ಬೀದಿನಾಯಿ ಹಾಗೂ ಹಂದಿಗಳ ಹಾವಳಿ ವಿಪರೀತವಾಗಿದ್ದು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೀದಿನಾಯಿ, ಹಂದಿ ಹಾವಳಿ ನಿಯಂತ್ರಣ ಮಾಡಬೇಕು ಎಂದು ಕರವೇ ಸ್ವಾಭಿಮಾನಿ ಸೇನೆ ಗದಗ ಜಿಲ್ಲಾಧ್ಯಕ್ಷ ಶರಣು ಗೋಡಿ ಒತ್ತಾಯಿಸಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯು ಪುರಸಭೆ ಅಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿ, “ಪಟ್ಟಣದ ಐತಿಹಾಸಿಕ ಸೋಮೇಶ್ವರ ದೇವಸ್ಥಾನ, ದೂದ್‌ಪೀರಾ ದರ್ಗಾದ ಹತ್ತಿರ ಚಿಕನ್ ಮತ್ತು ಮೀನು ಮಾರುಕಟ್ಟೆಗಳಿವೆ. ಇದರಿಂದ ಅಲ್ಲಿ ಅಳಿದುಳಿದ ಮಾಂಸ ಸೇವನೆಗೆ ಬೀದಿ ನಾಯಿಗಳು ಬೀಡು ಬಿಟ್ಟಿರುತ್ತವೆ. ಇವು ಮಕ್ಕಳು ಹಾಗೂ ಮಹಿಳೆಯರನ್ನು ಕಚ್ಚಿ ಗಾಯಗೊಳಿಸಿರುವ ಘಟನೆಗಳು ಪದೇ ಪದೆ ನಡೆಯುತ್ತಿವೆ. ಬಸ್ ನಿಲ್ದಾಣ, ಶಿಗ್ಲಿ ಕ್ರಾಸ್, ಇಟ್ಟಿಗೇರಿ ದಂಡೆಯ ಮೇಲೆ, ಅಂಬೇಡ್ಕರ್ ನಗರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬೀದಿನಾಯಿ ಹಾಗೂ ಹಂದಿಗಳು ಬೀಡು ಬಿಟ್ಟಿವೆ. ಇವುಗಳಿಂದ ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿ ಉಂಟಾಗಿದೆ. ಆದ್ದರಿಂದ ಅವುಗಳನ್ನು ಹಿಡಿದು ಬೇರೆಡೆಗೆ ಸಾಗಾಟ ಮಾಡಬೇಕು” ಎಂದು ಶರಣು ಗೋಡಿ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಪೊಲೀಸರ ಕ್ರೀಡಾಕೂಟ; ಗಮನ ಸೆಳೆದ ಅಡಿಷನಲ್ ಎಸ್‌ಪಿ ಕಾರ್ಯಪ್ಪನವರ ಪೆನಾಲ್ಟಿ ಕಿಕ್
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆ ಕಾರ್ಯಕರ್ತರಾದ ನಾಗೇಶ ಅಮರಾಪೂರ, ಇಸ್ಮಾಯಿಲ್ ಆಡೂರ, ಮೈನು ಮನಿಯಾರ, ಅಸ್ಪಾಕ್ ಬಾಗೋಡಿ, ಯಲ್ಲಪ್ಪ ಹಂಜಗಿ, ಶರಣಪ್ಪ ಬಸಾಪೂರ, ಫೀರ್‌ಸಾಬ್ ರಿತ್ತಿ, ಬಸವರಾಜ ಅಮರಾಪೂರ, ಹಜರತ್ ಅಲಿ ಮನಿಯಾರ್, ಅಮಿನಸಾಬ ಸೇರಿದಂತೆ ಇತರರು ಇದ್ದರು.