ಮೈಕ್ರೋ ಫೈನಾನ್ಸ್ ಕಿರುಕುಳ ದಿನದಿಂದ ದಿನಕ್ಕೆ ಎಲ್ಲೆಡೆ ಹೆಚ್ಚಾಗುತ್ತಿದ್ದು, ಮಹಿಳೆಯರ ಮೇಲೆ ಮಾನಸಿಕ ದೌರ್ಜನ್ಯ ಮಾಡುತ್ತಿದ್ದಾರೆ. ಮೈಕ್ರೋ ಫೈನಾನ್ಸ್, ಸಂಘ ಸಂಸ್ಥೆಗಳಿಂದ ಹಾಗೂ ಇನ್ನಿತರ ಫೈನಾನ್ಸ್ ಕಂಪನಿಗಳಿಂದ ತೆಗೆದುಕೊಂಡ ಹಣವನ್ನು ವಾಪಸ್ ಮರುಪಾವತಿಸಲು ಬಡ್ಡಿ ರಹಿತ ಮರುಪಾವತಿ ಹಾಗೂ ಆರು ತಿಂಗಳ ಕಾಲಾವಕಾಶ ಕಲ್ಪಿಸಲು ಒತ್ತಾಯಿಸಿ ಸಾರ್ವಜನಿಕ ಹೋರಾಟಗಾರರು ಮತ್ತು ಸಮಾಜ ಸೇವಕರ ವೇದಿಕೆಯಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಕಚೇರಿ ಬಳಿ ತೆರಳಿ ಸಾಲ ಮರುಪಾವತಿಗೆ ಆರು ತಿಂಗಳ ಸಮಯಾವಕಾಶ ಕೊಡಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.
“ಪ್ರಸ್ತುತ ಮನೆಗಳಲ್ಲಿ ಒಂದಲ್ಲಾ ಒಂದು ಸಮಸ್ಯೆಗಳು, ದುರ್ಘಟನೆಗಳು ನಡೆದಿರುತ್ತವೆ. ಇಂತಹ ಸಂದರ್ಭದಲ್ಲಿಯೂ ಪೈನಾನ್ಸ್‌ಗಳಿಂದ ನಿತ್ಯವೂ ಕಿರುಕುಳ ಹೆಚ್ಚಾಗುತ್ತಿದೆ. ಸಾಲ ವಾಪಸ್ ನೀಡುವುದಿಲ್ಲವೆಂದು ಹೇಳುವುದಿಲ್ಲ. ಸ್ವಲ್ಪ ಕಾಲಾವಕಾಶ ಕೊಡಬೇಕು” ಎಂದು ಒತ್ತಾಯಿಸಿದರು.
“ಮೈಕ್ರೋ ಫೈನಾನ್ಸ್, ಎನ್‌ಜಿಒಗಳು ಹಾಗೂ ಸಂಘ ಸಂಸ್ಥೆಗಳಿಂದ 15 ದಿನಗಳಿಗೊಮ್ಮೆ, ತಿಂಗಳಿಗೊಮ್ಮೆ ವಾರ, ಮಾಸಿಕ ಕಂತು ಪ್ರಕಾರ ಮರುಪಾವತಿ ನೀಡಲು ಸಾಲ ಪಡೆದುಕೊಂಡಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಕಟ್ಟಲು ಅಡೆತಡೆಗಳು ಸಂಭವಿಸುತ್ತಿವೆ. ನಮ್ಮ ವ್ಯಾಪಾರಗಳು ನಡೆಯದೆ ವಾಪಸ್ ನೀಡುವ ಪರಿಸ್ಥಿತಿಯಿಲ್ಲದೆ ಪರದಾಡುತ್ತಿದ್ದೇವೆ. ಹೀಗಿರುವಾಗ ಫೈನಾನ್ಸ್ ಕಂಪನಿಗಳ ಸಿಬ್ಬಂದಿಗಳು ಬೆಳಿಗ್ಗೆಯಾದರೆ ಸಾಕು, ಮನೆಯ ಮುಂದೆ ಗಂಟೆ ಗಟ್ಟಲೆ ಕೂಗಾಡುವುದು, ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಅಥವಾ ಮನೆಯಂಗಳದಲ್ಲಿ, ಓಣಿಯಲ್ಲಿ ನಿಂತು ನಮ್ಮ ಮರ್ಯಾದೆಗೆ ಧಕ್ಕೆಯುಂಟು ಮಾಡುತ್ತಿದ್ದಾರೆ” ಎಂದು ಅಳಲು ತೋಡಿಕೊಂಡರು.
“ಮನೆಯ ಮುಂದೆ ಏಜೆಂಟರು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ದುಡ್ಡು ಇಲ್ಲವೆಂದರೆ, ನಿಮ್ಮ ಕಿಡ್ನಿ ಮಾರಾಟ ಮಾಡಿ, ಇಲ್ಲವಾದರೆ ಮನೆಯಲ್ಲಿರುವ ವಸ್ತುಗಳನ್ನು ಮಾರಾಟ ಮಾಡಿ ಹಣ ನಮಗೆ ನೀಡಿ. ಇಲ್ಲವಾದರೆ ರೈಲು ಹಳಿಗೆ ಬಿದ್ದು ಸಾಯಿರಿ. ಇಲ್ಲವಾದಲ್ಲಿ ನಾವುಗಳು ಮನೆಯಿಂದ ಹೋಗುವುದಿಲ್ಲ ಮತ್ತು ನಮ್ಮ ಕಂಪನಿಗಳಿಂದ ದಿನಕ್ಕೆ 100 ಸಲ ಕರೆ ಮಾಡಿ ಹಿಂಸೆ ನೀಡುತ್ತೇವೆಂದು ಬೆದರಿಸುತ್ತಿದ್ದಾರೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಹಾಸನದಲ್ಲಿ ದೇವೇಗೌಡರ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ; ಸಭಿಕರಿಂದ ಚಪ್ಪಾಳೆಯ ಸುರಿಮಳೆ
“ಫೈನಾನ್ಸ್ ಕಂಪನಿಗಳಿಂದ ಜೀವನಕ್ಕೆ ಅನಾಹುತವಾಗುವ ಸಂಭವ ಉದ್ಭವಿಸಿದೆ. ಸಾಲ ವಾಪಸ್ ನೀಡುವುದಿಲ್ಲವೆಂದು ಹೇಳುವುದಿಲ್ಲ.
ಪ್ರತಿಭಟನೆಯಲ್ಲಿ ಅಂಬಾಜಿರಾವ್ ಮೈದರಕರ್, ಅಹ್ಮದ್ ಬೇಗ್, ಮಸೂದ್ ಅಲಿ ಸೇರಿದಂತೆ ಸಾಲ ಪಡೆದ ನೂರಾರು ಮಹಿಳೆಯರು ಭಾಗವಹಿಸಿದ್ದರು.
