ಲಿಸಿದರು.
ಹರಿಹರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಬಾಸಲಿಕ ಚರ್ಚ್‌ನ ಫಾದರ್ ಅವರು ಆತ್ಮೀಯವಾಗಿ ಬರಮಾಡಿಕೊಂಡು ಅಭಿನಂದನೆ ಸಲ್ಲಿಸಿ ಸಂಸ್ಥೆಯ ಪರವಾಗಿ ಗೌರವಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಅಬಕಾರಿ ಅಧಿಕಾರಿಗಳ ವಿರುದ್ಧ ₹40 ಲಕ್ಷ ಲಂಚದ ಆರೋಪ; ಲೋಕಾಯುಕ್ತ ತನಿಖೆ ಆರಂಭ
ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣ, ಜೈ ಕರುನಾಡು ರಕ್ಷಣಾ ಸಂಘದ ವತಿಯಿಂದ ಹಾಗೂ ಹರಿಹರದ ನಾಲ ಮೊಹಲ್ಲಾ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲೂ ಕೂಡ ಇಲಿಯಾಸ್ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಜೈ ಕರುನಾಡು ರಕ್ಷಣಾ ಸಂಘದ ರಾಜ್ಯಾಧ್ಯಕ್ಷ ಎಂ ಶ್ರೀನಿವಾಸ್ ಕೊಡ್ಲಿ, ಸಾಹಿತಿ ಕಲೀಂ ಪಾಷ, ಪತ್ರಕರ್ತರಾದ ಕೊಟ್ರೇಶ್, ಯಮನೂರ್, ಅಲ್ತಾಫ್, ಕನ್ನಡಪರ ಹೋರಾಟಗಾರಾದ ನಿಜಗುಣ, ಕೊಟ್ರಪ್ಪ, ರೇವಣಪ್ಪ, ರಿಯಾಜ್ ಅಹ್ಮದ್, ಗೌಸ್ ಪೀರ್, ಯುನಸ್ ಅಹಮದ್, ಮಹಮದ್ ಹರೀಫ್, ಹುಸೇನ್ ಇದ್ದರು.