ತಮ್ಮ ಮಗಳ ಜೊತೆ ಮಾತನಾಡಬೇಡ ಎಂದಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಮಾರಕಾಸ್ತ್ರಗಳಿಂದ ಹೊಡೆದು ಯುವತಿಯ ತಾಯಿ ಮತ್ತು ಮಗನ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲ್ಲೂಕಿನ ಅಕ್ಕೋಳ ಹೊರವಲಯದ ಬಾಳೋಬಾ ಮಾಳನಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಮಂಗಲ ನಾಯಿಕ ಮತ್ತು ಪ್ರಜ್ವಲ್(18) ಎಂಬುವವರು ಕೊಲೆಯಾಗಿರುವ ವ್ಯಕ್ತಿಗಳಗಾಗಿದ್ದು, ಹುಕ್ಕೇರಿ ತಾಲೂಕಿನ ಕೋಣನಕೇರಿಯ ರವಿ ಖಾನಾಪ್ಪಗೋಳ ಕೊಲೆ ಮಾಡಿದ ಆರೋಪಿ ಎಂದು ಹೇಳಲಾಗಿದೆ.
ನನ್ನ ಪುತ್ರಿಯ ಜತೆ ಮಾತನಾಡಬೇಡ. ನಮ್ಮ ಮನೆಗೆ ಬರಬೇಡ ಎಂದು ಮೃತ ಮಂಗಲ ನಾಯಿಕ, ತಮ್ಮ ಸಂಬಂಧಿ ರವಿ ಖಾನಪ್ಪಗೋಳಗೆ ತಿಳಿಸಿದ್ದರು. ಇದರಿಂದ ಸಿಟ್ಟಾಗಿದ್ದ ರವಿ ತನ್ನ ಗೆಳೆಯರೊಂದಿಗೆ ಬಂದು ಗುಂಪುಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ? ಗುಡಿಬಂಡೆ | ನಿವೇಶನ ಹಂಚಿಕೆಗೆ ಅಧಿಕಾರಿಗಳ ನಿರ್ಲಕ್ಷ್ಯ; ಕಡೇಹಳ್ಳಿ ಗ್ರಾಮ ದಲಿತರ ಪ್ರತಿಭಟನೆ
ಈ ಕುರಿತು ತನಿಖೆ ಮುಂದುವರಿದಿದ್ದು, ಖಾನಾಪೂರ ಸ್ಥಳೀಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.