ಸಾಲಬಾಧೆ ತಾಳಲಾರದೆ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ಹಾಗರಗುಂಡಗಿ ಗ್ರಾಮದಲ್ಲಿ ನಡೆದಿದೆ.
ಮೈಬೂಬಶೇಖ್ ತಂದೆ ಇಸ್ಮಾಯಿಲ್ ಶೇಖ್ (30) ಮೃತರು ಎಂದು ತಿಳಿದು ಬಂದಿದೆ.
ಹಾಗರಗುಂಡಗಿ ಗ್ರಾಮದಲ್ಲಿ ಮೈಬೂಬಶೇಖ್ ಅವರ ತಾಯಿ ರೋಶನಬೀ ಅವರ ಹೆಸರಿನಲ್ಲಿ 4 ಎಕರೆ ಜಮೀನಿದ್ದು, ಮೈಬೂಬಶೇಖ್ ಕೃಷಿಯಿಂದ ಜೀವನ ಸಾಗಿಸುತ್ತಿದ್ದರು. ಕಳೆದು ಎರಡ್ಮೂರು ವರ್ಷಗಳಿಂದ ಕೃಷಿಯಲ್ಲಿ ಲಾಭವಾಗದ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಸಾಲದ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದರು.
ಸಾಲ ತೀರಿಸಲು ಸಾಧ್ಯವಾಗದೆ ಮಾನಸಿಕವಾಗಿ ನೊಂದು ಡಿ.2 ರಂದು ಬೆಳಿಗ್ಗೆ ಗ್ರಾಮದ ಶಾಲೆಯ ಆವರಣದಲ್ಲಿರುವ ಆಲದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಮೃತರ ಪತ್ನಿ ಮೈಹಿಬೂಬೀ ನೀಡಿದ ದೂರು ಆಧರಿಸಿ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.