11 ವರ್ಷದ ಬಾಲಕಿ ಮೇಲೆ 45 ವರ್ಷದ ವ್ಯಕ್ತಿಯೋರ್ವ ಅತ್ಯಾಚಾರವೆಸಗಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.
ಬಾಲಕಿ ಖಾಸಗಿ ಭಾಗದಲ್ಲಿ ಉರಿ ಬಂದ ಹಿನ್ನೆಲೆ ತನ್ನ ತಾಯಿಗೆ ತಿಳಿಸಿದ್ದಾಳೆ. ತಾಯಿ ಮುಳುಬಾಗಿಲು ತಾಲೂಕು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಲಾಗಿ ವೈದ್ಯರು ಅತ್ಯಾಚಾರ ನಡೆದಿರುವ ಕುರಿತು ತಾಯಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಚಿಂತಾಮಣಿ | ಅಧಿಕ ಬೆಲೆಗೆ ಔಷಧಿ ಮಾರಾಟ; ಮೆಡಿಕಲ್ ಶಾಪ್‌ಗೆ ಬೀಗ
ಈ ಕುರಿತು ಬಾಲಕಿಗೆ ಕೇಳಿದಾಗ ಪ್ರಾಥಮಿಕವಾಗಿ ಹೆಸರು ಹೇಳಿಲ್ಲ. ಆತಂಕಗೊಂಡ ತಾಯಿ ಮುಳುಬಾಗಿಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಹಿನ್ನೆಲೆ ಪೊಲೀಸರು 6 ಮಂದಿ ಸಂಶಯಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆಸಿ ತನಿಖೆ ನಡೆಸಿದ್ದರು. ಆ ನಂತರ ಬಾಲಕಿ 45 ವರ್ಷದ ವ್ಯಕ್ತಿಯೋರ್ವ ಮನೆಯ ಶೌಚಾಲಯದಲ್ಲಿ ಅತ್ಯಾಚಾರ ಎಸಗಿರುವುದಾಗಿ ತಿಳಿಸಿದ್ದಾಳೆ.
ಬಾಲಕಿ ಹೇಳಿಕೆ ಮೇರೆಗೆ ಪೊಲೀಸರು ಆರೋಪಿತ ವ್ಯಕ್ತಿಯನ್ನು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.