ಭಾರತೀಯ ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿಯವರ ನಾಯಿಯಂತೆ ವರ್ತಿಸುತ್ತಿದೆ. ಪ್ರಜಾಪ್ರಭತ್ವವನ್ನು ಬಲಗೊಳಿಸಲು ಸ್ಥಾಪಿಸಲಾಗಿರುವ ಎಲ್ಲ ಸಾಂವಿಧಾನಿಕ ಸಂಸ್ಥೆಗಳು ಮೋದಿ ಅವರ ಸೂಚನೆಯಂತೆ ನಡೆದುಕೊಳ್ಳುತ್ತಿವೆ ಎಂದು ಮಹಾರಾಷ್ಟ್ರ ವಿಧಾನ ಪರಿಷತ್‌ನ ಕಾಂಗ್ರೆಸ್ ಸದಸ್ಯ ಭಾಯಿ ಜಗತಾಪ್ ಹೇಳಿದ್ದಾರೆ. ಅವರ ಹೇಳಿಕೆ ಮಹಾರಾಷ್ಟ್ರ ರಾಜಕೀಯದಲ್ಲಿ ವಾಗ್ಯುದ್ದಕ್ಕೆ ಎಡೆಮಾಡಿಟ್ಟಿದೆ.
“ಭಾರತೀಯ ಚುನಾವಣಾ ಆಯೋಗದ ಭಟ್ಟಂಗಿತನದಿಂದಾಗಿ ಭಾರತೀಯ ಪ್ರಜಾಸತ್ತೆ ಅವಮಾನಕ್ಕೀಡಾಗಿದೆ. ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಚುನಾವಣೆಗಳಲ್ಲಿ ಮತಯಂತ್ರಗಳ ಬದಲು ಬ್ಯಾಲೆಟ್ ಪೇಪರ್ ಬಳಕೆಯ ಬಗ್ಗೆ ಮಾತನಾಡಿದ್ದರು. ಈಗ ಅವರೇ ಇವಿಎಂಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ” ಎಂದು ಜಗತಾಪ್ ಹೇಳಿದ್ದಾರೆ.
‘‘ಇವಿಎಮ್ ತಂತ್ರಜ್ಞಾನವನ್ನು ತಂದಿದ್ದು ಕಾಂಗ್ರೆಸ್. ಯಾಕೆಂದರೆ ಅವುಗಳನ್ನು ಫ್ರಾನ್ಸ್, ಅಮೆರಿಕದಲ್ಲಿ ಬಳಸಲಾಗುತ್ತಿತ್ತು. ಆದರೆ, 2009ರ ಬಳಿಕ ಅವುಗಳ ಬಳಕೆಯ ಬಗ್ಗೆ ಸಂಶಯಗಳು ಹುಟ್ಟಿಕೊಂಡಿವೆ” ಎಂದಿದ್ದಾರೆ.
#WATCH | Mumbai, Maharashtra: On his "kutta" remark for Election Commission, Congress leader Bhai Jagtap says, "I will not apologise at all, not even a bit…If they are working under pressure from the PM and other ministers then what I have said is right. I will not… pic.twitter.com/xmJ9cfUgas
— ANI (@ANI) November 29, 2024
ಚುನಾವಣಾ ಆಯೋಗವನ್ನು ನಾಯಿ ಎಂದಿದ್ದಕ್ಕೆ, ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಜಗತಾಪ್ ಅವರು ಕ್ಷಮೆ ಕೇಳುವಂತೆ ಒತ್ತಾಯಿಸಿದೆ. ಆದರೆ, ಕ್ಷಮೆ ಕೇಳಲು ಜಗತಾಪ್ ನಿರಾಕರಿಸಿದ್ದಾರೆ.