ಆಹ್ವಾನವಿಲ್ಲದೆ ಮದುವೆ ಊಟಕ್ಕೆ ತೆರಳಿದ್ದ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಮದುವೆ ಮನೆಯವರು ಪ್ರಶ್ನಿಸಿದ್ದು, ಸಿಡಿಮಿಡಿಗೊಂಡ ವಿದ್ಯಾರ್ಥಿಗಳು ಕಲ್ಲು, ಕಚ್ಛಾ ಬಾಂಬ್‌ಗಳನ್ನು ಎಸೆದು ಹಿಂಸಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.
ಲಕ್ನೋದ ಹಸನ್‌ಗಂಜ್‌ನಲ್ಲಿ ಮದುವೆ ಸಮಾರಂಭ ನಡೆದಿದೆ. ಈ ವೇಳೆ, ಸುಮಾರು 150 ವಿದ್ಯಾರ್ಥಿಗಳು ರುಚಿಯಾದ ಊಟ ಸವಿಯಲು ಕಲ್ಯಾಣ ಮಂಟಪಕ್ಕೆ ಬಂದಿದ್ದಾರೆ. ಆಹ್ವಾನವಿಲ್ಲದಿದ್ದರೂ ಬಂದಿದ್ದ ವಿದ್ಯಾರ್ಥಿಗಳನ್ನು ಮದುವೆ ಮನೆಯವರು ಪ್ರಶ್ನಿಸಿದ್ದಾರೆ. ಕೋಪಗೊಂಡ ವಿದ್ಯಾರ್ಥಿಗಳು ಅತಿಥಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ. ಪರಿಸ್ಥಿತಿ ಉಲ್ಬಣಗೊಂಡು ಅತಿಥಿಗಳ ಮೇಲೆ ಕಲ್ಲು ಮತ್ತು ಕಚ್ಚಾ ಬಾಂಬ್‌ಗಳನ್ನು ಎಸೆದು ಹಿಂಸಾಚಾರ ನಡೆಸಿದ್ದಾರೆ.
ಘಟನೆಯಲ್ಲಿ 20 ಮಂದಿ ಅತಿಥಿಗಳಿಗೆ ಗಾಯಗಳಾಗಿದ್ದು, ಅವರಲ್ಲಿ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ಚುನಾವಣಾ ಬಾಂಡ್ | ಆರೋಪಿ, ಅಪರಾಧಿಗಳೇ ಇಲ್ಲದ ಹಗರಣವೇ?
ವಿದ್ಯಾರ್ಥಿಗಳು ಮತ್ತು ಮದುವೆ ಮನೆಯವರು ಪೊಲೀಸ್ ಠಾಣೆಯಲ್ಲಿ ಪರಸ್ಪರರ ವಿರುದ್ಧ ದೂರು ದಾಖಲಿಸಿದ್ದಾರೆ. ಎರಡೂ ಕಡೆಯವರ ದೂರುಗಳ ಆಧಾರದ ಮೇಲೆ ಹಸನ್‌ಗಂಜ್ ಪೊಲೀಸ್ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
In #UttarPradesh's #Lucknow, a wedding celebration at Ramadhin Inter College took a violent turn on Monday evening when a clash erupted between a group of students and the wedding party. The incident involved stone-pelting and the alleged use of crude bombs, prompting a swift… pic.twitter.com/vD7uZaodos
— Hate Detector 🔍 (@HateDetectors) December 3, 2024
ಹಿಂಸಾಚಾರದಿಂದಾಗಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪೊಲೀಸರ ಭದ್ರತೆಯಲ್ಲಿ ಮದುವೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.