ಗುಡಿಬಂಡೆ | ನಿವೇಶನ ಹಂಚಿಕೆಗೆ ಅಧಿಕಾರಿಗಳ ನಿರ್ಲಕ್ಷ್ಯ; ಕಡೇಹಳ್ಳಿ ಗ್ರಾಮ ದಲಿತರ ಪ್ರತಿಭಟನೆ

Date:

Advertisements

ರಸ್ತೆ ಅಗಲೀಕರಣ ಸಮಯದಲ್ಲಿ ಮನೆಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ಸಂತ್ರಸ್ತರಿಗೆ ನಿವೇಶನ ನೀಡದ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕಡೇಹಳ್ಳಿ ಗ್ರಾಮದ ದಲಿತ ಜನಾಂಗದವರು ಪ್ರತಿಭಟನೆ ನಡೆಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಕಡೇಹಳ್ಳಿ ಗ್ರಾಮದಲ್ಲಿ ವಾಸಿಸುವಂತಹ ದಲಿತ ಜನಾಂಗದವರಿಗೆ ಸರ್ವೇ ನಂ. 131ರಲ್ಲಿ 2 ಎಕರೆ 15 ಗುಂಟೆ ಜಮೀನಿನಲ್ಲಿ ಖಾಲಿ ನಿವೇಶನಗಳನ್ನು ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯಿಸಿ ಕುಟುಂಬ ಸಹಿತ ಧರಣಿ ನಡೆಸಿದರು.

ಕಡೇಹಳ್ಳಿ ಗ್ರಾಮದ ನಿವೇಶನ ಸಂತ್ರಸ್ತ ಹಾಗೂ ದಲಿತ ಮುಖಂಡ ಕದಿರಪ್ಪ ಮಾತನಾಡಿ, “ನಮ್ಮ ಗ್ರಾಮದಲ್ಲಿ ರಸ್ತೆ ಅಗಲೀಕರಣ ಸಮಯದಲ್ಲಿ ಮನೆಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೇವೆ. ಅನೇಕ ಕುಟುಂಬಗಳಿಗೆ ವಾಸ ಮಾಡಲು ಮನೆಗಳಿಲ್ಲದೇ ಅತಂತ್ರದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಜತೆಗೆ ಬಹುತೇಕ ಮನೆಗಳಲ್ಲಿ ಮಕ್ಕಳ ಮದುವೆ ಮಾಡಬೇಕಾಗಿದೆ. ಸರಿಯಾದ ಮನೆಗಳಿಲ್ಲದ ಕಾರಣ ಆಂತಂಕದಲ್ಲಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.

