ಕೊಪ್ಪಳ ಜಿಲ್ಲೆಯಲ್ಲಿ ದೇವದಾಸಿ ಪದ್ದತಿ ಮತ್ತು ವೇಶ್ಯೆವಾಟಿಕೆ ಈ ಹಿಂದೆಯೂ ಜಾರಿಯಲ್ಲಿತ್ತು. ಈ ದೇವದಾಸಿ ಪದ್ದತಿ ಈಗಲೂ ಜೀವಂತವಿದೆ ಎಂದು ಚಿಂತಕ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಹೇಳುದರು.
ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿ ‘ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್’ ಸಹಯೋಗದಲ್ಲಿ ನಡೆದ “75ನೇ ಸಂವಿಧಾನ ಸಮರ್ಪಣಾ ಅಮೃತ ಮಹೋತ್ಸವ” ಕಾರ್ಯಕ್ರಮದಲ್ಲಿ ಮಾತನಾಡಿದರು.
“ದೇವದಾಸಿ ಪದ್ಧತಿ ತಡೆಗಟ್ಟಲು ಯುವತಿಯರಿಗೆ ಉತ್ತಮ ಶಿಕ್ಷಣ ನೀಡಬೇಕು. ಜತೆಗೆ ಜೀವನವನ್ನು ರೂಪಿಸಬೇಕು. ಮುಗ್ದ ಯುವತಿಯರನ್ನು ದೇವದಾಸಿಯರನ್ನಾಗಿ ಮಾಡುವ ಪದ್ಧತಿ ನಿರ್ಮೂಲನೆಯಾಗಬೇಕು” ಎಂದು ಹೇಳುದರು.
ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ನಿಂಗು ಜಿ ಎಸ್ ಬೆಣಕಲ್ ಪ್ರಸ್ತಾವಿಕ ಮಾತುಗಳನ್ನಾಡಿ, “ಈ ಕಾರ್ಯಕ್ರಮವನ್ನು ನಾವು ಯಾಕೆ ಹಿರೇಸಿಂದೋಗಿ ಗ್ರಾಮದಲ್ಲಿ ಆಯೋಜಿಸಿದ್ದೇವೆಂದರೆ, ಈ ಭಾಗದಲ್ಲಿ ಅಸ್ಪೃಶ್ಯತೆ, ಅಸಮಾನತೆ ಮತ್ತು ಮೂಲ ಸೌಕರ್ಯಗಳ ಜ್ವಲಂತ ಸಮಸ್ಯೆಗಳು ಇನ್ನೂ ಜೀವಂತ ಇವೆ. ಅವುಗಳನ್ನು ತೊಡದುಹಾಕಲು ಶೋಷಿತ ಸಮುದಾಯಗಳಿಗೆ ಕರೆಕೊಡಲು ಎಲ್ಲರೂ ಸೇರಿದ್ದೇವೆ” ಎಂದು ಹೇಳಿದರು.
ವಕೀಲರ ಸಂಘ ಕೊಪ್ಪಳ ಜಿಲ್ಲಾಧ್ಯಕ್ಷ ಎ ವಿ ಕಣವಿ ಮಾತನಾಡಿ, “ಸಂವಿಧಾನ ಎಲ್ಲ ಧರ್ಮದವರಿಗೂ ಮತ್ತು ಎಲ್ಲ ಸಮಾಜದವರಿಗೂ ಹಕ್ಕನ್ನು ಕೊಟ್ಟಿದೆ. ಎಲ್ಲ ಜನರಿಗೂ ಮತ್ತು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯಗಳು ದೊರೆಯಬೇಕಾದರೆ ಹಾಗೂ ಪ್ರತಿಯೊಬ್ಬರು ಸಾಮಾಜಿಕ ನ್ಯಾಯಕ್ಕಾಗಿ ಜಾತ್ಯಾತೀತವಾಗಿ, ಧರ್ಮಾತೀತವಾಗಿ ಮತ್ತು ಪ್ರಾದೇಶಿಕ ಎಲ್ಲೆಯನ್ನು ಮೀರಿ ಸಂಘಟಿತ ಹೋರಾಟ ಮಾಡಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಗದಗ | ಮಹಾ ಪರಿನಿಬ್ಬಾಣ ದಿನ; ದಲಿತಪರ ಸಂಘಟನೆಗಳಿಂದ ಅಂಬೇಡ್ಕರ್ ನೆನಪು
ವಕೀಲರು ರವಿಚಂದ್ರ ಆರ್ ಮಾಟಲದಿನ್ನಿ ಮಾತನಾಡಿ, “ಕರ್ತವ್ಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕಾನೂನಿನ ಸ್ಥಾನ ಪಡೆಯುವುದು ಬಹಳ ಮುಖ್ಯವಾಗಿದೆ. ಸಮರ್ಪಕ ಶಿಕ್ಷಣ ಒದಗಿಸುವುದರ ಮೂಲಕ ಉನ್ನತ ಹುದ್ದೆಗಳನ್ನು ಪಡೆಯಲು ಯುವಕ, ಯುವತಿಯರಿಗೆ ಪ್ರೇರೆಪಿಸಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶೈಲಜಾ ಹಿರೇಮಠ, ಸಲೀಮಾ ಜಾನ್, ಧರ್ಮರಾಜ್ ಗೋನಾಳ, ಸಲೀಮಾ ಜಾನ್ ಮತ್ತು ಮಲ್ಲಿ ಎಸ್ ಸೇರಿದಂತೆ ಬಹುತೇಕರು ಇದ್ದರು.