- ಭಾರತೀಯ ಮೂಲದ 19 ವರ್ಷದ ಸಾಯಿ ವರ್ಷಿತ್ ಕಂದುಲಾ ಬಂಧನ
- ಜರ್ಮನಿಯ ನಾಜಿ ಪಕ್ಷದ ಹಿಟ್ಲರ್‌ನ ಅತ್ಯುಗ್ರ ಅಭಿಮಾನಿಯಾಗಿರುವ ಕಂದುಲಾ
ಸೋಮವಾರ ರಾತ್ರಿ ಶ್ವೇತಭವನದ ಬಳಿಯ ಭದ್ರತಾ ತಡೆಗೋಡೆಗಳಿಗೆ ಡಿಕ್ಕಿ ಹೊಡೆದ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ವಾಷಿಂಗ್ಟನ್‌ಲ್ಲಿ ಬಂಧಿಸಲಾಗಿದೆ.
ಬಂಧಿತನನ್ನು 19 ವರ್ಷದ ಸಾಯಿ ವರ್ಷಿತ್ ಕಂದುಲಾ ಎಂದು ಗುರುತಿಸಲಾಗಿದೆ. ಟ್ರಕ್‌ನಲ್ಲಿ ಸ್ವಸ್ತಿಕ್ ಚಿಹ್ನೆಯ ಬಾವುಟವೊಂದು ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಉದ್ದೇಶಪೂರ್ವಕವಾಗಿಯೇ ತಡೆಗೋಡೆಗಳಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.
ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರನ್ನು ಹತ್ಯೆ ಮಾಡಲು ಯತ್ನಿಸಿರುವ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ನಾಜಿ ಪಕ್ಷದ ಹಿಟ್ಲರ್ ಅಭಿಮಾನಿಯಾಗಿರುವ ಕಂದುಲಾ, ನಾಜಿ ಧ್ವಜವನ್ನು ಸುತ್ತಲೂ ಹಾರಾಡಿಸಿದ್ದಾನೆ” ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ಸೇರಿ 19 ವಿಪಕ್ಷಗಳಿಂದ ನೂತನ ಸಂಸತ್ ಭವನದ ಉದ್ಘಾಟನೆ ಬಹಿಷ್ಕಾರ
ಈತನ ವಿರುದ್ಧ ಅಮೆರಿಕದ ಅಧ್ಯಕ್ಷರು, ಉಪಾಧ್ಯಕ್ಷರು ಅಥವಾ ಕುಟುಂಬದ ಸದಸ್ಯರನ್ನು ಕೊಲ್ಲುವ ಅಥವಾ ಅಪಹರಿಸುವ ಅಥವಾ ಹಾನಿ ಮಾಡುವ ಬೆದರಿಕೆ ಹಾಕುವ ಆರೋಪವನ್ನು ಹೊರಿಸಲಾಗಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿ ಹೊರಬಂದಿಲ್ಲ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿದೆ.
ಕುಂದುಲಾನನ್ನು ಬಂಧಿಸಿದ ನಂತರ, ಆತ ನಾಜಿಗಳ “ಮಹಾ ಇತಿಹಾಸ” ಮತ್ತು ಅವರ “ಸರ್ವಾಧಿಕಾರಿ ಸ್ವಭಾವದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾನೆ. ಹಿಟ್ಲರ್‌ನ ಆಡಳಿತಾತ್ಮಕ ಕ್ರಮ ಇಷ್ಟವಾಗಿ ತಾನು ಆನ್ಲೈನ್‌ನಲ್ಲಿ ನಾಜಿಯಾದ ಧ್ವಜ ಖರಿಸಿದ್ದೇನೆ ಎಂದು ಭದ್ರತಾ ಅಧಿಕಾರಿಗಳಿಗೆ ತಿಳಿಸಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.
ಕಂದುಲಾ ಚಲಾಯಿಸಿದ ಟ್ರಕ್‌ನಲ್ಲಿ ಯಾವುದೇ ಸ್ಫೋಟಕಗಳು ಅಥವಾ ಶಸ್ತ್ರಾಸ್ತ್ರಗಳು ಕಂಡುಬಂದಿಲ್ಲ. ಈತ ವರ್ಜೀನಿಯಾದ ಹೆರ್ಂಡನ್‌ನಲ್ಲಿ ಯು-ಹಾಲ್ ಟ್ರಕ್‌ಅನ್ನು ಬಾಡಿಗೆಗೆ ಪಡೆದಿದ್ದರ ಬಗ್ಗೆ ಕಂಪನಿ ದಾಖಲೆ ನೀಡಿದೆ. ಆರೋಪಿಯ ವಿರುದ್ಧ ಹೆಚ್ಚಿನ ಆರೋಪಗಳನ್ನು ಹೊರಿಸುವ ನಿರೀಕ್ಷೆಯಿದ್ದು, ಫೆಡರಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.