ಶಿವಮೊಗ್ಗ | ಪೊಲೀಸರ ಕ್ರೀಡಾಕೂಟ; ಗಮನ ಸೆಳೆದ ಅಡಿಷನಲ್ ಎಸ್‌ಪಿ ಕಾರ್ಯಪ್ಪನವರ ಪೆನಾಲ್ಟಿ ಕಿಕ್

Date:

Advertisements

ಯಾವಾಗಲೂ ಬಂದೋ ಬಸ್ತ್, ಕರ್ತವ್ಯದಲ್ಲಿಯೇ ಮುಳುಗಿರುತ್ತಿದ್ದ ಶಿವಮೊಗ್ಗ ಜಿಲ್ಲಾ ಪೊಲೀಸರು ಮೂರು ದಿನ ನಗರದ ಡಿಎಆರ್‌ನಲ್ಲಿ ನಡೆದ ಪೊಲೀಸರ ಕ್ರೀಡಾಕೂಟದಲ್ಲಿ ಮಿಂದೆದ್ದಿದ್ದು, ಶೂಟ್ ಔಟ್ ಸ್ಪರ್ಧೆಯಲ್ಲಿ ಅಡಿಷನಲ್ ಎಸ್‌ಪಿ ಕಾರ್ಯಪ್ಪನವರ ಕಿಕ್ ಗಮನ ಸೆಳೆದಿದೆ.

ಪೊಲೀಸ್ ಕವಾಯಿತು ಮೈದಾನದಲ್ಲಿ ಮೂರು ದಿನಗಳವರೆಗೆ ನಡೆಯುವ ಜಿಲ್ಲಾ ಮಟ್ಟದ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಉಸ್ತುವಾರಿ ಹಾಗೂ ಜಿಪಂ ಸಿಇಒ ಹೇಮಂತ್ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ರಿಲೇ ಓಟ, ಕಬ್ಬಡ್ಡಿ, ಹಗ್ಗಜಗ್ಗಾಟ, ಡಿಸ್ಕಸ್ ತ್ರೋ, ವಾಲಿಬಾಲ್, ಶಾರ್ಟ್ ಪುಟ್, ಲಾಂಗ್ ಜಂಪ್, ಜಾವಲಿನ್ ಥ್ರೋ, ನಡಿಗೆ ಸ್ಪರ್ಧೆಗಳಿಗೆ ಅಧಿಕಾರಿ ಮತ್ತು ಸಿಬ್ಬಂದಿಗಳು ಕ್ರೀಡೆಗಳಿಗೆ ಚಾಲನೆ ನೀಡಿದರು.

Advertisements

ಮೂರು ದಿನಗಳಲ್ಲಿ 73 ಸ್ಪರ್ಧೆಗಳು ನಡೆಯಲಿದ್ದು, 200 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗಿಯಾಗಲಿದ್ದಾರೆ.
800 ಮೀಟರ್ ಓಟದಲ್ಲಿ ನ್ಯೂಟೌನ್‌ನ ರಕ್ಷಿತ್ ಬಿ ಎಂ ಪ್ರಥಮ, ಹಳೇ ನಗರ ಠಾಣೆಯ ಗೌತಮ್ ಬಿ ಜೆ ದ್ವಿತೀಯ, ಡಿಎಆರ್ ದಯಾನಂದ ದ್ವಿತೀಯ ಸ್ಥಾನ ಪಡೆದಿದ್ದಾರೆ. ಲಾಂಗ್ ಜಂಪ್ ಸ್ಪರ್ಧೆಯಲ್ಲಿ ಶಿಕಾರಿಪುರದ ಶರತ್ ಪ್ರಥಮ, ಭದ್ರಾವತಿಯ ಗೌತಮ್ ದ್ವಿತೀಯ, ತೀರ್ಥಹಳ್ಳಿಯ ಗೌತಮ್ ತೃತೀಯ ಸ್ಥಾನ ಪಡೆದಿದ್ದಾರೆ.

ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಸಾಗರ ಉಪವಿಭಾಗದ ನರೇಂದ್ರ ಪ್ರಥಮ, ತೀರ್ಥಹಳ್ಳಿಯ ಗೌತಂ ದ್ವಿತೀಯ, ಶಿವಮೊಗ್ಗ ಡಿಎಆರ್‌ನ ಹರೀಶ್ ತೃತೀಯ, 45 ವರ್ಷದ ಮಹಿಳಾ ವಿಭಾಗದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆಯ ಶ್ವೇತಾ ಪ್ರಥಮ, ರಿಪ್ಪನ್ ಪೇಟೆಯ ತ್ರಿವೇಣಿ ದ್ವಿತೀಯ, ನ್ಯೂಟೌನ್ ನ ದಿವ್ಯಶ್ರೀ ತೃತೀಯ ಸ್ಥಾನ ಪಡೆದಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಯಚೂರು | ಮೈಕ್ರೋ ಫೈನಾನ್ಸ್ ಕಿರುಕುಳ; ಆರು ತಿಂಗಳ ಕಾಲಾವಕಾಶ ನೀಡುವಂತೆ ಪ್ರತಿಭಟನೆ

ಲಾಂಗ್ ಜಂಪ್ ಸ್ಪರ್ಧೆಯಲ್ಲಿ(45 ವರ್ಷದ ಮಹಿಳೆಯರಿಗೆ) ವಿನೋಬ ನಗರ ಠಾಣೆಯ ದೀಪಾ ಪ್ರಥಮ, ಶಿವಮೊಗ್ಗ ಗ್ರಾಮಾಂತರ ಠಾಣೆಯ ಶ್ವೇತಾ ದ್ವಿತೀಯ ಹಾಗೂ ಭದ್ರಾವತಿ ನ್ಯೂಟೌನ್‌ನ ದಿವ್ಯಶ್ರೀ ತೃತೀಯ ಸ್ಥಾನ ಪಡೆದಿದ್ದಾರೆ. ಭೋಜನದ ನಂತರ ಪಂದ್ಯಾವಳಿ ಮುಂದುವರೆದಿತ್ತು.

ಫುಟ್ ಬಾಲ್ ಪೆನಾಲ್ಟಿ ಶೂಟ್ ಔಟ್ ಸ್ಪರ್ಧೆಯಲ್ಲಿ ಶಿವಮೊಗ್ಗದ ಎಸ್‌ಪಿ ಮಿಥುನ್ ಕುಮಾರ್, ಅಡಿಷನಲ್ ಎಸ್‌ಪಿಗಳಾದ ಅನಿಲ್ ಕುಮಾರ್ ಭೂಮರೆಡ್ಡಿ, ಕಾರ್ಯಪ್ಪ, ಡಿವೈಎಸ್‌ಪಿ ಸುರೇಶ್, ಭದ್ರಾವತಿ ಡಿವೈಎಸ್‌ಪಿ ನಾಗರಾಜ್, ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ವಾಮನ ಸುತಾರ ಭಾಗಿಯಾಗಿದ್ದರು. ಶೂಟ್ ಔಟ್ ಸ್ಪರ್ಧೆಯಲ್ಲಿ ಕಾರ್ಯಪ್ಪನವರ ಕಿಕ್ ಗಮನ ಸೆಳೆದಿತ್ತು‌.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

Download Eedina App Android / iOS

X