ದೇಶದಲ್ಲಿ ಇಂದಿಗೂ ಸಮಾಜದಲ್ಲಿ ಅಸಮಾನತೆ ಮುಂದುವರೆದಿದ್ದು, ದಲಿತರ ಮೇಲೆ ದೌರ್ಜನ್ಯ, ಜಾತಿ ತಾರತಮ್ಯ, ಅಸ್ಪೃಶ್ಯ ಆಚರಣೆಗಳು ಜೀವಂತವಾಗಿವೆ. ಇವುಗಳ ನಿರ್ವಹಣೆಗೆ ಸಂಂಘಟಿತರಾಗುವುದು ಅವಶ್ಯವಾಗಿದೆ ಎಂದು ಸಿಐಟಿಯು ರಾಯಚೂರು ಜಿಲ್ಲಾ ಕಾರ್ಯದರ್ಶಿ ಡಿ ಎಸ್ ಶರಣಬಸವ ಕರೆ ನೀಡಿದರು.
ರಾಯಚೂರು ನಗರದ ದಲಿತ ಹಕ್ಕುಗಳ ಸಮಿತಿ ಕಚೇರಿಯಲ್ಲಿ ಆಯೋಜಿಸಿದ್ದ ಬಿ ಆರ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿಬ್ಬಾಣ ದಿನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
“ಸಮಾಜದಲ್ಲಿ ದಲಿತರ ಮೇಲೆ ನಿತ್ಯ ನಡೆಯುತ್ತಿರುವ ಹಲ್ಲೆ, ಕೊಲೆ, ದೌರ್ಜನ್ಯಗಳನ್ನು ತಡೆಯುವುದಕ್ಕೆ ಎಲ್ಲರೂ ಒಗ್ಗಟ್ಟಾಗಿ ಹೋರಾಡುವ ಸಂದರ್ಭ ಬಂದಿದೆ. ಜತೆಗೆ ಅಂಬೇಡ್ಕರ್ ಅವರ ಆಶಯಗಳನ್ನು ಎತ್ತಿಹಿಡಿಯಬೇಕಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯನಗರ | ಪ್ರಸ್ತುತದಲ್ಲಿ ಅಂಬೇಡ್ಕರ್ ತತ್ವ ಅವಶ್ಯ: ಬಸವರಾಜ ಸೂಳಿಬಾವಿ
ಕಾರ್ಯಕ್ರಮದಲ್ಲಿ ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಎರಡು ನಿಮಿಷ ಮೌನಾಚರಣೆ ಮಾಡಿದರು.
ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕಿ ಹೆಚ್ ಪದ್ಮಾ, ಕಾರ್ಯದರ್ಶಿ ಕೆ ಜಿ ವಿರೇಶ, ವರಲಕ್ಷ್ಮೀ, ಗೋಕಾರಮ್ಮ, ಶಾರದ, ಸರೋಜ, ಜಾನಮ್ಮ, ಮಲ್ಲಮ್ಮ, ಇಬ್ರಾಹಿಂ ಸೇರಿದಂತೆ ಬಹುತೇಕರು ಇದ್ದರು.
