ಫೇಸ್‌ಬುಕ್‌ನಲ್ಲಿ ನಡೆದ ಕೆಲವು ಚರ್ಚೆಗಳ ಹಿನ್ನೆಲೆಯಲ್ಲಿ ನಿನ್ನೆ ‘ಲಕ್ಕಿ ಭಾಸ್ಕರ್’ ನೋಡಿದೆ. ಈವತ್ತಿನ ‘ನೈತಿಕತೆ’ಯ ಮಟ್ಟವನ್ನು 90ರ ದಶಕದ ನೈಜ ಘಟನೆಯೊಂದನ್ನು ಬಳಸಿಕೊಂಡು ಕನ್ವೀನಿಯಂಟಾಗಿ ಮುಂದಿಡುವ ಈ ಚಿತ್ರ ಈವತ್ತಿನ ಅರೆಬರೆ AI ಜಗತ್ತಿನಲ್ಲಿ ಅತ್ಯಂತ ಅಪಾಯಕಾರಿ ಅನ್ನಿಸಿತು.
90ರ ದಶಕದ ಆರಂಭದಲ್ಲಿ, ಸರ್ಕಾರದ ಸೆಕ್ಯುರಿಟಿಗಳ ಅಂತರ್ ಬ್ಯಾಂಕ್ ವ್ಯವಹಾರದಲ್ಲಿ ಮಧ್ಯೆ ತಲೆತೂರಿಸಿದ ದಳ್ಳಾಲಿಗಳು ಕಾಗದದ ಮೇಲೆ (ಬ್ಯಾಂಕರ್ ರಶೀದಿ-BR) ಈ ವ್ಯವಹಾರ ನಿಜಕ್ಕೂ ಆಗಿರುವಂತೆ ತೋರಿಸಿ, ಆ ಹಣವನ್ನು ಅಕ್ರಮವಾಗಿ ಶೇರು ಮಾರುಕಟ್ಟೆಯಲ್ಲಿ ತೊಡಗಿಸಿ, ಊಹಾಪೋಹದ ವ್ಯಾಪಾರಗಳ ಮೂಲಕ ಅಂದಾದುಂದು ಲಾಭಗಳಿಸುವ ಆಟ ಆರಂಭಿಸಿದ್ದರು. ಸಾಮಾನ್ಯವಾಗಿ ಒಂದೆರಡು ವಾರಗಳಲ್ಲಿ ಹಿಂದಿರುಗಿಸುವ ನೂರಾರು ಬ್ಯಾಂಕುಗಳ ರೆಡಿಫಾರ್ವರ್ಡ್ ಡೀಲುಗಳನ್ನು ಮ್ಯಾನುವಲ್ ಆಗಿ ದಾಖಲಿಸಿಕೊಳ್ಳುವುದು ನಿಯಂತ್ರಕ ಸಂಸ್ಥೆಯಾದ ರಿಸರ್ವ್ ಬ್ಯಾಂಕಿಗೆ ಪ್ರಾಕ್ಟಿಕಲಿ ಸಾಧ್ಯ ಆಗುತ್ತಿರಲಿಲ್ಲ. ಹಾಗಾಗಿ ಹರ್ಷದ್ ಮೆಹ್ತಾನಂತಹ ಖದೀಮರಿಗೆ ಹಾದಿ ಸಲೀಸಾಗಿತ್ತು. ಇದು ಎಲ್ಲಿಯ ತನಕ ಹೋಗಿತ್ತೆಂದರೆ, ಬ್ಯಾಂಕು ಭದ್ರತಾಪತ್ರ ಹೊಂದಿಲ್ಲದಿದ್ದರೂ BR ನೀಡಿದ ಘಟನೆಗಳಿದ್ದವು. ಕಡೆಗೆ ಹರ್ಷದ್ ವಿರುದ್ಧ 27 ಕ್ರಿಮಿನಲ್ ಪ್ರಕರಣಗಳು ದಾಖಲಾಗಿ, ಅವುಗಳಲ್ಲಿ 4ರಲ್ಲಿ ಶಿಕ್ಷೆ ಆಗಿತ್ತು. (ಈ ಘಟನೆಯ ಸಂಪೂರ್ಣ ವಿವರಗಳನ್ನು ನಾನು ಅನುವಾದಿಸಿದ “M ಡಾಕ್ಯುಮೆಂಟ್”ನಲ್ಲಿ ಸ್ವತಃ ಈ ಸಮಸ್ಯೆಯನ್ನು ಸರಿಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಡಾ| ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ಅವರು ದಾಖಲಿಸಿದ್ದಾರೆ.)
