ಬೀದರ್‌ | ಯತ್ನಾಳ ಲಿಂಗಾಯತರ ಕ್ಷಮೆ ಕೇಳದಿದ್ದರೆ ರಾಜ್ಯದಿಂದ ಓಡಿಸುವ ಕಾರ್ಯಕ್ರಮ ಹಾಕ್ತೀವಿ: ಶಿವಾನಂದ ಸ್ವಾಮೀಜಿ

Date:

Advertisements

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಲಿಂಗಾಯತರ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಕರ್ನಾಟಕದ ಲಿಂಗಾಯತರು ಅವನನ್ನು ಇಲ್ಲಿಂದ ಓಡಿಸುವ ಕಾರ್ಯಕ್ರಮ ಹಾಕಿಕೊಳ್ಳಬೇಕಾಗುತ್ತದೆ ಎಂದು ಹುಲಸೂರ ಗುರುಬಸವೇಶ್ವರ ಸಂಸ್ಥಾನ ಮಠದ ಡಾ.ಶಿವಾನಂದ ಮಹಾಸ್ವಾಮಿಜಿ ಎಚ್ಚರಿಕೆ ನೀಡಿದ್ದಾರೆ.

ಹುಲಸೂರ ಪಟ್ಟಣದಲ್ಲಿ ಜರುಗಿದ ಶರಣ ಸಂಸ್ಕ್ರತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ʼಯತ್ನಾಳ್‌ಗೆ ಮಾನ ಮರ್ಯಾದೆ ಇದ್ರೆ ಲಿಂಗಾಯತರಲ್ಲಿ ಕ್ಷಮೆ ಕೇಳಬೇಕು. ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ವಾಪಸ್ ಪಡೆಯದೇ ಇದ್ರೆ ಮುಂದಿನ ಸಲ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಸೋಲು ಖಚಿತ, ಒಂದು ವೇಳೆ ಅವರು ಸೋಲದಿದ್ರೆ ನಾನು ನನ್ನ ಮಠ ತ್ಯಾಗ ಮಾಡುತ್ತೇನೆʼ ಎಂದು ಶಿವಾನಂದ ಸ್ವಾಮೀಜಿ ಬಹಿರಂಗ ಸವಾಲ್ ಹಾಕಿದ್ದಾರೆ.

ʼಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡೋರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಹೆಸರು ಮಾತ್ರ ಬಸವರಾಜ, ಆದ್ರೆ ನೀನು ಬೆಂಕಿ ಹಚ್ಚುವ ಬಸವರಾಜ. ಬಸವಣ್ಣನವರ ಬಗ್ಗೆ, ಸ್ವಾಮೀಜಿಗಳ ಬಗ್ಗೆ ಹಗುರವಾಗಿ ಮತಾನಾಡುತ್ತಿದ್ದು, ಯತ್ನಾಳ್‌ ತಾನೊಬ್ಬನೇ ತೀಸ್ಮಾರ್ಕ್ ಎಂದು ತಿಳಿದುಕೊಂಡಿದ್ದಾನೆ‌ʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisements

ಈ ಸುದ್ದಿ ಓದಿದ್ದೀರಾ? ಬೀದರ್ | ಆಟೊ ಚಾಲಕನ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ನಾನು ಶ್ರೀಮಂತ, ನಾನು ಎಂಎಲ್‌ಎ ದೊಡ್ಡವ ಎಂದು ತಿಳಿದುಕೊಂಡಿದ್ದು, ಜನಗಳಿಗೆ ಗೌರವ ಕೊಡಲಿಲ್ಲಾ ಅಂದ್ರೆ ನೀನ್ಯಾವ ಸೀಮೆಯ ಶಾಸಕ? ಎಂದು ಹೇಳುವುದಕ್ಕೆ ದಿಕ್ಕಾರವಿದೆ. ನಾನೇ ಬಸವಣ್ಣ ಅಂತ ಹೇಳಿ ನಾಲಾಯಕತನ ಪ್ರದರ್ಶನ ಮಾಡ್ಯಾನ್, ಯಾರೊಬ್ಬರೂ ಬಸವಣ್ಣ ಆಗಾಕ ಸಾಧ್ಯ ಇಲ್ಲ. ಬಸವಣ್ಣನ ಸರಿಸಮ ನಿಲ್ಲುವಂತಹ ವ್ಯಕ್ತಿ ಯಾರೂ ಇಲ್ಲ. ಜಗತ್ತಿನಲ್ಲಿ 12ನೇ ಶತಮಾನದ ಬಸವಣ್ಣ ಅವರನ್ನು ಬಿಟ್ರೆ ಉಳಿದವರು ಯಾರೂ ಬಸವಣ್ಣ ಆಗಲು ಸಾಧ್ಯವಿಲ್ಲ ಶಿವಾನಂದ ಸ್ವಾಮೀಜಿ ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

Download Eedina App Android / iOS

X