Advertisements
ಗುಡಿಬಂಡೆ 2

“ನಿವೇಶನ ರಹಿತರಿಗೆ ನಿವೇಶನಗಳನ್ನು ಮಂಜೂರು ಮಾಡಲು ಸದರಿ ಜಮೀನಿನಲ್ಲಿ ನಿವೇಶನಗಳಿಗಾಗಿ ಜಮೀನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಹೆಸರಿಗೆ ಪಹಣಿಯನ್ನು ಮಂಜೂರು ಮಾಡಿ ಅನೇಕ ವರ್ಷಗಳು ಕಳೆದರೂ ಕೂಡಾ ಈವರೆಗೆ ನಿವೇಶನ ಕೊಡುವಲ್ಲಿ ಅಧಿಕಾರಿಗಳು ನಿರ್ಲಕ್ಯ್ಯ ವಹಿಸಿದ್ದಾರೆ” ಎಂದು ಆರೋಪಿಸಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ ಅದಿನಾರಾಯಣಪ್ಪ ಮಾತನಾಡಿ, “ಅಧಿಕಾರಿಗಳು ನಮ್ಮ ಗ್ರಾಮದ ದಲಿತ ಜನಾಂಗದವರಿಗೆ ನಿವೇಶನಗಳನ್ನು ಕೊಡುವಲ್ಲಿ ನಮ್ಮನ್ನು ಯಾಮಾರಿಸುತ್ತಿದ್ದಾರೆ. ಅನೇಕ ವರ್ಷಗಳಿಂದ ನಿವೇಶನಗಳಿಲ್ಲದೆ ಪರದಾಡುತ್ತೀದ್ದೇವೆ. ಈಗ ಜಮೀನು ಗುರುತು ಮಾಡಿದ್ದಾರೆ. ಆದರೂ ನಿವೇಶನಗಳನ್ನು ಕೊಡತ್ತಾರೆಂದು ನೋಡಿದರೆ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ತಡೆಯಾಜ್ಞೆ ಇದೆಯೆಂದು ನಾಮಫಲಕ ಹಾಕಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಸದರಿ ಸರ್ವೇ ನಂಬರ್‌ನಲ್ಲಿ 17 ಎಕರೆಯಷ್ಟು ಜಮೀನು ಇದೆ. ಎಷ್ಟು ಎಕರೆಗೆ ತಡೆಯಾಜ್ಞೆ ಇದೆಯೆಂದು ಅಧಿಕಾರಿಗಳು ಸ್ಪಷ್ಟವಾಗಿ ಹೇಳದೆ ನಮ್ಮನ್ನು ಆತಂಕಗೊಳಿಸಿ ನಿವೇಶನಗಳನ್ನೂ ಹಂಚದೆ ತೊಂದರೆ ಕೊಡುತ್ತೀದ್ದಾರೆ. ಆದ್ದರಿಂದ ನಮಗೆ ನಿವೇಶನಗಳನ್ನು ಮಂಜೂರು ಮಾಡಿಕೊಡುವ ತನಕ ಧರಣಿಯನ್ನು ನಿಲ್ಲಿಸುವುದಿಲ್ಲ, ಮುಂದುವರೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಬಾಗೇಪಲ್ಲಿ | ಚೌಡೇಶ್ವರಿಯ ದೇವಾಲಯದಲ್ಲಿ ವಸ್ತ್ರಾಭರಣ, ವಿಗ್ರಹಗಳ ಕಳವು

ತಹಶೀಲ್ದಾರ್ ಸಿಗ್ಬತ್‌ಉಲ್ಲಾ, ಕಾರ್ಯನಿರ್ವಹಣಾಧಿಕಾರಿ ನಾಗಮಣಿ, ಹಂಪಸಂದ್ರ ಪಿಡಿಒ ನರಸಿಂಹಮೂರ್ತಿ,
ಪೊಲೀಸ್ ಉಪನಿರೀಕ್ಷಕ ಗಣೇಶ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಚರ್ಚೆ ಮಾಡಿದ್ದಾರೆ. ಆದರೆ ನಿವೇಶನಗಳ ಹಕ್ಕುಪತ್ರ ನೀಡುವವರೆಗೂ ಯಾವುದೇ ಕಾರಣಕ್ಕು ಸ್ಥಳದಿಂದ ಕದಲುವುದಿಲ್ಲವೆಂದು ಧರಣಿನಿರತರು ಪಟ್ಟುಹಿಡಿದಿದರು. ಬಳಿಕ ಅಧಿಕಾರಿಗಳು ಯಾವುದೇ ಭರವಸೆ ನೀಡದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಧರಣಿನಿರತರು ಸ್ಥಳದಲ್ಲಿಯೇ ಅಡುಗೆ ಮಾಡಿಕೊಂಡು ಊಟ ತಿಂಡಿಗಳನ್ನು ತಿಂದು ಧರಣಿಯನ್ನು ಮುಂದುವರೆಸಿದ್ದಾರೆ.

ಈ ಸಂದರ್ಭದಲ್ಲಿ ದಸಂಸ ಮುಖಂಡ ಗುಡಿಬಂಡೆ ಗಂಗಪ್ಪ, ಕಡೇಹಳ್ಳಿ ಗ್ರಾಮದ ನಿವೇಶನ ಸಂತ್ರಸ್ತರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X