ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಬಿದ್ದ ಪರಿಣಾಮ ಐವರು ಸಾವನ್ನಪ್ಪಿ, ಮತ್ತೋರ್ವ ವ್ಯಕ್ತಿ ಗಾಯಗೊಂಡ ಘಟನೆ ಶನಿವಾರ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಜಲಾಲ್‌ಪುರ ಗ್ರಾಮದಲ್ಲಿ ನಡೆದಿದೆ.
ಮೃತರೆಲ್ಲರನ್ನೂ ಎಲ್ ಬಿ ನಗರ ಆರ್‌ಟಿಸಿ ಕಾಲೋನಿಯವರು ಎಂದು ಹೇಳಲಾಗಿದೆ. ಕೋತಗುಡೆಂನಿಂದ ಪೋಚಂಪಳ್ಳಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ತೆಲಂಗಾಣದಲ್ಲಿ 5.3 ತೀವ್ರತೆಯ ಭೂಕಂಪ
ಮೃತರನ್ನು ವಂಶಿ (23), ದಿಗ್ನೇಶ್ (21), ಹರ್ಷ (21), ಬಾಲು (19) ಮತ್ತು ವಿನಯ್ (21) ಎಂದು ಗುರುತಿಸಲಾಗಿದೆ. ಮಣಿಕಂಠ (21) ಗಾಯಗೊಂಡಿದ್ದಾರೆ.
Five Youth Die as Car Plunges into Jalalpur Lake Near Yadagirigutta
— Sudhakar Udumula (@sudhakarudumula) December 7, 2024
Drunk driving suspected
Tragedy struck on Saturday morning when a car carrying six young men plunged into Jalalpur Lake near Yadagirigutta under the jurisdiction of Pochampally Police Station in the Rachakonda… pic.twitter.com/BuTOINsm3n
ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೋಚಂಪಲ್ಲಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
“ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಗಿದ ಬಳಿಕ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. ಈ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ತಿಳಿಸಿದರು.
