ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಸಿನೆಮಾ ‘ಪುಷ್ಪಾ 2: ದ ರೂಲ್’ ಇದೇ ವಾರ ಬಿಡುಗಡೆಯಾಗಲಿದೆ. ದೇಶದ ಆಯ್ದ ಭಾಗಗಳಲ್ಲಿ ಈ ಸಿನೆಮಾಗೆ ಮುಂಗಡ ಬುಕಿಂಗ್ ಶುರುವಾಗಿದೆ. ಹಿಂದಿ ಭಾಷಿಕ ಪ್ರದೇಶಗಳಲ್ಲಿ ಟಿಕೆಟ್ ದರ ತಲಾ 2,000-2,400 ರುಪಾಯಿಗೆ ಜಿಗಿದಿರುವ ಕುರಿತು ದೂರುಗಳು ಕೇಳಿ ಬಂದಿವೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
‘ಎಕ್ಸ್’ (ಟ್ವಿಟರ್)ನಲ್ಲಿ 1,200 ರುಪಾಯಿ ದರ ಅತಿಯಾಯಿತಲ್ವಾ ಎಂದು ಹೈದರಾಬಾದಿನ ಅಭಿಮಾನಿಯೊಬ್ಬರು ಪ್ರಶ್ನಿಸಿರುವ ವಿಡಿಯೋ ಪೋಸ್ಟ್ ಆಗಿದೆ. ದೆಹಲಿ, ಮುಂಬಯಿಯ ಪಿವಿಆರ್ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶಿಸಲಾಗುವ ಈ ಚಲನಚಿತ್ರದ ಹಿಂದಿ 2ಡಿ ಅವತರಣಿಕೆಯ ಟಿಕೆಟ್ ದರಗಳು 2,400 ರುಪಾಯಿಗೆ ಮಾರಾಟವಾಗುತ್ತಿವೆ. ಮುಂಬಯಿಯ ಸಾಮಾನ್ಯ ಥಿಯೇಟರುಗಳಲ್ಲಿನ ದರಗಳು 1,500ರಿಂದ 1,700 ರುಪಾಯಿಗೆ ಮಾರಾಟವಾಗಿವೆ.
ಮುಂಗಡ ಬುಕಿಂಗ್ ಮೂಲಕ ಈ ಸಿನೆಮಾ ಈವರೆಗೆ ತೆಲುಗಿನಲ್ಲಿ 12 ಕೋಟಿ ರುಪಾಯಿ ಮತ್ತು ಹಿಂದಿಯಲ್ಲಿ 8 ಕೋಟಿ ರುಪಾಯಿ ಗಳಿಸಿದೆ ಎಂದು ವರದಿಗಳು ಹೇಳಿವೆ.