ಚಿಕ್ಕಮಗಳೂರು l ಡಿಸೆಂಬರ್ 7ರಂದು ತೇಜಸ್ವಿ ಪ್ರತಿಷ್ಠಾನದಲ್ಲಿ ಪುಸ್ತಕ ಪರಿಷೆ

Date:

Advertisements

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಕೆ ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಡಿಸೆಂಬರ್ 7ರಂದು ಶನಿವಾರ ಪುಸ್ತಕ ಪರಿಷೆ ಕಾರ್ಯಕ್ರಮ ನಡೆಯಲಿದೆ. 

ಶನಿವಾರ ಬೆಳಿಗ್ಗೆ 9.30ಕ್ಕೆ ಪುಸ್ತಕ ಪರಿಷೆ ಪ್ರಾರಂಭವಾಗಲಿದ್ದು, ಕಾರ್ಯಕ್ರಮದಲ್ಲಿ ವಿವಿಧ ಸಂವಾದಗಳು ನಡೆಯಲಿವೆ. ಪುಸ್ತಕ ಪ್ರಕಟಣೆ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಸಂವಾದ ನಡೆಯಲಿದ್ದು, ಲೇಖಕರಿಗೆ ಉಪಯುಕ್ತ ಕಾರ್ಯಕ್ರಮ ಇದಾಗಿದೆ. ರಾಜ್ಯದ ವಿವಿಧ ಪ್ರಕಾಶನ ಸಂಸ್ಥೆಗಳ ಪ್ರಕಾಶಕರು, ಲೇಖಕರು ಸಂವಾದಲ್ಲಿ ವಿಷಯ ಮಂಡನೆ ಮಾಡಲಿದ್ದು, ಪುಸ್ತಕ ಪ್ರಕಟಣೆ ಮಾಡುವ ಆಸಕ್ತಿ ಹೊಂದಿರುವ ಲೇಖಕರಿಗೆ ಉಪಯುಕ್ತ ಕಾರ್ಯಕ್ರಮ ಇದಾಗಿದೆ. ಇದಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣ ಸೇರಿದಂತೆ ಬರಹದ ಹೊಸ ಮಾದ್ಯಮ ಸಾಧ್ಯತೆಗಳ ಬಗ್ಗೆ ಉಪಯುಕ್ತ ಚರ್ಚೆ ನಡೆಯಲಿದೆ. 

ಪ್ರಸ್ತುತ ಸಂದರ್ಭಕ್ಕೆ ಅನ್ವಯವಾಗುವಂತಹ ಬರಹದ ಆಶಯಗಳು, ಹೊಸ ತಲೆಮಾರಿನ ಸಾಹಿತ್ಯಕ ಜವಾಬ್ದಾರಿಯ ಕುರಿತು ಸಂವಾದ ನಡೆಯಲಿದ್ದು, ಸಾಹಿತ್ಯ ವಲಯಕ್ಕೆ ಉಪಯುಕ್ತ ಕಾರ್ಯಕ್ರಮ ಇದಾಗಲಿದೆ. ಪುಸ್ತಕ ಪ್ರಕಟಣೆ ಮಾರುಕಟ್ಟೆ ಕುರಿತ ಸಂವಾದಲ್ಲಿ ಪ್ರಕಾಶಕ ಆ‌ರ್ ಜಿ ನಾಗರಾಜ್, ಹರಿವು ಬುಕ್ಸ್‌ನ ಪ್ರಕಾಶಕ ರತೀಶ್ ಬಿ ಆರ್, ಮಿಂಚುಳ್ಳಿ ಪ್ರಕಾಶನದ ಸೂರ್ಯಕೀರ್ತಿ ಭಾಗವಹಿಸಲಿದ್ದಾರೆ. ಬರಹದ ಹೊಸ ಮಾಧ್ಯಮ ಸಂವಾದದಲ್ಲಿ ಪ್ರತಿಲಿಪಿ ಕನ್ನಡ ವಿಭಾಗದ ನಿರ್ವಾಹಕರಾದ ಅಕ್ಷಯ್ ಬಾಳೆಗೆರೆ, ಚಿತ್ರಕತೆ ಬರಹಗಾರರು, ಪತ್ರಕರ್ತ ವಿಕಾಸ್ ನೇಗಿಲೋಣ, ಮುಂಬೈ ಯುವ ಕನ್ನಡದ ಸಾಂಸ್ಕೃತಿಕ ಸಂಘಟಕ ಕುನಾಲ್ ಕನ್ನಡಿಗ ಅವರು ಭಾಗವಹಿಸಲಿದ್ದಾರೆ. 

Advertisements

ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ವಾಕಿಂಗ್‌ ಹೋಗುತ್ತೇನೆಂದು ಹೇಳಿ ಹೋಗಿದ್ದ ವೈದ್ಯ ನಿಗೂಢ ಸಾವು

ಬರಹದ ಆಶಯ, ಹೊಸ ತಲೆಮಾರಿನ ಸಾಹಿತ್ಯಿಕ ಜವಾಬ್ದಾರಿಗಳು ಕುರಿತ ಸಂವಾದದಲ್ಲಿ ವಿಮರ್ಶಕರಾದ ಡಾ ಎಚ್ ಎಸ್ ಸತ್ಯನಾರಾಯಣ, ಕವಯತ್ರಿ ಭಾಗ್ಯಜ್ಯೋತಿ ಹಿರೇಮಠ, ಲೇಖಕ ಜಯರಾಮಾಚಾರಿ ಭಾಗವಹಿಸಲಿದ್ದಾರೆ.

ಪುಸ್ತಕ ಪರಿಷೆ ಕಾರ್ಯಕ್ರಮದಲ್ಲಿ 100 ಮಂದಿ ಲೇಖಕರಿಗೆ ಮಾತ್ರ ಅವಕಾಶವಿದ್ದು, ₹500 ಪಾವತಿಸಿ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 8277589859, 9663098873 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X