ಮ್ಯಾನುವಲ್ ಶ್ರಮದ ಅಗತ್ಯ ಇರುವಲ್ಲಿ ಸಕಾಲಕ್ಕೆ ಕೆಲಸ ಆಗದ ಕಾರಣಕ್ಕೆ ಸಂಭವಿಸಿದ ಈ ಲೋಪದ ಅಂತಿಮ ಫಲಶ್ರುತಿ ಎಂದರೆ, ಬ್ಯಾಂಕುಗಳ ಕಂಪ್ಯೂಟರೀಕರಣಕ್ಕೆ ವೇಗ ದೊರೆತದ್ದು ಮತ್ತು ಅಮೆರಿಕಕ್ಕಿಂತಲೂ ಮೊದಲೇ ಭಾರತದಲ್ಲಿ ಸ್ಟಾಕ್‌ಮಾರುಕಟ್ಟೆ “ರಿಯಲ್ ಟೈಮ್”ಗೆ ಡಿಜಿಟಲೀಕರಣಗೊಂಡದ್ದು.
ಮೇಲೆ ವಿವರಿಸಿದ ವಂಚನೆಯ ಕಥೆಯ ಎಳೆ ಹಿಡಿದುಕೊಂಡು, ಕಾನೂನು ಪುಸ್ತಕದ ನಿಯಮಗಳಿಗೆ ಧಕ್ಕೆ ಆಗದಂತೆ ಯಾವುದೇ ವಂಚನೆ ನಡೆದರೆ, ಸಿಕ್ಕಿ ಬೀಳದಿದ್ದರೆ ‘ತೊಂದರೆ ಇಲ್ಲ’ ಎಂದು ಬಿಂಬಿಸುವ ಈ ಚಿತ್ರ, ಈವತ್ತಿನ ಸಾರ್ವಜನಿಕ ‘ನೈತಿಕತೆ’ಯ ದರ್ಜೆಯ ಹಿನ್ನೆಲೆಯಲ್ಲಿ ಅತ್ಯಂತ ಅಪಾಯಕಾರಿ, ರಿಗ್ರೆಸಿವ್ ಮತ್ತು ನೋಡುಗರಲ್ಲಿ ಕಳ್ಳತನದ ಕಿಕ್ಕಿಗೆ, ಮತ್ತಿಗೆ-ಗಮ್ಮತ್ತಿಗೆ ‘ಅಡ್ರೀನಾಲಿನ್’ ಪಂಪ್ ಮಾಡುವಂತಹ ಚಿತ್ರ.
ಈ ವರದಿ ಓದಿದ್ದೀರಾ?: ಬಿಜೆಪಿ ಭಿನ್ನಮತ ಶಮನವಾಗದಿರಲು ಬಿ ಎಲ್ ಸಂತೋಷ್ ಕಾರಣವೇ?
