ತನ್ನ ಗ್ರಾಹಕ ಹತ್ತು ರೂಪಾಯಿ ಬಾಕಿಯನ್ನು ಹಿಂದಿರುಗಿಸಿಲ್ಲವೆಂದು ವ್ಯಕ್ತಿಯೋರ್ವ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಹರ್ದೋಯ್‌ನ ಭಂಡಾರಿ ಗ್ರಾಮದಲ್ಲಿ ಪಾನ್ ಅಂಗಡಿಯನ್ನು ನಡೆಸುತ್ತಿರುವ ವಿಕಲಚೇತನ ಜಿತೇಂದ್ರ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿರುವುದು ಮಾತ್ರವಲ್ಲದೇ ಪೊಲೀಸರನ್ನು ಕರೆಸಿ ಸಾಲ ವಸೂಲಿ ಮಾಡಿದ್ದಾರೆ.
ಪಾನ್ ಅಂಗಡಿ ಮಾಲೀಕ ಜಿತೇಂದ್ರ ಒಂದೂವರೆ ವರ್ಷಗಳ ಹಿಂದೆ ಸಂಜಯ್ ಎಂಬ ತನ್ನ ಗ್ರಾಹಕನಿಗೆ ಹತ್ತು ರೂಪಾಯಿ ಮೌಲ್ಯದ ಗುಟ್ಕಾ ಪ್ಯಾಕೆಟ್ ಅನ್ನು ನೀಡಿದ್ದರು. ಆದರೆ ಸಂಜಯ್ ಅದರ ಹಣವನ್ನು ಪಾವತಿ ಮಾಡಿರಲಿಲ್ಲ.
ಇದನ್ನು ಓದಿದ್ದೀರಾ? ತುಮಕೂರು | ಬಾಕಿ ಇರುವ ಎಲ್ಲ ಸಾಲ ಮತ್ತು ಸಬ್ಸಿಡಿ ಅರ್ಜಿಗಳ ಇತ್ಯರ್ಥಕ್ಕೆ ಸೂಚನೆ
ಒಂದುವರೆ ವರ್ಷದಿಂದ ಸಂಜಯ್ ಬಳಿ ಹಣ ಕೇಳಿದರೂ ಕೂಡಾ ನೀಡಿಲ್ಲ ಎನ್ನಲಾಗಿದೆ. ಹೀಗಾದರೆ ನನ್ನ ಹತ್ತು ರೂಪಾಯಿ ವಾಪಸ್ ಸಿಗದು ಎಂದು ಅರಿತ ಜಿತೇಂದ್ರ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾರೆ.
ಪೊಲೀಸ್ ಸಹಾಯವಾಣಿ 112 ಕ್ಕೆ ಕರೆ ಮಾಡಿದ ಬಳಿಕ ಪೊಲೀಸರು ಗ್ರಾಮಕ್ಕೆ ಆಗಮಿಸಿದ್ದು, ಹತ್ತು ರೂಪಾಯಿಯನ್ನು ಸಂಜಯ್‌ನಿಂದ ವಸೂಲಿ ಮಾಡಿ ಜಿತೇಂದ್ರಗೆ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.
