ಕಳೆದ ಒಂದು ವಾರದಿಂದ ಫೆಂಗಲ್ ಚಂಡಮಾರುತ ಅಬ್ಬರ ಹೆಚ್ಚಾಗಿದೆ. ತಮಿಳುನಾಡು, ಆಂಧ್ರಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಕರ್ನಾಟಕದಲ್ಲಿಯೂ ಮಳೆ ಆರ್ಭಟ ಹೆಚ್ಚಿದ್ದು, ನಿರಂತರ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದಾಗಿ ಟೊಮೆಟೊ ಇಳುವರಿಯಲ್ಲಿ ಕುಸಿತವಾಗಿದ್ದು, ಬೆಲೆ ಗಗಕ್ಕೇರುತ್ತಿದೆ.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಟೊಮೆಟೊ ಹೂವು ಮತ್ತು ಕಾಯಿಗಳು ಉದುರಿಹೋಗುತ್ತಿವೆ. ತಂಪಾದ ಹಮಾವಾನದಿಂದಾಗಿಯೂ ಟೊಮೆಟೊ ಕಾಯಿಗಳು ಹಣ್ಣಾಗುತ್ತಿಲ್ಲ. ಇದೆಲ್ಲದರಿಂದಾಗಿ, ಇಳಿವರಿಯಲ್ಲಿ ತೀವ್ರ ಕುಸಿತ ಕಂಡುಬಂದಿದೆ.
ಟೊಮೆಟೊ ಇಳುವಳಿ ಮತ್ತು ಪೂರೈಕೆ ಕಡಿಮೆಯಾಗಿದೆ. ಆದರೆ, ಬೇಡಿಕೆ ಹೆಚ್ಚಿದೆ. ಪರಿಣಾಮ, ಟೊಮೆಟೊ ಬೆಲೆ ಏರಿಕೆಯಾಗುತ್ತಿದೆ. ಚಿಕ್ಕಬಳ್ಳಾಪುರದ ಎಪಿಎಂಸಿಯಲ್ಲಿ 14 ಕೆ.ಜಿ.ಯ ಟೊಮೆಟೊ ಬಾಕ್ಸ್‌ಗೆ ಸಗಟು ದರ 800 ರೂ. ಇದೆ. ಅಂದರೆ, ಕೆ.ಜಿ ಸರಾಸರಿ 57 ರೂ. ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕೆ.ಜಿ.ಗೆ 80ರಿಂದ 100 ರೂ.ವರೆಗೆ ಏರಿಕೆ ಕಂಡಿದೆ.