ಇಂದು ನಾವು ಮತ್ತೆ ಅಂತಹದೇ ಸ್ಥಿತಿಯಲ್ಲಿದ್ದೇವೆ. AI/ಡೇಟಾ ಮೈನಿಂಗ್ ಆಧರಿತ ನಿರ್ಧಾರಗಳ ಜಗತ್ತಿನಲ್ಲಿ ಕಳ್ಳತನಕ್ಕೆ ಮತ್ತೆ ನೂರಾರು ಹೊಸ ಹಾದಿಗಳನ್ನು ‘ಮನುಷ್ಯ ಬುದ್ಧಿವಂತಿಕೆ’ ತೆರೆದುಕೊಂಡಿದೆ. ಹಿಂದೆ ಅತಿಯಾದ ದುಡ್ಡು ಹರಿದಾಡಿದರೆ ಅದೇಕೆ ಹಾಗೆ ಎಂದು ಪರಿಶೀಲಿಸಬಲ್ಲ ನಿಯತ್ತು, ಕಾನೂನು ಪಾಲನೆಯ ನೈತಿಕತೆ ಇತ್ತು. ಇಂದು ಮೂಲಭೂತ ಸಾಂವಿಧಾನಿಕ ಸಂಗತಿಗಳಲ್ಲಿ ಲೋಪಗಳನ್ನು ಎತ್ತಿ ತೋರಿಸಿದಾಗಲೂ ‘ಹಾಗಾಗಿರಬಹುದೇ?’ ಎಂದು ಯೋಚಿಸುವ ನೈತಿಕತೆಯೂ ಆಳುವವರಲ್ಲಿ ಉಳಿದಿಲ್ಲ. ಅವರು ಆಗಿರುವುದನ್ನು ಶತಾಯಗತಾಯ ತಮ್ಮ ಪರವಾಗಿ ಸಮರ್ಥಿಸಿಕೊಳ್ಳುವುದರಲ್ಲೇ ತಮ್ಮ ಶ್ರಮ ತೊಡಗಿಸುವುದರಲ್ಲಿ ನಿರತರು. ಅದಕ್ಕೆ ಅತ್ಯುತ್ತಮ ಉದಾಹರಣೆ ಕಳೆದ ಕೆಲ ಸಮಯಗಳಿಂದ ಚರ್ಚೆ ಆಗುತ್ತಿರುವ EVM-VVPAT ಅಕ್ರಮದ ಸಾಧ್ಯತೆಗಳು. ಇಲ್ಲೀಗ ಮಾಲು ಸಮೇತ ಸಿಕ್ಕಿಬೀಳುವ ತನಕ ಎಲ್ಲರೂ ಹರ್ಷದ್ ಮೆಹ್ತಾನ ಹಾಗೆ, ಈ ಚಿತ್ರದ ನಾಯಕನ ಹಾಗೆ ಹೀರೋಗಳೇ!!
ಈ ಕಾರಣಕ್ಕಾಗಿ ಅತ್ಯಂತ ಅಪಾಯಕಾರಿ ಸಿನಿಮಾ ಇದು. ‘ಅಡ್ರೀನಾಲಿನ್’ ಪಂಪ್ ಮಾಡಿಕೊಳ್ಳದೇ ಎಚ್ಚರಿಕೆಯಿಂದ ನೋಡುವುದಿದ್ದರೆ ಮಾತ್ರ ಒಮ್ಮೆ ನೋಡಬಹುದಾದ ಸಿನಿಮಾ ಇದು.
90ರ ದಶಕವನ್ನು ಚಿತ್ರಿಸಲು ಸಿನಿಮಾ ಹಾಕಿದ ಶ್ರಮವೊಂದೇ ಚಿತ್ರದಲ್ಲಿ ನನ್ನ ಮಟ್ಟಿಗೆ ಪಾಸಿಟಿವ್ ಅಂಶ. ಮೂಲ ತೆಲುಗು ಚಿತ್ರದ ನಿರ್ದೇಶಕರು ವೆಂಕಿ ಅಟ್ಲೂರಿ. (ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿದೆ.)
ಕೆಜಿಎಫ್ ಸಿನಿಮಾಗಳು ಸ್ಫೂರ್ತಿ ನ
EVM-VVPAT ಗೂ ಲಕ್ಕಿ ಭಾಸ್ಕರ ಚಲನಚಿತ್ರಕ್ಕೂ ಸಂಭಂದ ಕಟ್ಟುವ ನಿಮಗೆ ಅತೀ ಬುದ್ಧಿವಂತ ಬರಹಗಾರ ಎನ್ನುವ ಪಟ್ಟ ಕಟ್ಟುವುದೇ ಲೇಸು…😂😂😂
Half boiled article by Half knowledge journalist
Useless article ,waste of time ,he wrote this article with the help of AI , nonsense
I see a comment with writer name saying this has written with help of AI. 🤣🤣🤣🤣How about pushpa?
Please grow up my dear writer. People are intelligent now.