ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ 2 : ದ ರೂಲ್’ ಸಿನಿಮಾ ಪ್ರೀಮಿಯರ್ ವೇಳೆ ಕಾಲ್ತುಳಿತ ಉಂಟಾಗಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಹೈದರಾಬಾದ್‌ನ ಆರ್‌ಟಿಸಿ ರಸ್ತೆಯಲ್ಲಿರುವ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದೆ.
ಮಧ್ಯರಾತ್ರಿ ಪುಷ್ಪಾ 2 ಪ್ರೀಮಿಯರ್ ಪ್ರದರ್ಶನವಿತ್ತು. ಈ ವೇಳೆ ಥಿಯೇಟರ್‌ಗೆ ನಟ ಅಲ್ಲು ಅರ್ಜುನ್ ಆಗಮಿಸಿದ್ದಾರೆ. ನಾಯಕನನ್ನು ನೋಡುವ ತರಾತುರಿಯಲ್ಲಿ ಜನರು ಪ್ರವೇಶ ದ್ವಾರದತ್ತ ನುಗ್ಗಿದ್ದು ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮಹಿಳೆ ಸಾವನ್ನಪ್ಪಿದರೆ, ಕನಿಷ್ಠ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಈ ಪೈಕಿ ಮೃತ ಮಹಿಳೆಯ ಮಗನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ‘ಪುಷ್ಪಾ 2: ದ ರೂಲ್’; ಟಿಕೆಟ್ ದರ 2,400 ರೂ.ಗೆ ಏರಿಕೆ!
ಪ್ರದರ್ಶನಕ್ಕೂ ಮುನ್ನ ಅಲ್ಲು ಅರ್ಜುನ್ ಅವರನ್ನು ನೋಡಲು ಅಭಿಮಾನಿಗಳು ಪ್ರವೇಶ ದ್ವಾರದತ್ತ ಧಾವಿಸಿದ್ದು ಜನರನ್ನು ನಿಯಂತ್ರಿಸಿ, ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದೂ ಹೇಳಲಾಗಿದೆ.
A tragic incident occurred at Sandhya Theatre in Hyderabad last night, where a woman lost her life and her son is battling for his life after a stampede broke out among a huge crowd of fans gathered to watch the movie Pushpa 2. pic.twitter.com/u4wsPr3JmR
— Shiva kumar Yadav (@vongurishiva) December 4, 2024
ಇನ್ನು ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಮಹಿಳೆಯನ್ನು ದಿಲ್‌ಸುಖ್‌ನಗರ ನಿವಾಸಿ ರೇವತಿ (39) ಎಂದು ಗುರುತಿಸಲಾಗಿದೆ. ಆಕೆ ತನ್ನ ಪತಿ ಭಾಸ್ಕರ್ ಮತ್ತು ಅವರ ಇಬ್ಬರು ಮಕ್ಕಳಾದ ತೇಜ್ (9) ಮತ್ತು ಸಾನ್ವಿಕಾ (7) ಜೊತೆ ಪುಷ್ಪಾ 2 ಸಿನಿಮಾದ ಪ್ರೀಮಿಯರ್ ಶೋ ವೀಕ್ಷಿಸಲು ಬಂದಿದ್ದರು. ನೂಕು ನುಗ್ಗಲು ಉಂಟಾದಾಗ ರೇವತಿ ಮತ್ತು ಅವರ ಮಗ ತೇಜ್ ಮೂರ್ಛೆ ಹೋದರು.
ಮಹಿಳೆಯನ್ನ ಚಿಕಿತ್ಸೆಗಾಗಿ ದುರ್ಗಾ ಬಾಯಿ ದೇಶಮುಖ ಆಸ್ಪತ್ರೆಗೆ ಕರೆತರಲಾಗಿತ್ತು. ತೀವ್ರವಾಗಿ ಗಾಯಗೊಂಡ ಬಾಲಕ ತೇಜ್‌ನನ್ನು ಬೇಗಂಪೇಟೆಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರೇವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದುರ್ಗಾಬಾಯಿ ದೇಶಮುಖ ಆಸ್ಪತ್ರೆಯಿಂದ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.
‘ಪುಷ್ಪಾ 2 : ದ ರೂಲ್’ ಸಿನಿಮಾ ಗುರುವಾರ (ಡಿಸೆಂಬರ್ 5) ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2021ರ ಪುಷ್ಪಾ ಸಿನಿಮಾದ ಮುಂದುವರಿದ ಭಾಗ ಇದಾಗಿದೆ. 21,000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಈ ಸಿನಿಮಾ ತೆರೆ ಕಾಣಲಿದೆ. ಮುಗಂಡ ಟಿಕೆಟ್ ಬುಕಿಂಗ್ ಮೂಲಕವೇ ತಂಡವು 100 ಕೋಟಿ ರೂಪಾಯಿ ಗಳಿಸಿದೆ.
